ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣೇಶ ಚತುರ್ಥಿ ಬಂತು ಅಂದ್ರೆ ಸಾಕು, ಎಲ್ಲೆಲ್ಲೂ ಹಬ್ಬದ ಸಂಭ್ರಮ, ರಂಗು ರಂಗಿನ ಲೈಟಿಂಗ್ಸ್, ಗಣಪತಿ ಮೂರ್ತಿಗಳದ್ದೇ ಹವಾ. ಈ ಸಲ ಜನರ ಕ್ರಿಯೇಟಿವಿಟಿ ಮಾತ್ರ ನೆಕ್ಸ್ಟ್ ಲೆವೆಲ್‌ನಲ್ಲಿದೆ. ಒಂದು ಕಡೆ ಪಾನಿಪುರಿಯಿಂದ ಮಾಡಿದ ಗಣಪತಿ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗ್ತಿದ್ದರೆ, ಇನ್ನೊಂದೆಡೆ ಮುಂಬೈನ ಪ್ರಸಿದ್ಧ ಗಣಪತಿಗಳ ದರುಶನವನ್ನು ಮನೆಬಾಗಿಲಿಗೇ ತಲುಪಿಸೋ ಡಿಜಿಟಲ್ ಮ್ಯಾಜಿಕ್ ಶುರುವಾಗಿದೆ.

ಪಾನಿಪುರಿಯಿಂದ ತಯಾರಾಯ್ತು 13 ಅಡಿ ಗಣಪ
ನಮ್ಮ ದೇಶದಲ್ಲಿ ಪಾನಿಪುರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಸಂಜೆ ಆದ್ರೆ ಸಾಕು ಪಾನಿಪುರಿ ಗಾಡಿ ಮುಂದೆ ಕ್ಯೂ ನಿಲ್ಲೋ ನಮಗೆ, ಅದೇ ಪಾನಿಪುರಿಯಿಂದ ಗಣಪತಿ ಮೂರ್ತಿ ಮಾಡಿದ್ದಾರೆ ಅಂದ್ರೆ ನಂಬೋಕೆ ಆಗುತ್ತಾ? ಹೌದು, ಪುಣೆಯ ಎಫ್‌ಸಿ ರೋಡ್‌ನಲ್ಲಿರೋ ‘ಗಣೇಶ್ ಭೇಲ್’ ಸೆಂಟರ್ ಮುಂದೆ ಈ ಸಲ ಅಲ್ಟಿಮೇಟ್ ಗಣಪತಿ ವಿರಾಜಮಾನನಾಗಿದ್ದಾನೆ.
ಆರ್ಟಿಸ್ಟ್ ಪ್ರಶಾಂತ್ ಸಾಳುಂಖೆ ಅನ್ನೋ ಕ್ರಿಯೇಟಿವ್ ಮೈಂಡ್ ಹಾಗೂ ಅವರ 810 ಜನರ ಟೀಮ್ ಸೇರಿಕೊಂಡು ಬರೋಬ್ಬರಿ 21,000ಕ್ಕೂ ಹೆಚ್ಚು ಪಾನಿಪುರಿ ಪೂರಿಗಳನ್ನು ಬಳಸಿ, 13 ಅಡಿಯ ಬೃಹತ್ ಗಣೇಶನ ಮೂರ್ತಿಯನ್ನು ನಿರ್ಮಿಸಿದ್ದಾರೆ. ಇದನ್ನು ಮಾಡೋಕೆ ಅವರಿಗೆ ಪೂರ್ತಿ 15 ದಿನ ಬೇಕಾಯಿತಂತೆ.
ವಿಶೇಷ ಅಂದ್ರೆ, ಇದು ಕಂಪ್ಲೀಟ್ಲಿ ಇಕೋ-ಫ್ರೆಂಡ್ಲಿ ಗಣಪತಿ. ಒಳಗಡೆ ಪೇಪರ್ ಮತ್ತು ಬಿದಿರು ಬಳಸಿ ಸ್ಟ್ರಕ್ಚರ್ ಮಾಡಿ, ಮೇಲೆ ಪಾನಿಪುರಿ ಒಡವೆಗಳಂತೆ ಜೋಡಿಸಿದ್ದಾರೆ. ಮಳೆ, ತೇವಾಂಶಕ್ಕೆ ಪಾನಿಪುರಿ ನೆನೆದು ಹಾಳಾಗಬಾರದು ಹಾಗೂ ಮೂರ್ತಿ ಬ್ಯಾಲೆನ್ಸ್ ತಪ್ಪಬಾರದು ಎಂದು ತುಂಬಾನೇ ಕೇರ್ ತಗೊಂಡು ಈ ಕ್ರಿಯೇಟಿವ್ ಗಣಪನನ್ನು ರೆಡಿ ಮಾಡಿದ್ದಾರೆ. ಈಗ ಈ ಪಾನಿಪುರಿ ಗಣಪನನ್ನು ನೋಡೋಕೆ ಜನ ಸಾಲು ಸಾಲಾಗಿ ಹರಿದು ಬರುತ್ತಿದ್ದಾರೆ.

ಮುಂಬೈ ‘ಲಾಲ್‌ಬಾಗ್‌ಚಾ ರಾಜ’ ಈಗ ನಿಮ್ಮ ಫೋನ್‌ನಲ್ಲೇ ನೋಡಿ
ಮತ್ತೊಂದೆಡೆ, ಮುಂಬೈನ ಗಣೇಶೋತ್ಸವದ ಸಂಭ್ರಮವೇ ಬೇರೆ. ಆದರೆ ಪ್ರತಿಯೊಬ್ಬರಿಗೂ ಮುಂಬೈಗೆ ಹೋಗಿ ಅಷ್ಟು ದೊಡ್ಡ ಕ್ಯೂನಲ್ಲಿ ನಿಂತು ಲಾಲ್‌ಬಾಗ್‌ಚಾ ರಾಜನ ದರುಶನ ಮಾಡೋಕೆ ಆಗಲ್ಲ. ಅದಕ್ಕಾಗಿ ‘NH Studioz’ ಸೂಪರ್ ಪ್ಲಾನ್ ಮಾಡಿದೆ.
ದೇಶ-ವಿದೇಶದಲ್ಲಿರೋ ಗಣೇಶನ ಭಕ್ತರಿಗಾಗಿ ಮುಂಬೈನ ಫೇಮಸ್ ಗಣಪತಿ ಪೆಂಡಾಲ್ ಗಳ ಲೈವ್ ಆಪರೇಷನ್ ಶುರು ಮಾಡಿದೆ. FAST ಟಿವಿ ಹಾಗೂ NH Studioz ಯೂಟ್ಯೂಬ್ ಚಾನೆಲ್‌ನಲ್ಲಿ ಮುಂಬೈನ ಪ್ರಸಿದ್ಧ ಗಣಪತಿಗಳ ಲೈವ್ ಆರತಿ, ಮಹಾಪೂಜೆ ಮತ್ತು ದರುಶನವನ್ನು ನೇರ ಪ್ರಸಾರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕೊನೆಯ ದಿನ ನಡೆಯೋ ವಿಜೃಂಭಣೆಯ ವಿಸರ್ಜನೆಯನ್ನೂ ಕೂಡ ಲೈವ್ ಆಗಿ ತೋರಿಸಲಿದ್ದಾರೆ. ಇದರಿಂದ ದೂರದಲ್ಲೇ ಇರೋ ಭಕ್ತರು ಮನೆಯಲ್ಲಿ ಕುಳಿತೇ ಡಿಜಿಟಲ್ ಆಗಿ ಬಪ್ಪನ ಆಶೀರ್ವಾದ ಪಡೆಯಬಹುದು.
ಒಟ್ಟಿನಲ್ಲಿ ಈ ಸಲದ ಗಣೇಶೋತ್ಸವದಲ್ಲಿ ಕ್ರಿಯೇಟಿವಿಟಿ ಮತ್ತು ಟೆಕ್ನಾಲಜಿ ಎರಡೂ ಮಿಕ್ಸ್ ಆಗಿ, ಹಬ್ಬದ ಜೋಶ್ ಅನ್ನು ಡಬಲ್ ಮಾಡಿವೆ.



