September 13, 2026
Sunday, September 13, 2026
spot_img

ಸಿಲ್ವರ್‌ಸ್ಟೋನ್‌ನಲ್ಲಿ ಸ್ಪೆಷಲ್ ಅಪಿಯರೆನ್ಸ್: ಮತ್ತೆ ಒಟ್ಟಿಗೆ ಕಾಣಿಸಿಕೊಂಡ ವಿಜಯ್-ತ್ರಿಷಾ; ಫೋಟೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್ ಅವರ ಒಡನಾಟದ ಚರ್ಚೆಗಳು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋದು ನಮಗೆಲ್ಲ ಗೊತ್ತಿರೋ ವಿಷಯಾನೇ. ಆದ್ರೆ ಇದೀಗ ಮತ್ತೊಮ್ಮೆ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಅದೂ ಕೂಡ ಭಾರತದಲ್ಲಲ್ಲ, ಇಂಗ್ಲೆಂಡ್‌ನ ಸಿಲ್ವರ್‌ಸ್ಟೋನ್ ರೇಸ್ ಟ್ರ್ಯಾಕ್‌ನಲ್ಲಿ.

ರೇಸ್ ಸರ್ಕ್ಯೂಟ್‌ನಲ್ಲಿ ವಿಜಯ್-ತ್ರಿಷಾ

ಹೌದು! ನಟ ಅಜಿತ್ ಕುಮಾರ್ ಭಾಗವಹಿಸಿದ್ದ ‘ಲಿ ಮಾನ್ಸ್’ ಕಾರ್ ರೇಸಿಂಗ್’ ವೀಕ್ಷಿಸಲು ಇವರಿಬ್ಬರು ಒಟ್ಟಿಗೆ ಹಾಜರಿ ಹಾಕಿದ್ದರು. ರೇಸ್ ಸರ್ಕ್ಯೂಟ್‌ನಲ್ಲಿ ವಿಜಯ್ ಹಾಗೂ ತ್ರಿಷಾ ಒಟ್ಟಿಗೆ ನಿಂತು ರೇಸ್ ವೀಕ್ಷಿಸುತ್ತಿರುವ ಫೋಟೋ ಹಾಗೂ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಜೀನ್ಸ್, ಟಿ-ಶರ್ಟ್ ಹಾಗೂ ಮರೂನ್ ಜಾಕೆಟ್ ಧರಿಸಿದ್ದ ತ್ರಿಷಾ ಕಾರಿನಿಂದ ಇಳಿದು ರೇಸ್ ಸರ್ಕ್ಯೂಟ್‌ನಲ್ಲಿದ್ದ ಟೆಂಟ್‌ನತ್ತ ಹೋಗುತ್ತಿರುವ ವಿಡಿಯೋ ಕೂಡ ಭರ್ಜರಿಯಾಗಿ ವೈರಲ್ ಆಗುತ್ತಿದೆ.

ನಟಿ ರಾಧಿಕಾ ಶರತ್‌ಕುಮಾರ್ ಭೇಟಿ

ಸಿಲ್ವರ್‌ಸ್ಟೋನ್‌ಗೆ ತೆರಳುವ ಮುನ್ನ ತ್ರಿಷಾ ಲಂಡನ್‌ನಲ್ಲಿ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಬಳಿಕ ಇಬ್ಬರೂ ಅಜಿತ್ ಅವರ ರೇಸ್ ವೀಕ್ಷಿಸಲು ಸಿಲ್ವರ್‌ಸ್ಟೋನ್‌ಗೆ ತೆರಳಿದ್ದರು.

ವಿಜಯ್ ಹಾಗೂ ತ್ರಿಷಾ ಆಗಾಗ್ಗೆ ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರೋದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿಯೇ ಚರ್ಚೆಯಾಗುತ್ತಿದ್ದು, ವಿಜಯ್ ವೈಯಕ್ತಿಕ ಜೀವನದ ಕುರಿತು ಹರಿದಾಡುತ್ತಿರುವ ಊಹಾಪೋಹಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !