September 18, 2026
Friday, September 18, 2026
spot_img

ವಿಡಿಯೋ ನೋಡಿ | ರೆಸಾರ್ಟ್‌ನಲ್ಲಿ ಬಾರ್ಬೆಕ್ಯೂ ಮಾಡುವ ವೇಳೆ ಎಡವಟ್ಟು: ಹನಿಮೂನ್‌ನಲ್ಲಿದ್ದ ಯುವತಿಗೆ ಬೆಂಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹನಿಮೂನ್‌ಗೆಂದು ಹೋಗಿದ್ದ ಜೋಡಿಗೆ ಬಾರ್ಬೆಕ್ಯೂ ಬೆಂಕಿ ತಗುಲಿದ್ದು, ಯುವತಿ ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸಿಟೋಂಗ್‌ನಲ್ಲಿರುವ ಕುರ್ಸೊಂಗ್‌ನಲ್ಲಿನ ರೆಸಾರ್ಟ್‌ನಲ್ಲಿ ದಂಪತಿ ಬಾರ್ಬೆಕ್ಯೂ ಬಿಸಿ ಮುಂದೆ ಕುಳಿತು ಚಿಲ್‌ ಮಾಡುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಬಾರ್ಬೆಕ್ಯೂಗೆ ಎಣ್ಣೆಯಂತಹ ವಸ್ತು ಹಾಕಿದ ನಂತರ ದೊಡ್ಡದಾಗಿ ಬೆಂಕಿ ಹತ್ತಿದೆ. ಹನಿಮೂನ್‌ನಲ್ಲಿ ನಿಖಿತಾ ದಾಸ್‌ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಪತಿ ಸಮೀರ್‌ ದಾಸ್‌ಗೆ ಕೂಡ ಸಣ್ಣ ಪುಟ್ಟ ಗಾಯಗಳಾಗಿವೆ.

ಬೆಂಕಿಯ ಪಕ್ಕದಲ್ಲೇ ಕುಳಿತಿದ್ದ ನಿಖಿತಾ ದಾಸ್‌ ಬಟ್ಟೆಗೆ ಬೆಂಕಿ ಹೊತ್ತಿದ್ದು, ಎಲ್ಲರೂ ಕೂಗಾಡಿದ್ದಾರೆ. ಆನಂತರ ಪತಿ ಸಮೀರ್‌ ತಮ್ಮದೇ ಟೀಶರ್ಟ್‌ ತೆಗೆದು ಬೆಂಕಿಯನ್ನು ನಂದಿಸಲು ಯತ್ನಿಸಿದ್ದಾರೆ. ರೆಸಾರ್ಟ್‌ ಸಿಬ್ಬಂದಿಯ ಸಹಾಯದಿಂದ ಬೆಂಕಿ ನಂದಿಸಲಾಗಿದೆ. ಆದರೆ ಅಷ್ಟರೊಳಗೆ ನಿಖಿತಾ ದೇಹದ ಹಲವು ಭಾಗಗಳಲ್ಲಿ ಗಂಭೀರ ಸುಟ್ಟ ಗಾಯಗಳಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !