September 17, 2026
Thursday, September 17, 2026
spot_img

‘ಸೆಮಿಕಾನ್ ಇಂಡಿಯಾ 2026’ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ಮೋದಿ ತಮ್ಮ ಜನ್ಮದಿನದಂದು ದೆಹಲಿಯ ಯಶೋಭೂಮಿ ಕನ್ವೆನ್ಷನ್‌ ಸೆಂಟರ್‌ನಲ್ಲಿ ಸೆಮಿಕಾನ್‌ ಇಂಡಿಯಾ 2026 ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ.

ಇಂದಿನಿಂದ ಮೂರು ದಿನಗಳು ನಡೆಯುವ ಕಾರ್ಯಕ್ರಮ ಇದಾಗಿದ್ದು, ಇಂಡಿಯಾ ಸೆಮಿಕಂಡಕ್ಟರ್ ಮಿಷನ್, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಸೆಮಿ ಸಂಘಟನೆಗಳು ಇದನ್ನು ಆಯೋಜಿಸಿವೆ. ‘ಸಿಲಿಕಾನ್ ಟು ಸಿಸ್ಟಮ್ಸ್: ಬ್ಯುಲ್ಡಿಂಗ್ ದಿ ಇಕೋಸಿಸ್ಟಂ’ ಥೀಮ್ ಹೊಂದಿರುವ ಈ ಬಾರಿಯ ಸೆಮಿಕಾನ್ ಇಂಡಿಯಾ ಕಾರ್ಯಕ್ರಮದಲ್ಲಿ ದೇಶ ವಿದೇಶಗಳಿಂದ ಸೆಮಿಕಂಡಕ್ಟರ್ ಕ್ಷೇತ್ರದ ಉದ್ಯಮಿಗಳು ಪಾಲ್ಗೊಂಡಿದ್ದಾರೆ.

ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಪ್ರಧಾನಿ ಮೋದಿ ಪ್ರದರ್ಶಕರು ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾದವರೊಂದಿಗೆ ಮಾತುಕತೆ ನಡೆಸಿದ್ದಾರೆ. ಯಶೋಭೂಮಿಯಲ್ಲಿ ಜಪಾನ್, ಸೌತ್ ಕೊರಿಯಾ, ಮಲೇಷ್ಯಾ, ನೆದರ್​ಲ್ಯಾಂಡ್ಸ್, ಸಿಂಗಾಪುರ್ ಮತ್ತು ಸ್ವೀಡನ್ ದೇಶಗಳಿಗೆ ಪೆವಿಲಿಯನ್​ಗಳನ್ನು ನಿರ್ಮಿಸಲಾಗಿದೆ. 12 ರಾಜ್ಯಗಳ ಬೂತ್​ಗಳು, ಒಂದು ಸ್ಟಾರ್ಟಪ್ ಪೆವಿಲಿಯನ್, ವರ್ಕ್​ಫೋರ್ಸ್ ಡೆವಲಪ್ಮೆಂಟ್ ಪೆವಿಲಿಯನ್ ಇವೆ. ಈ ಮೂರು ದಿನಗಳ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಅಧಿಕ ಜನರು ಭೇಟಿ ನೀಡುವ ನಿರೀಕ್ಷೆ ಇದೆ.

“Silicon to Systems: Building the Ecosystem” ಎನ್ನುವ ಥೀಮ್‌ನಲ್ಲಿ ಈ ಬಾರಿಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ 15,000 ಚದರ ಮೀಟರ್ ಪ್ರದರ್ಶನ ಸ್ಥಳದಲ್ಲಿ ಸುಮಾರು 300 ಅಂತಾರಾಷ್ಟ್ರೀಯ ಕಂಪನಿಗಳು ಸೇರಿದಂತೆ 600ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ. ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯಾದ್ಯಂತ ಪ್ರಮುಖ ಬೆಳವಣಿಗೆಗಳು ಮತ್ತು ಸವಾಲುಗಳನ್ನು ಒಳಗೊಂಡ ಚರ್ಚೆಗಳಲ್ಲಿ 150ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸುವ ನಿರೀಕ್ಷೆಯಿದೆ.

ಈ ಕಾರ್ಯಕ್ರಮದಲ್ಲಿ ಸ್ಟಾರ್ಟ್‌ಅಪ್‌ ಪಿಚ್‌, ವಿದ್ಯಾರ್ಥಿ ಹ್ಯಾಕತಾನ್‌ ಹಾಗೂ ನಾವೀನ್ಯತೆ ಪ್ರದರ್ಶನ, ಕಾಂಪಿಟೇಷನ್‌ ಇರಲಿದೆ. ತಮ್ಮ ಕಂಪನಿಯಲ್ಲಿ ಪೊಟೆಂಶಿಯಲ್‌, ಕ್ರಿಯೇಟಿವಿಟಿ ಎಲ್ಲವೂ ಇದೆ ಆದರೆ ಹಣದ ಕೊರತೆ ಇದೆ ಎನ್ನುವವರು ಈ ವೇದಿಕೆಯನ್ನು ಉಪಯೋಗಿಸಬಹುದಾಗಿದೆ. ಸಮ್ಮೇಳನದ ಕಾರ್ಯಕ್ರಮದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ, ಸುಧಾರಿತ ಪ್ಯಾಕೇಜಿಂಗ್, ವಸ್ತುಗಳು ಮತ್ತು ಉಪಕರಣಗಳು, ಚಿಪ್ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ, ಸ್ಟಾರ್ಟ್-ಅಪ್‌ಗಳು, ನಾವೀನ್ಯತೆ ಮತ್ತು ಪ್ರತಿಭಾ ಅಭಿವೃದ್ಧಿಯ ಕುರಿತು ಮುಖ್ಯ ಭಾಷಣಗಳು, ಪ್ಯಾನಲ್ ಚರ್ಚೆಗಳು ನಡೆಯಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !