ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಅಮೀಶಾ ಪಟೇಲ್ ತಾಯಿಯ ವಜ್ರದ ಬಳೆ ಕಳ್ಳತನವಾಗಿದ್ದು, ಮನೆಕೆಲಸದಾಕೆಯನ್ನು ಬಂಧಿಸಲಾಗಿದೆ. ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಬಳೆ ಇದಾಗಿದ್ದು, ಒಂದೂವರೆ ವರ್ಷದ ಹಿಂದೆ ಕೆಲಸಕ್ಕೆ ಸೇರಿದ್ದ ಸೀಮಾ ಘಾಟೆ ಎನ್ನುವ ಮಹಿಳೆಯನ್ನು ಮುಂಬೈನ ಚರ್ಚ್ಗೇಟ್ ಬಳಿ ಅರೆಸ್ಟ್ ಮಾಡಲಾಗಿದೆ.
ಪಾಲ್ಘರ್ ನಿವಾಸಿಯಾದ ಸೀಮಾ ಒಂದೂವರೆ ವರ್ಷದ ಹಿಂದೆ ಅಮೀಶ ತಾಯಿ ಆಶಾ ಮನೆಯಲ್ಲಿ ಕೆಲಸಕ್ಕೆಂದು ಸೇರಿಕೊಂಡಿದ್ದರು. ಸೀಮಾ ಬಳೆ ಕದ್ದಿರುವ ಬಗ್ಗೆ ಆಶಾ ಅವರಿಗೆ ಅನುಮಾನವಿತ್ತು. ಪೊಲೀಸ್ ಕೋರ್ಟ್ ಕಚೇರಿಯನ್ನು ಸುತ್ತುವ ಬದಲು ಒಂದು ಚಾನ್ಸ್ ನೀಡುತ್ತೇನೆ ಬಳೆಯನ್ನು ವಾಪಾಸ್ ತಂದುಕೊಡು ಎಂದು ಹೇಳಿದ್ದರು. ಆದರೆ ಸೀಮಾ ತಾನು ಕದ್ದಿಲ್ಲ ಎಂದಷ್ಟೇ ಹೇಳುತ್ತಿದ್ದರು.

ನಂತರ ಆಶಾ ಪಟೇಲ್ ಮರೀನ್ ಡ್ರೈವ್ ಪೊಲೀಸರ ಬಳಿ ದೂರು ದಾಖಲಿಸಿದ್ದರು. ವಿರಾರ್ನಲ್ಲಿದ್ದ ಸೀಮಾರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಅವರನ್ನು ಸೆಪ್ಟೆಂಬರ್ 15 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ಜನವರಿ 2026 ರಲ್ಲಿ ಮನೆಯಿಂದ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.



