September 13, 2026
Sunday, September 13, 2026
spot_img

‘ರಾಕಾ’ ಮುಗಿದ್ಮೇಲೆ AA24 ಫಿಕ್ಸ್? ಐಕಾನಿಕ್ ಸ್ಟಾರ್ ಜೊತೆ ‘ಮಿನ್ನಲ್ ಮುರಳಿ’ ಡೈರೆಕ್ಟರ್ ಸೀಕ್ರೆಟ್ ಮೀಟಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಸದ್ಯಕ್ಕೆ ಅಟ್ಲಿ ಜೊತೆ ‘ರಾಕಾ’ ಅನ್ನೋ ದೊಡ್ಡ ಬಜೆಟ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಲೋಕೇಶ್ ಕನಗರಾಜ್ ಸಿನಿಮಾ ಕೂಡ ಲೈನ್‌ಅಪ್‌ನಲ್ಲಿದೆ. ಇದನ್ನೆಲ್ಲಾ ನೋಡಿ ಫ್ಯಾನ್ಸ್ ಫುಲ್ ಖುಷಿಯಲ್ಲಿದ್ದಾಗಲೇ, ಈಗ ಮತ್ತೊಂದು ಬಿಗ್ ಅಪ್ಡೇಟ್ ಹೊರಬಿದ್ದಿದೆ.

ಅಲ್ಲು ಅರ್ಜುನ್ ಅವರ 24ನೇ ಸಿನಿಮಾ (AA24) ಮಲಯಾಳಂನ ಸೂಪರ್ ಹಿಟ್ ‘ಮಿನ್ನಲ್ ಮುರಳಿ’ ಡೈರೆಕ್ಟರ್ ಬಾಸಿಲ್ ಜೋಸೆಫ್ ಜೊತೆ ಇರಬಹುದು ಅನ್ನೋ ಮಾತು ಸೋಶಿಯಲ್ ಮೀಡಿಯಾದಲ್ಲೂ ಕೇಳಿಬರುತ್ತಿದೆ.

ಇತ್ತೀಚೆಗೆ ಮುಂಬೈನಲ್ಲಿ ಅಲ್ಲು ಅರ್ಜುನ್ ಜೊತೆ ಬಾಸಿಲ್ ಜೋಸೆಫ್ ಸೀಕ್ರೆಟ್ ಮೀಟಿಂಗ್ ಮಾಡಿದ್ದಾರೆ. ಈ ಇಬ್ಬರೂ ಭೇಟಿಯಾಗಿದ್ದಾರೆ ಅನ್ನೋದಕ್ಕೆ ‘ಮಿನ್ನಲ್ ಮುರಳಿ’ ಸಿನಿಮಾದ ರೈಟರ್ ಅರುಣ್ ಅನಿರುದ್ಧನ್ ಸೋಷಿಯಲ್ ಮೀಡಿಯಾದಲ್ಲಿ ಹಾಕಿರೋ ಫೋಟೋಗಳೇ ಸಾಕ್ಷಿ. ಅಲ್ಲು ಅರ್ಜುನ್ ಅವರ ಫೇಮಸ್ ‘666’ ನಂಬರ್ ಪ್ಲೇಟ್ ಕಾರು ಮತ್ತು ಹಿನ್ನೆಲೆಯಲ್ಲಿ ‘ಪುಷ್ಪ’ ಮ್ಯೂಸಿಕ್ ಹಾಕಿ “IYKYK” ಎಂದು ಶೀರ್ಷಿಕೆ ಕೊಟ್ಟು ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

ಈ ಹಿಂದೆ ಬಾಸಿಲ್ ಜೋಸೆಫ್ ಅಲ್ಲು ಅರ್ಜುನ್ ಜೊತೆ ‘ಶಕ್ತಿಮಾನ್’ ಮಾಡ್ತಾರೆ ಅನ್ನೋ ಟಾಕ್ ಇತ್ತು, ಆದ್ರೆ ರೈಟರ್ ಅರುಣ್ ಅದನ್ನ ಕ್ಲಿಯರ್ ಮಾಡಿ, “ನಾವು ಶಕ್ತಿಮಾನ್ ಕಥೆ ಮಾಡ್ತಿಲ್ಲ, ಇದೊಂದು ಡಿಫರೆಂಟ್ ಪ್ರಾಜೆಕ್ಟ್” ಎಂದು ಸ್ಪಷ್ಟಪಡಿಸಿದ್ದಾರೆ.

ಅಟ್ಲಿ ಮತ್ತು ಲೋಕೇಶ್ ಕನಗರಾಜ್ ಸಿನಿಮಾಗಳ ಶೂಟಿಂಗ್ ಮುಗಿದ ಮೇಲೆಯೇ ಈ ಪ್ರಾಜೆಕ್ಟ್ ಸೆಟ್ ಏರಲಿದೆ. ಅಧಿಕೃತ ಅನೌನ್ಸ್‌ಮೆಂಟ್ ಒಂದೇ ಬಾಕಿ ಇದ್ದು, ಬಾಸಿಲ್ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್ ಮಾಸ್ ಅಭಿಮಾನಿಗಳಿಗೆ ಇಷ್ಟ ಆಗೋದಂತು ಖಂಡಿತ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !