September 11, 2026
Friday, September 11, 2026
spot_img

ಬಿಗ್‌ಬಾಸ್‌ ಮನೆಯಲ್ಲಿ ಗಳಗಳನೆ ಕಣ್ಣೀರಿಟ್ಟ ಸೌಂದರ್ಯಾ ಶೆಟ್ಟಿ, ಕರ್ಮ ಅಂದ್ರೆ ಹೀಗೇನೇ ಎಂದ ಫ್ಯಾನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ಬಾಸ್‌ ಶೋ ಆರಂಭವಾಗಿ ಕೆಲವೇ ದಿನಗಳಾಗಿದ್ದು, ಈಗಾಗಲೇ ಕಂಟೆಸ್ಟೆಂಟ್ಸ್‌ಗಳ ಮಧ್ಯೆ ಜಗಳ, ಮನಸ್ತಾಪ ಆರಂಭವಾಗಿದೆ. ಟಾಸ್ಕ್‌ನಿಂದಾಗಿ ಒಬ್ಬರಿಗೊಬ್ಬರು ಕಿತ್ತಾಡುತ್ತಿದ್ದಾರೆ. ಇದೇ ಟಾಸ್ಕ್ ವಿಚಾರಕ್ಕೆ ಸ್ಪರ್ಧಿ ಆಸಿಯಾ ಫಿರ್ದೋಸ್ ಕಣ್ಣೀರಿಟ್ಟಿದ್ದರು. ಈ ಬಾರಿ ಟಾಸ್ಕ್‌ನಲ್ಲಿ ನಾನು ಆಡುತ್ತೇನೆ, ನಾನ್ಯಾಕೆ ಆಡಬಾರದು ಎಂದು ಉಳಿದ ಸ್ಪರ್ಧಿಗಳೊಂದಿಗೆ ಬೇಸರ ವ್ಯಕ್ತಪಡಿಸಿದ್ದರು.

ಆಸಿಯಾ ವರ್ತನೆ ಮುಂದಿಟ್ಟುಕೊಂಡು ಸೌಂದರ್ಯಾ ಕ್ಯಾಮರಾ ಮುಂದೆ ಮಿಮಿಕ್ರಿ ಮಾಡಿದ್ದರು. ಓವರ್‌ ಆಕ್ಟಿಂಗ್‌ ಮಾಡುತ್ತಾರೆ ಎಂದೆಲ್ಲಾ ಹೇಳಿದ್ದರು. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸೌಂದರ್ಯ ನಿಜವಾಗಿಯೇ ಅಳುವಂತಾಗಿದೆ. ಇದೀಗ ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು ಸೌಂದರ್ಯ ಟ್ರೋಲ್ ಆಗುತ್ತಿದ್ದಾರೆ. ಸೌಂದರ್ಯ ಕಣ್ಣೀರನ್ನ ಕರ್ಮ ಯಾರನ್ನೂ ಸುಮ್ಮನೆ ಬಿಡೋದಿಲ್ಲ ಎಂದು ಹೇಳ್ತಿದ್ದಾರೆ.

ಆಸಿಯಾ ಬಗ್ಗೆ ಅಣುಕಿಸಿದ್ದ ಸೌಂದರ್ಯಗೆ ಅದಾದ ಕೆಲವೇ ಗಂಟೆಗಳಲ್ಲಿ ಮಂಜನ ಮಾತು ತಲೆನೋವು ತಂದಿದೆ ಎಂದು ರಾತ್ರಿ ಕಣ್ಣೀರಿಟ್ಟಿದ್ದರು. ಬಿಕ್ಕಿ ಬಿಕ್ಕಿ ಅತ್ತಿದ್ದರು. ಆಗ ಸ್ವತಃ ಆಸಿಯಾ ಸೇರಿದಂತೆ ಉಳಿದೆಲ್ಲ ಸ್ಪರ್ಧಿಗಳು ಅವರನ್ನು ಸಮಾಧಾನಪಡಿಸಿದ್ದರು. ಗಟ್ಟಿಗಿತ್ತಿ ಎಂಬಂತ್ತಿದ್ದ ಸೌಂದರ್ಯ, ಆಸಿಯಾಗೆ ಅಣುಕಿಸಿದ ಕೆಲವೇ ಗಂಟೆಗಳಲ್ಲಿ ನಿಜವಾಗಿಯೂ ಅಳುವಂತಾಗಿದೆ. ಈ ಸಂಗತಿಯನ್ನು ನೆಟ್ಟಿಗರು ಇನ್‌ಸ್ಟಂಟ್‌ ಕರ್ಮಕ್ಕೆ ಹೋಲಿಕೆ ಮಾಡಿ, ಸೌಂದರ್ಯರನ್ನು ಟ್ರೋಲ್ ಮಾಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !