ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಅಂಗಳದಲ್ಲಿ ಈಗ ಕರೀನಾ ಕಪೂರ್ ಮತ್ತು ಸೈಫ್ ಆಲಿ ಖಾನ್ ಅವರ ಮುದ್ದಾದ ಮಗ ‘ಜೆಹ್’ ಮಾಡಿರೋ ಕ್ಯೂಟ್ ಕೆಲಸವೇ ಭಾರಿ ಸೌಂಡ್ ಮಾಡ್ತಿದೆ. ಗಣೇಶ ಚತುರ್ಥಿ ಅಂದ್ಮೇಲೆ ಪ್ರತಿಯೊಬ್ಬರ ಮನೆಯಲ್ಲೂ ಹಬ್ಬದ ಸಂಭ್ರಮ ಜೋರಾಗಿರುತ್ತೆ. ಆದರೆ ಈ ಬಾರಿ ಕರೀನಾ ಕಪೂರ್ ಮನೆಯಲ್ಲಿ ನಡೆದ ಗಣಪತಿ ಹಬ್ಬ ಮಾತ್ರ ಒಂಥರಾ ಗ್ರ್ಯಾಂಡ್ ಮತ್ತೆ ತೀರಾ ಸ್ಪೆಷಲ್ ಆಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಕರೀನಾ ಕಪೂರ್ ಹಂಚಿಕೊಂಡಿರೋ ಒಂದು ಫೋಟೋ ಈಗ ಎಲ್ಲರ ಮನಸ್ಸು ಗೆಲ್ಲುತ್ತಿದೆ. ಅಷ್ಟಕ್ಕೂ ಅಲ್ಲೇನಾಯ್ತು ಅಂದ್ರೆ, ಹಬ್ಬದ ಪ್ರಯುಕ್ತ ಸೈಫ್ ಆಲಿ ಖಾನ್ ಮಣ್ಣಿನಿಂದ ಪುಟ್ಟ ಗಣಪತಿ ಮೂರ್ತಿ ಮಾಡೋಕೆ ಕೂತಿದ್ದರು. ಸೈಫ್ ಮೂರ್ತಿ ಮಾಡ್ತಿದ್ದಾರೆ ಅಂದುಕೊಳ್ಳುವಷ್ಟರಲ್ಲಿ, ಕರೀನಾ ಮೇಡಂ ಅಸಲಿ ಸತ್ಯ ಹೊರಹಾಕಿದ್ದಾರೆ. ಅದು ಸೈಫ್ ಅಷ್ಟೇ ಅಲ್ಲ, ಅವರ ಐದು ವರ್ಷದ ಮುದ್ದಾದ ಮಗ ಜಹಾಂಗೀರ್ ಅಲಿ ಖಾನ್ (ಜೆಹ್) ತನ್ನ ಪುಟ್ಟ ಕೈಗಳಿಂದ ತಂದೆಯ ಜೊತೆ ಸೇರಿ ಆ ಮುದ್ದಾದ ಮಣ್ಣಿನ ಗಣಪತಿಯನ್ನು ರೆಡಿ ಮಾಡಿದ್ದಾನೆ. “ನಮ್ಮ ಜೆಹ್ ಬಾಬಾ ಮಾಡಿರೋ ಗಣಪತಿ ಇದು. ಎಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು” ಎಂದು ಕರೀನಾ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡು ಅಭಿಮಾನಿಗಳಿಗೆ ಹಬ್ಬದ ವಿಶ್ ಮಾಡಿದ್ದಾರೆ.

ಜೆಹ್ ನೋಡೋಕೆ ಸೇಮ್ ಟು ಸೇಮ್ ಅಮ್ಮ ಕರೀನಾ ಥರಾನೇ ಇದ್ದಾನಂತೆ. ಆದರೆ ತುಂಟತನ ಮಾತ್ರ ಪಕ್ಕಾ ಅಪ್ಪ ಸೈಫ್ ಆಲಿ ಖಾನ್ ಅವರದ್ದೇ ಅಂತೆ, ಈ ಮಾತನ್ನು ಸ್ವತಃ ಕರೀನಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. “ದೊಡ್ಡ ಮಗ ತೈಮೂರ್ಗೆ ಅವರ ಅಪ್ಪನ ಹಾಗೆ ಹ್ಯೂಮರ್ ಸೆನ್ಸ್ ಇದೆ, ಆದರೆ ಕ್ಯಾಮೆರಾ ಮುಂದೆ ಬರೋಕೆ ಸ್ವಲ್ಪ ನಾಚಿಕೆ. ಸೈಫ್ ತರಾನೇ ರಿಸರ್ವ್ಡ್. ಆದರೆ ಜೆಹ್ ಹಾಗಲ್ಲ, ನೋಡೋಕೆ ನನ್ನ ತರ ಇದ್ದರೂ ಸಿಕ್ಕಾಪಟ್ಟೆ ಆಕ್ಟೀವ್ ಮತ್ತು ತುಂಟ. ಆ ತುಂಟತನ ಸೈಫ್ನಿಂದಲೇ ಬಂದಿದ್ದು” ಎಂದು ಕರೀನಾ ಮಗನ ಬಗ್ಗೆ ಹೆಮ್ಮೆಯಿಂದ ಹೇಳ್ತಾರೆ.
ಇತ್ತ ಅಪ್ಪ ಸೈಫ್ ಆಲಿ ಖಾನ್ ಕೂಡ ಮಗನ ಬಗ್ಗೆ ಮುದ್ದಾಗಿ ಮಾತನಾಡಿದ್ದಾರೆ. “ಜೆಹ್ ಪಕ್ಕಾ ಅಮ್ಮನ ಕೂಸು. ಅವನಿಗೆ ಅಮ್ಮ ಅಂದ್ರೆ ಪ್ರಾಣ. ಮನೆಯಲ್ಲಿ ಈ ತರ ಪುಟ್ಟ ಮಗು ಓಡಾಡಿಕೊಂಡಿದ್ರೆ ಆ ಖುಷಿಯೇ ಬೇರೆ. ಕರೀನಾ ಮತ್ತು ಜೆಹ್ ನಡುವಿನ ಆ ಬಾಂಡಿಂಗ್ ನೋಡೋದಕ್ಕೆ ತುಂಬಾ ಮುದ್ದಾಗಿರುತ್ತೆ” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಬಾಲಿವುಡ್ನ ಬೇಬೋ ಮನೆಯಲ್ಲಿ ಜೆಹ್ ಮಾಡಿದ ಮಣ್ಣಿನ ಗಣಪತಿ ಸಖತ್ ವೈರಲ್ ಆಗಿದೆ.



