September 15, 2026
Tuesday, September 15, 2026
spot_img

ಪ್ರಜ್ವಲ್‌ ಪ್ರಕರಣದ ನೆಪದಲ್ಲಿ ಹೊಸ ಕತೆ ಕಟ್ಟುತ್ತಿದ್ದಾರೆ: ಸಿಎಂ ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕೀಯದಲ್ಲಿ ಬಿಡದಿ, ಕೆಪಿಎಸ್‌ಸಿ ಹಾಗೂ ನೈಸ್‌ ವಿಚಾರಗಳು ಮತ್ತೆ ಚರ್ಚೆಗೆ ಬರುತ್ತಿರುವ ಬೆನ್ನಲ್ಲೇ ಪ್ರಜ್ವಲ್‌ ರೇವಣ್ಣ ಪ್ರಕರಣದ ವಿಚಾರವೂ ಮುನ್ನೆಲೆಗೆ ಬರುತ್ತಿದೆ. ಜೈಲಿನಲ್ಲಿ ಪ್ರಜ್ವಲ್‌ ಬಳಿ ಮೊಬೈಲ್‌ ಫೋನ್‌ ಹಾಗೂ ಪೆನ್‌ಡ್ರೈವ್‌ ಸಿಕ್ಕಿದೆ ಅನ್ನೋ ವಿಚಾರದ ಚರ್ಚೆ ನಡುವೆಯೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷದಿಂದ ಜೈಲಿನಲ್ಲಿರುವ ಪ್ರಜ್ವಲ್‌ ಪ್ರಕರಣವನ್ನು ಈಗ ಮತ್ತೆ ಮುನ್ನೆಲೆಗೆ ತಂದು ಹೊಸ ಕತೆ ಕಟ್ಟಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜೈಲಿನಲ್ಲಿರುವ ವ್ಯಕ್ತಿಯ ಬಳಿ ಮೊಬೈಲ್‌ ಹಾಗೂ ಅಶ್ಲೀಲ ವಿಡಿಯೋಗಳು ಹೇಗೆ ಬಂದವು ಅನ್ನೋದನ್ನು ಸರ್ಕಾರ ಸ್ಪಷ್ಟ ಉತ್ತರ ಕೊಡ್ಬೇಕು ಎಂದು ಹೇಳಿದರು.

ಇದನ್ನೂ ಓದಿ:

ಬಿಡದಿ ಹಾಗೂ ನೈಸ್‌ ಯೋಜನೆಗಳಿಗೆ ಸಂಬಂಧಿಸಿದ ವಿಚಾರ ಬಂದಾಗ ದೇವೇಗೌಡರ ಕುಟುಂಬದವರ ದ್ವನಿ ಮುಚ್ಚಿಸೋಕೆ ಪ್ರಜ್ವಲ್‌ ಪ್ರಕರಣವನ್ನು ಮುನ್ನೆಲೆಗೆ ತರುತ್ತಿರ ಎಂದು ಕುಮಾರಸ್ವಾಮಿ ಆರೋಪಿಸಿದರು..

ಪ್ರಜ್ವಲ್‌ ಪ್ರಕರಣದ ಹೊಸ ಬೆಳವಣಿಗೆಗಳ ಸುತ್ತ ರಾಜಕೀಯ ಆರೋಪ–ಪ್ರತ್ಯಾರೋಪಗಳು ತೀವ್ರಗೊಂಡಿದ್ದು, ಜೈಲಿನೊಳಗೆ ಮೊಬೈಲ್‌ ಹಾಗೂ ಇತರೆ ವಸ್ತುಗಳು ಹೇಗೆ ತಲುಪಿದವು ಎಂಬ ಪ್ರಶ್ನೆ ಇದೀಗ ರಾಜಕೀಯ ಚರ್ಚೆಯ ಕೇಂದ್ರವಾಗಿದೆ. ಈ ವಿಚಾರದ ತನಿಖೆ ಮುಂದಿನ ಬೆಳವಣಿಗೆಗಳಿಗೆ ಸ್ಪಷ್ಟತೆ ನೀಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !