ಹೊಸದಿಗಂತ ವರದಿ ವಿಜಯಪುರ:
ಸಚಿವ ಎಂ.ಬಿ. ಪಾಟೀಲ ಧಮ್ಕಿಗೆ ಅಂಜಿ ನಾನು ರಾಜಕಾರಣ ಮಾಡಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಂ.ಬಿ. ಪಾಟೀಲ ವಿರುದ್ದ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಬಿ. ಪಾಟೀಲ ಅವರು ಏನು ಧಮ್ಕಿ ಕೊಡತಾರೆ ಅದಕ್ಕೆ ನಾನೇನು ಅಂಜಲ್ಲ. ಎಂ.ಬಿ. ಪಾಟೀಲ ಹಾಗೂ ನನ್ನ ಮದ್ಯೆ ಹೊಂದಾಣಿಕೆ ಇಲ್ಲ ಎಂದರು. ಮುಂದಿಲ ಸಲ ಸೋಲಿಸತೀನಿ ಅಂದಿದ್ದಾರೆ. ವಿಜಯಪುರ ಜನರೇನು ಹುಚ್ಚರಿಲ್ಲ. 10 ಎಂ.ಬಿ. ಪಾಟೀಲ ಬಂದು ಏನು ಮಾಡಿದ್ರು ಯಾರು ವಿಜಯಪುರದ ಜನ ಮಾತು ಕೇಳಲ್ಲ ಎಂದರು.
ಯಡಿಯೂರಪ್ಪ ನವರಿಗೆ ಪೆಟ್ರೋಲ್ ಹಾಕಿ ಕಳುಹಿಸಿದ್ದೇ ನಾವು. ಯಡಿಯೂರಪ್ಪ ಅಂಬಾಸೀಡರ್ ಕಾರ್ ನಲ್ಲಿ ಅಡ್ಡಾಡಿಸಿ ವಾಪಸ್ ಶಿಕಾರಿಪುರಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದೇವು. ನಾವು ಸ್ವಂತ ಹೋರಾಟದಿಂದ ರಾಜಕೀಯಕ್ಕೆ ಬಂದವರು ಯಡಿಯೂರಪ್ಪ ಮುಖ ನೋಡಿ ನಾನು ರಾಜಕೀಯಕ್ಕೆ ಬಂದಿಲ್ಲ ಎಂದರು. ಎಂ ಎಲ್ ಸಿ ಚುನಾವಣೆಯಲ್ಲಿ ಯತ್ನಾಳ ಗೆ ಎಂ ಬಿ ಪಾಟೀಲ ಬೆಂಬಲ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡು ಮತ ಇತ್ತು ಒಂದು ಎಸ್ ಆರ್ ಪಾಟೀಲ್ ಅವರಿಗೆ ಮತ ಹಾಕಿ ಎಂದು ಹೇಳಿದರು ಇನ್ನೊಂದು ಎಲ್ಲಿ ಹಾಕಬೇಕು. ಯತ್ನಾಳ ಗೆ ಹಾಕಿ ಎಂದು ಅವರು ಎಲ್ಲಿ ಹೇಳಿಲ್ಲ ಎಂದರು.
ಬಬಲೇಶ್ವರ ಗಿರಾಕಿ ಹೊಂದಾಣಿಕೆ ಗಿರಾಕಿ ಇದೆ. ಎಂ.ಬಿ. ಪಾಟೀಲ ಅವರ ಕಡೆಯಿಂದ ಏನೂ ಬರುವುದು ಬಂತು. ಅವರ ಹೊಂದಾಣಿಕೆ ಆಗಿದ್ದು ಅಲ್ಲಿ ನನ್ನ ಜೊತೆಯಲ್ಲ. ಎಂ. ಬಿ. ಪಾಟೀಲ ಒಳ್ಳೆಯ ಕೆಲಸ ಮಾಡಿದಾಗ ಹೊಗಳಿದ್ದು ಖರೇ. ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಹೇಗಿರಬೇಕು ಹಾಗೆ ಇದ್ದದ್ದು ಖರೇ ಎಂದರು. ಹಿಂದುಗಳಿಗೆ ಅನ್ಯಾಯ ಆಗಿದ್ದು ಕಾಂಗ್ರೆಸ್ ನಿಂದ, ಕಾಂಗ್ರೆಸ್ ಎಂಬುದು ವಿಷ. ವಿಷದ ಕಂಟಕ ಪಾರ್ಟಿಯಲ್ಲಿ ಎಂ ಬಿ ಪಾಟೀಲ ಇದ್ದಾರೆ ಎಂದರು.
ಸಿದ್ದರಾಮಯ್ಯ ನವರ ಪರವಾಗಿ ಯಾರೂ ನಿಲ್ಲಲಿಲ್ಲ ಎಂದ ನಾನು ಹೇಳಿದ್ದೆ. ಜಮೀರ ಅಹ್ಮದ ಖಾನ್ ಬಿರಿಯಾನ ತಿನ್ನಿಸುತ್ತಿದ್ದ ಅವರ ಪರವಾಗಿ ಸಿದ್ದರಾಮಯ್ಯ ನಿಂತರು. ಸಿದ್ದರಾಮಯ್ಯ ಮುಸ್ಲಿಂ ಪರವಾಗಿ ನಿಂತರು ಆದರೆ ಅವರನ್ನು ಇಳಿಸುವಾಗ ಯಾರಾದರೂ ಅವರ ಪರವಾಗಿ ನಿಂತರಾ ? ಎಂದರು. ಎಲ್ಲಿಯಾದರೂ ಸಿದ್ದರಾಮಯ್ಯ ಪರವಾಗಿ ಹೋರಾಟ ಮಾಡಿದರಾ ಮುಸ್ಲಿಂ ಮರು. ಸಿದ್ದರಾಮಯ್ಯ ಇರುವವರೆಗೆ ಹಾಲು ಮತ ಸಮುದಾಯದ ಮತ ಎಲ್ಲಿ ಹೊಗಲಿಲ್ಲ. ಸಿದ್ದರಾಮಯ್ಯ ತಮ್ಮ ಸಮುದಾಯದ ಪರವಾಗಿ ಕೂಡಾ ಏನೂ ಮಾಡಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಪರವಾಗಿ ಆ ಸಮುದಾಯ ನಿಲ್ಲಲಿಲ್ಲ. ಹಾಲು ಮತ ಸಮುದಾದದವರು ಸಹಿತ ಸಿದ್ದರಾಮಯ್ಯ ಪರವಾಗಿ ಹೋರಾಟ ಮಾಡಲಿಲ್ಲ ಎಂದರು.



