September 16, 2026
Wednesday, September 16, 2026
spot_img

20 ವರುಷದ ಮದುವೆ ಸಂಭ್ರಮ: ಮಕ್ಕಳ ಎದುರಲ್ಲೇ ಮತ್ತೆ ಒಂದಾದ ಸೂರ್ಯ-ಜ್ಯೋತಿಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳ್ಳಿಪರದೆಯ ಮೇಲೆ ಎಷ್ಟೋ ಜೋಡಿಗಳ ಪ್ರೇಮಕಥೆ ನೋಡಿರ್ತೀವಿ. ಆದ್ರೆ ರಿಯಲ್ ಲೈಫ್‌ನಲ್ಲೂ ಅದೇ ಪ್ರೀತಿ, ಗೌರವ, ಕಷ್ಟ-ಸುಖ ಜೊತೆಯಾಗಿ 20 ವರುಷ ಕಾಪಾಡ್ಕೊಂಡು ಬರೋದು ಇದ್ಯಲ್ಲ, ಅದು ನಿಜಕ್ಕೂ ದೊಡ್ಡ ಸಾಹಸ. ಅದನ್ನೇ ಸೌತ್ ಇಂಡಿಯಾದ ಹಾಟ್ & ಕ್ಯೂಟ್ ಕಪಲ್ ಸೂರ್ಯ ಮತ್ತು ಜ್ಯೋತಿಕಾ ನಿಸ್ಸಂದೇಹವಾಗಿ ಪ್ರೂವ್ ಮಾಡಿದ್ದಾರೆ.

ಸೆಪ್ಟೆಂಬರ್ 11, 2006ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, 2026ರ ಸೆಪ್ಟೆಂಬರ್ 11ಕ್ಕೆ 20 ವರ್ಷದ ಮದುವೆ ಸಂಭ್ರಮ ಆಚರಿಸಿಕೊಂಡಿದ್ದಾರೆ. ಆದ್ರೆ ಈ ಆಚರಣೆ ನಾರ್ಮಲ್ ಆಗಿರಲಿಲ್ಲ. ಗಂಡ-ಹೆಂಡ್ತಿ ಇಬ್ರೂ ಮತ್ತೆ ವೈಟ್ ಡ್ರೆಸ್ ಹಾಕ್ಕೊಂಡು, ತಮ್ಮ ಪ್ರೀತಿಯನ್ನ ಮತ್ತೊಮ್ಮೆ ಮದುವೆ ಆಗಿದ್ದಾರೆ.

https://www.instagram.com/reel/DdUFAt2yiyO/?utm_source=ig_web_button_share_sheet

ಈ ಮದುವೆಯ ಅತಿ ದೊಡ್ಡ ಹೈಲೈಟ್ ಅಂದ್ರೆ ಸೂರ್ಯ-ಜ್ಯೋತಿಕಾ ಅವರ ಮಕ್ಕಳು. ಮಗ ದೇವ್ ತನ್ನ ಮುದ್ದಿನ ಅಮ್ಮ ಜ್ಯೋತಿಕಾ ಅವರನ್ನ ಮಂಟಪದ ಕಡೆ ನಡೆಸ್ಕೊಂಡು ಬಂದ್ರೆ, ಮಗಳು ದಿಯಾ ಅಮ್ಮನ ಪಕ್ಕದಲ್ಲೇ ನಿಂತು ‘ಮೇಡ್ ಆಫ್ ಆನರ್’ ಆಗಿ ಕಾರ್ಯಕ್ರಮ ನಿಭಾಯಿಸಿದ್ಲು. ಕುಟುಂಬದವರು ಮತ್ತು ಆಪ್ತರಷ್ಟೇ ಭಾಗವಹಿಸಿದ್ದ ಈ ಕ್ಯೂಟ್ ಇವೆಂಟ್‌ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಈ ಖುಷಿಯ ಸಂದರ್ಭದಲ್ಲಿ ಜ್ಯೋತಿಕಾ ಒಂದು ಭಾವನಾತ್ಮಕ ಮಾತು ಹೇಳಿದ್ದಾರೆ. “ನಮ್ಮದು ಪರ್ಫೆಕ್ಟ್ ಮದುವೆ ಏನಲ್ಲ. ಇದು 20 ವರುಷಗಳ ಪ್ರೀತಿ, ಜಗಳ, ಹೊಂದಾಣಿಕೆ ಮತ್ತು ತ್ಯಾಗಗಳ ಪಯಣ. ಒಬ್ಬರಿಗೋಸ್ಕರ ಇನ್ನೊಬ್ಬರು ಬದಲಾಗಿ, ಬೆಳಕಾಗಿ ನಿಂತಿದ್ದರ ಸಂಭ್ರಮ ಇದು” ಎಂದಿದ್ದಾರೆ. ಅಷ್ಟೇ ಅಲ್ಲ, “ಸೂರ್ಯ ನನಗೆ ಬರಿ ಗಂಡ ಮಾತ್ರ ಅಲ್ಲ, ನನ್ನ ಬೆಸ್ಟ್ ಫ್ರೆಂಡ್, ಗಾಡ್‌ಫಾದರ್, ಗಾಸಿಪ್ ಪಾರ್ಟ್ನರ್ ಮತ್ತೆ ಎಲ್ಲವೂ! ಮುಂದಿನ 20 ವರುಷಗಳ ಈ ಪಯಣ ಹಿಂಗೇ ಇರಲಿ” ಎಂದು ಬ್ಯೂಟಿಫುಲ್ ಆಗಿ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ, ಬಣ್ಣದ ಪ್ರಪಂಚದಲ್ಲಿ ಡಿವೋರ್ಸ್ ಸುದ್ದಿಗಳೇ ಜಾಸ್ತಿ ಕೇಳಿಬರೋ ಈ ಕಾಲದಲ್ಲಿ, ಸೂರ್ಯ-ಜ್ಯೋತಿಕಾ ಅವರ ಈ ಪ್ರೀತಿಯ ಪಯಣ ಕಾಮನ್ ಪೀಪಲ್‌ಗೂ ರಿಯಲ್ ಲೈಫ್ ರೋಲ್ ಮಾಡೆಲ್ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !