October 31, 2026
Saturday, October 31, 2026
spot_img

ಗಲಭೆ ಸೃಷ್ಟಿಸಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಯತ್ನ: ಆರ್. ಅಶೋಕ್ ವಾಗ್ದಾಳಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಕಾಂಗ್ರೆಸ್ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಕಳೆದುಕೊಂಡಿದ್ದು, ದೇಶದಲ್ಲಿ ಗಲಭೆ, ದೊಂಬಿ ಸೃಷ್ಟಿಸಿ ಅಧಿಕಾರ ಬರಲು ಪ್ರಯತ್ನ ಮಾಡುತ್ತಿದೆ. ಇವರ ಬೋಗಸ್ ಆಂದೋಲನ ವಿರೋಧಿ ಬಿಜೆಪಿ ದೇಶ ಪ್ಯಾಪಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಅಭಿಯಾನ ನಡೆಸಲಿದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ. ಗೆದ್ದಾಗ ಪ್ರಜಾಪ್ರಭುತ್ವ ಸರಿ ಇದೆ ಎನ್ನುತ್ತಾರೆ. ಚುನಾವಣಾ ಆಯೋಗ ನಡೆಸಿದ ಎಸ್‌ಐಆರ್ ವಿರೋಧಿ ಆಂದೋಲನ ಮಾಡುವುದು ಸಾಮಾನ್ಯವಾಗಿದೆ. ದೇಶದಲ್ಲಿ59 ವಿಧಾನ‌ ಪರಿಷತ್ ಕ್ಷೇತ್ರದಲ್ಲಿ ಸೋಲು ಕಂಡಿದ್ದು, ಜನರ ತೀರ್ಪು ಒಪ್ಪಿಕೊಳ್ಳಲು ಆಗುತ್ತಿಲ್ಲ ಎಂದರು.

ಕೇರಳಾ, ಕರ್ನಾಟಕ, ತೆಲಂಗಾಣ ಸೇರಿದಂತೆ ನಾಲ್ಕು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇಲ್ಲಿ ಚುನಾವಣಾ ಆಯೋಗ ಬಗ್ಗೆ ಇವರು ಪ್ರಶ್ನೆ ಮಾಡಲ್ಲ. ಎಲ್ಲಿ ಅಧಿಕಾರಕ್ಕೆ ಬರಲ್ಲ ಅಲ್ಲಿ ಇವರಿಗೆ ಕಷ್ಟ ಎದುರಾಗಿದೆ. ಎಸ್‌ಐಆರ್ ಪ್ರಕ್ರಿಯೆ ನಡೆಸುವ ಮುಂಚೆಯೇ ಕಾಂಗ್ರೆಸ್ ಅದಕ್ಕಿಂತ ಹೆಚ್ಚು ಚುನಾವಣೆಯಲ್ಲಿ ಸೋತಿದೆ. ಚುನಾವಣಾ ಇದಕ್ಕೆ ಆಯೋಗ ಕಾರಣವಲ್ಲ. ನಿಮ್ಮ ರಾಹುಲ್ ಗಾಂಧಿ ಕಾರಣ. ಅವರ ಮುಖ ನೋಡಿ ಯಾರು ಮತ ಹಾಕಲ್ಲ. ಕಾಂಗ್ರೆಸ್ ರಾಹುಲ್ ಗಾಂಧಿ ಬದಲಿಸದಿದ್ದರೆ ಎಲ್ಲಿಯೂ ಅಧಿಕಾರಕ್ಕೆ ಬರಲ್ಲ ಎಂದು ವ್ಯಂಗ್ಯವಾಡಿದರು.

Must Read

Skip to toolbar