ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಹೊಸ ಸಿನಿಮಾ ‘ರಣಬಾಲಿ’ ರಿಲೀಸ್ಗೆ ಡೇಟ್ ಫಿಕ್ಸ್ ಆಗಿದೆ. ಈ ಸಿನಿಮಾ ಇದೇ ಅಕ್ಟೋಬರ್ 16, 2026ಕ್ಕೆ ಚಿತ್ರಮಂದಿರಗಳಲ್ಲಿ ಧಮಾಕಾ ಮಾಡಲು ರೆಡಿಯಾಗಿದೆ.
ಈಗಾಗಲೇ ಚಿತ್ರದ ಹೀರೋಯಿನ್ ರಶ್ಮಿಕಾ ತಮ್ಮ ಭಾಗದ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ಡೈರೆಕ್ಟರ್ ರಾಹುಲ್ ಸಾಂಕ್ರಿತ್ಯನ್ ಹಾಗೂ ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರಿಗೆ ಪ್ರೀತಿಯಿಂದ ಸೆಂಡ್ ಆಫ್ ಕೊಟ್ಟಿದ್ದಾರೆ. ಶೂಟಿಂಗ್ ಮುಗಿದ ಖುಷಿಯಲ್ಲಿ ಟೀಮ್ ಒಂದು ಶಾರ್ಟ್ ವೀಡಿಯೋ ಶೇರ್ ಮಾಡಿದ್ದು, ಅದರಲ್ಲಿ ರಶ್ಮಿಕಾ ಗರ್ಭಿಣಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ “ಎಂದಯ್ಯ ಸ್ವಾಮಿ” ಸಾಂಗ್ ಕೂಡ ಶೀಘ್ರದಲ್ಲೇ ರಿಲೀಸ್ ಆಗಲಿದೆ.
ಬ್ರಿಟಿಷರ ವಿರುದ್ಧ ಹೋರಾಡುವ ಸಿಂಗನಮಲ ಬೊಬ್ಬಿಲಿ ರಣಬಾಲಿ ಎಂಬ ಖಡಕ್ ಯೋಧನ ಕಥೆ ಇದಾಗಿದೆ. 1800ರ ದಶಕದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ‘ದಿ ಮಮ್ಮಿ’ ಸಿನಿಮಾ ಖ್ಯಾತಿಯ ಆರ್ನಾಲ್ಡ್ ವೋಸ್ಲೂ ಮೇನ್ ವಿಲನ್ ಆಗಿ ಅಬ್ಬರಿಸಿದ್ದಾರೆ.
ಈ ಸಿನಿಮಾ ಸೆಪ್ಟೆಂಬರ್ 11ಕ್ಕೇ ಬರಬೇಕಿತ್ತು. ಆದರೆ ರಶ್ಮಿಕಾ ಅವರಿಗೆ ಬೇರೊಂದು ಶೂಟಿಂಗ್ ವೇಳೆ ಏಟಾಗಿದ್ದರಿಂದ ಶೂಟಿಂಗ್ ಕೊಂಚ ಲೇಟ್ ಆಯ್ತು. ಹೀಗಾಗಿ ಈಗ ಅಕ್ಟೋಬರ್ 16ಕ್ಕೆ ಡೇಟ್ ಶಿಫ್ಟ್ ಆಗಿದೆ. ವಿಜಯ್-ರಶ್ಮಿಕಾ ಜೋಡಿಯ ಈ ಹೊಸ ಅವತಾರ ಬೆಳ್ಳಿಪರದೆ ಮೇಲೆ ಮ್ಯಾಜಿಕ್ ಮಾಡೋದಂತು ಪಕ್ಕಾ ಎನ್ನಲಾಗುತ್ತಿದೆ.



