ದಿನಾ ಬೆಳಗ್ಗೆ ಎದ್ದು ಗಡಿಬಿಡಿಯಲ್ಲಿ ಮಕ್ಕಳಿಗೆ ಬಾಕ್ಸ್ ಕಟ್ಟಿ ಕಳುಹಿಸೋದು ಪ್ರತಿಯೊಬ್ಬ ಅಮ್ಮನ ದೊಡ್ಡ ಟಾಸ್ಕ್. ಆದರೆ, ನೀವು ಪ್ರೀತಿಯಿಂದ ಕಳುಹಿಸೋ ಈ ಲಂಚ್ಬಾಕ್ಸ್ ಮಕ್ಕಳ ಆರೋಗ್ಯಕ್ಕೆ ಎಷ್ಟು ದೊಡ್ಡ ಕಂಟಕ ಆಗ್ತಿದೆ ಗೊತ್ತಾ? ಹೌದು, ಶಾಲೆಗಳಲ್ಲಿ ಲಂಚ್ಬಾಕ್ಸ್ ತರೋದನ್ನ ಪೂರ್ತಿಯಾಗಿ ನಿಷೇಧಿಸಬೇಕು ಅನ್ನೋ ಧ್ವನಿ ಈಗ ಜೋರಾಗಿ ಕೇಳಿಬರುತ್ತಿದೆ. ಇದು ಸುಮ್ಮನೆ ಹೇಳ್ತಿರೋ ಮಾತಲ್ಲ, ಇದರ ಹಿಂದೆ ಬಲವಾದ ಆರೋಗ್ಯದ ಕಾರಣಗಳಿವೆ.

ಪ್ಲಾಸ್ಟಿಕ್ ಡಬ್ಬಿ: ಸ್ಲೋ ಪಾಯಿಸನ್
ನಾವು ಎಷ್ಟೇ ಕಾಸ್ಟ್ಲಿ ಅಥವಾ ‘ಬಿಪಿಎ ಫ್ರೀ’ ಎಂದು ಬರೆದಿರೋ ಪ್ಲಾಸ್ಟಿಕ್ ಬಾಕ್ಸ್ ತಂದರೂ, ಅದರಲ್ಲಿ ಬಿಸಿ ಬಿಸಿ ಅಡುಗೆ ಹಾಕಿದ ತಕ್ಷಣ ಪ್ಲಾಸ್ಟಿಕ್ನಲ್ಲಿರೋ ಕೆಮಿಕಲ್ಸ್ಗಳೆಲ್ಲ ಊಟದ ಜೊತೆ ಸೇರಿಕೊಳ್ಳುತ್ತವೆ. ದಿನವೂ ಈ ಊಟ ತಿನ್ನೋದ್ರಿಂದ ಮಕ್ಕಳ ದೇಹದಲ್ಲಿ ಹಾರ್ಮೋನ್ ಏರುಪೇರಾಗಿ, ಚಿಕ್ಕ ವಯಸ್ಸಿಗೆ ಬೊಜ್ಜು ಬರೋದು, ಜೀರ್ಣಶಕ್ತಿ ಕಮ್ಮಿಯಾಗೋದು ಮಾತ್ರವಲ್ಲದೆ ಭವಿಷ್ಯದಲ್ಲಿ ದೊಡ್ಡ ದೊಡ್ಡ ಕಾಯಿಲೆಗಳು ಬರೋ ಅಪಾಯವಿರುತ್ತೆ.
ಬ್ಯಾಕ್ಟೀರಿಯಾಗಳದ್ದೇ ದರ್ಬಾರ್
ಬೆಳಗ್ಗೆ 7 ಗಂಟೆಗೆ ಮಾಡಿದ ಅಡುಗೆಯನ್ನ ಮಧ್ಯಾಹ್ನ 1 ಗಂಟೆಗೆ ಮಕ್ಕಳು ತಿಂತಾರೆ. ಅಂದರೆ ಸುಮಾರು 5-6 ಗಂಟೆಗಳ ಕಾಲ ಆಹಾರ ಮುಚ್ಚಿಟ್ಟ ಡಬ್ಬಿಯಲ್ಲೇ ಇರುತ್ತೆ. ತಣ್ಣಗಾದ ಊಟದಲ್ಲಿ, ಅದರಲ್ಲೂ ತೇವಾಂಶವಿರೋ ಅನ್ನ, ಪಲ್ಯಗಳಲ್ಲಿ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳು ಬೇಗ ಬೆಳೆಯುತ್ತವೆ. ಇದರಿಂದ ಮಕ್ಕಳಿಗೆ ಪದೇ ಪದೇ ಹೊಟ್ಟೆನೋವು, ವಾಂತಿ, ಭೇದಿ ಮತ್ತು ‘ಫುಡ್ ಪಾಯ್ಸನಿಂಗ್’ ಆಗುತ್ತೆ.

ಜಂಕ್ ಫುಡ್ ಕಿರಿಕಿರಿ
ಬೆಳಗ್ಗೆ ಟೈಮ್ ಇಲ್ಲ ಎಂದು ಹೆಚ್ಚಿನ ಪೋಷಕರು ಬಾಕ್ಸ್ನಲ್ಲಿ ಮ್ಯಾಗಿ, ನೂಡಲ್ಸ್, ಬಿಸ್ಕತ್ತು, ಅಥವಾ ಬ್ರೆಡ್-ಜಾಮ್ ಹಾಕಿ ಕಳುಹಿಸ್ತಾರೆ. ಇದರಿಂದ ಮಕ್ಕಳಿಗೆ ಸಿಗಬೇಕಾದ ಪ್ರೊಟೀನ್, ವಿಟಮಿನ್ ಸಿಗದೆ ದೇಹದಲ್ಲಿ ಶಕ್ತಿ ಕುಂದುತ್ತದೆ. ರೋಗನಿರೋಧಕ ಶಕ್ತಿ ಪೂರ್ತಿ ಡೌನ್ ಆಗಿ ಮಕ್ಕಳು ಬೇಗ ಕಾಯಿಲೆ ಬೀಳ್ತಾರೆ.

ಗ್ಯಾಸ್ಟ್ರಿಕ್ ಪ್ರಾಬ್ಲಮ್
ಮಕ್ಕಳು ದಿನವೂ ತಣ್ಣಗಾದ, ಜಿಡ್ಡಾದ ಊಟ ತಿನ್ನೋದ್ರಿಂದ ಹೊಟ್ಟೆಯಲ್ಲಿ ಆಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಶುರುವಾಗುತ್ತದೆ. ಸಣ್ಣ ವಯಸ್ಸಿನಲ್ಲೇ ಹೊಟ್ಟೆ ಉರಿ, ಹಸಿವಾಗದಿರುವುದು ಮತ್ತು ಮಲಬದ್ಧತೆ ಅನುಭವಿಸೋ ಮಕ್ಕಳ ಸಂಖ್ಯೆ ಹೆಚ್ಚಾಗ್ತಿದೆ.
ಹಾಗಿದ್ರೆ ಸೊಲ್ಯೂಷನ್ ಏನು?
ಶಾಲೆಗಳಲ್ಲಿ ಸರ್ಕಾರ ಅಥವಾ ಶಾಲಾ ಆಡಳಿತ ಮಂಡಳಿಯೇ ಪೌಷ್ಟಿಕ, ಬಿಸಿಬಿಸಿಯಾದ ಮತ್ತು ನೈರ್ಮಲ್ಯದಿಂದ ಕೂಡಿದ ಊಟವನ್ನು ಒದಗಿಸಬೇಕು. ಇದರಿಂದ ಪ್ರತಿಯೊಂದು ಮಗುವಿಗೂ ಒಂದೇ ರೀತಿಯ, ಆರೋಗ್ಯಕರ ಊಟ ಸಿಗುತ್ತೆ. ಪ್ಲಾಸ್ಟಿಕ್ ಬಾಕ್ಸ್ನಿಂದ ಬರೋ ಕೆಮಿಕಲ್ ಭೀತಿಯೂ ಇರೋದಿಲ್ಲ.
ನಮ್ಮ ಮಕ್ಕಳ ಭವಿಷ್ಯ ಮತ್ತು ಆರೋಗ್ಯ ಚನ್ನಾಗಿರಬೇಕು ಅಂದರೆ ಈ ಲಂಚ್ಬಾಕ್ಸ್ ಸಂಸ್ಕೃತಿಗೆ ಮುಕ್ತಿ ಹಾಡಿ, ಶಾಲೆಗಳಲ್ಲೇ ಬಿಸಿ ಊಟ ಕೊಡುವ ವ್ಯವಸ್ಥೆ ಜಾರಿಗೆ ಬರಲೇಬೇಕಿದೆ.



