ಹೊಸದಿಗಂತ ಡಿಜಿಟಲ್ ಡೆಸ್ಕ್:
‘ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೈಗೆ ಮತ್ತೊಂದು ಬಿಗ್ ಪ್ರಾಜೆಕ್ಟ್ ಸಿಕ್ಕಿದೆ. ಭಾರತೀಯ ಸಂಗೀತ ಲೋಕದ ಗಾನಕೋಕಿಲೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್ನಲ್ಲಿ ರಶ್ಮಿಕಾ ಅವರೇ ನಟಿಸ್ತಾರೆ ಎಂದು ಆಫಿಷಿಯಲ್ ಆಗಿ ಖಾತ್ರಿ ಆಗಿದೆ. ಇಷ್ಟು ದಿನ ಗಾಸಿಪ್ ಅನ್ಕೊಂಡಿದ್ದ ಸುದ್ದಿ ಈಗ ಪಕ್ಕಾ ಆಗಿದೆ.
ಈ ಸಿನಿಮಾವನ್ನ ‘ಜರ್ಸಿ’ ಮತ್ತು ‘ಕಿಂಗ್ಡಮ್’ ಖ್ಯಾತಿಯ ಗೌತಮ್ ತಿನ್ನನೂರಿ ಡೈರೆಕ್ಟ್ ಮಾಡ್ತಿದ್ದಾರೆ. ಇನ್ನು ಮ್ಯೂಸಿಕ್ ವಿಚಾರಕ್ಕ ಬಂದ್ರೆ, ಸದ್ಯ ಸೌತ್ನಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಸೆಪ್ಟೆಂಬರ್ 16, 2026ರಂದು ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮದಿನದ ಶುಭ ಸಂದರ್ಭದಲ್ಲಿ ಸಿನಿಮಾದ ಆಫಿಷಿಯಲ್ ಲಾಂಚ್ ಇಟ್ಟುಕೊಂಡಿದ್ದಾರೆ. ಈ ಗ್ರಾಂಡ್ ಈವೆಂಟ್ಗೆ ಕಮಲ್ ಹಾಸನ್ ಅವರೇ ಮುಖ್ಯ ಅತಿಥಿಯಾಗಿ ಬರ್ತಿರೋದು ಈ ಸಿನಿಮಾದ ಕ್ರೇಜ್ ಅನ್ನು ಇನ್ನಷ್ಟು ಹೆಚ್ಚಿಸಿದೆ.
ಎಂ.ಎಸ್. ಸುಬ್ಬುಲಕ್ಷ್ಮಿ ಅಂದ್ರೆ ಕೇವಲ ಹೆಸರಲ್ಲ, ಅದೊಂದು ಅದ್ಭುತ ಶಕ್ತಿ. ಸೆಪ್ಟೆಂಬರ್ 16, 1916ರಲ್ಲಿ ತಮಿಳುನಾಡಿನ ಮಧುರೈನಲ್ಲಿ ಹುಟ್ಟಿದ ಇವರು, ಚಿಕ್ಕ ವಯಸ್ಸಿನಲ್ಲೇ ಸಂಗೀತ ಕಲಿಯಲು ಶುರುಮಾಡಿದ್ರು. ತಾಯಿ ಷಣ್ಮುಖವಡಿವು ಅಮ್ಮಾಳ್ ವೀಣೆ ನುಡಿಸೋದ್ರಲ್ಲಿ ಮಾಸ್ಟರ್, ಇನ್ನು ಅಜ್ಜಿ ವಯಲಿನ್ ವಿದ್ವಾಂಸೆ. ಹೀಗಾಗಿ ಸಂಗೀತ ಇವರ ರಕ್ತದಲ್ಲೇ ಹರಿದು ಬಂದಿತ್ತು. ಕೇವಲ 11ನೇ ವಯಸ್ಸಿನಲ್ಲೇ ಅಂದ್ರೆ 1927ರಲ್ಲೇ ತಿರುಚಿರಾಪಳ್ಳಿಯ ರಾಕ್ಫೋರ್ಟ್ ಟೆಂಪಲ್ನಲ್ಲಿ ಮೊದಲ ಬಾರಿ ಸ್ಟೇಜ್ ಹತ್ತಿ ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ರು.
ಇಂಥ ದೊಡ್ಡ ಗಾನಕೋಕಿಲೆಯ ಪಾತ್ರ ಮಾಡೋದು ಅಷ್ಟು ಸುಲಭವಲ್ಲ, ಆದರೆ ರಶ್ಮಿಕಾ ಮಂದಣ್ಣಗೆ ಇದು ತಮ್ಮ ಕೆರಿಯರ್ನಲ್ಲೇ ಮೈಲಿಗಲ್ಲಿನ ಪಾತ್ರವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಭಿಮಾನಿಗಳಂತೂ ಈ ಬಯೋಪಿಕ್ ನೋಡೋಕೆ ಕಾದು ಕೂತಿದ್ದಾರೆ.



