October 9, 2026
Friday, October 9, 2026
spot_img

ಗಣೇಶನನ್ನು ಬೀಳ್ಕೊಡಲು ತಯಾರಾದ ರಾಜಧಾನಿ ಬೆಂಗಳೂರು: 659 ಸಂಚಾರಿ ಟ್ಯಾಂಕರ್‌ಗಳು ರೆಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆಯಷ್ಟೇ ರಾಜ್ಯಾದ್ಯಂತ ಅದ್ಧೂರಿ ಗಣೇಶ ಚತುರ್ಥಿ ಆಚರಣೆ ಮಾಡಲಾಗಿದ್ದು, ಇಂದು, ನಾಳೆ ಗಣೇಶನಿಗೆ ಬೀಳ್ಕೊಡುಗೆ ನೀಡಲಾಗುತ್ತದೆ. ಇದಕ್ಕೆ ಬೆಂಗಳೂರು ಸಜ್ಜಾಗಿದ್ದು, 659 ಸಂಚಾರಿ ಟ್ಯಾಂಕರ್‌ಗಳು ಹಾಗೂ 42 ಶಾಶ್ವತ ಟ್ಯಾಂಕ್‌ಗಳ ಅಳವಡಿಕೆ ಮಾಡಲಾಗಿದೆ. ಇಲ್ಲಿ ಗೌರವ ಹಾಗೂ ಪ್ರೀತಿಯಿಂದ ಗಣೇಶ ದೇವರ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ.

ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಮನೆಯ ಸಮೀಪವೇ ಗಣೇಶ ದೇವರ ವಿಸರ್ಜನೆಗಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ 42 ಶಾಶ್ವತ ವಿಸರ್ಜನಾ ಟ್ಯಾಂಕ್‌ಗಳು ಮತ್ತು 659 ಸಂಚಾರಿ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅಗತ್ಯ ಮಾರ್ಗದರ್ಶನ ನೀಡಲು ಹಾಗೂ ವ್ಯವಸ್ಥೆಗಳ ಉಸ್ತುವಾರಿ ವಹಿಸಲು ನೋಡಲ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ.

ಸಾರ್ವಜನಿಕರು ಮೂರ್ತಿ ವಿಸರ್ಜನಾ ಸ್ಥಳಗಳು, ಮೊಬೈಲ್ ಟ್ಯಾಂಕ್‌ಗಳು, ಏಕಗವಾಕ್ಷಿ ಕೇಂದ್ರಗಳು ಮತ್ತು ಸಂಬಂಧಿತ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಥವಾ ಜಿಬಿಎ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಗಣೇಶ ವಿಸರ್ಜನಾ ಲಿಂಕ್‌ಗೆ ಭೇಟಿ ನೀಡುವ ಮೂಲಕ ಪಡೆಯಬಹುದು.

ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಯಲ್ಲಿ 161 ಮೊಬೈಲ್ ಟ್ಯಾಂಕರ್ಸ್‌ಗಳು ಮತ್ತು 09 ವಿಸರ್ಜನಾ ಟ್ಯಾಂಕ್‌ಗಳನ್ನು ಒದಗಿಸಲಾಗಿದೆ. ಕೇಂದ್ರ ಮಹಾನಗರ ಪಾಲಿಕೆಯಲ್ಲಿ 146 ಮೊಬೈಲ್ ಟ್ಯಾಂಕರ್‌ಗಳು, 01 ವಿಸರ್ಜನಾ ಟ್ಯಾಂಕ್‌ ಅನ್ನು ಇಡಲಾಗಿದೆ.

Must Read