September 19, 2026
Saturday, September 19, 2026
spot_img

ಸೌಂದರ್ಯ ಅಂದ್ರೆ ಬರಿ ಸಣ್ಣಗಿರೋದಲ್ಲ: ಕತ್ರಿನಾ ಪರ ಧ್ವನಿ ಎತ್ತಿದ ನಟ ಹೃತಿಕ್ ರೋಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಅಂದ್ಮೇಲೆ ಗ್ಲಾಮರ್, ಫಿಟ್ನೆಸ್ ಇವೆಲ್ಲಾ ಸಹಜ ಬಿಡಿ. ಆದ್ರೆ ಇಲ್ಲೊಬ್ಬರು ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಗೆ ಹೆರಿಗೆಯಾದ ಮೇಲೆ ದೇಹದಲ್ಲಿ ಬದಲಾವಣೆ ಆಯ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಕಮೆಂಟ್ ಮಾಡೋಕೆ ಶುರುಮಾಡಿದ್ದಾರೆ.

ಇತ್ತೀಚೆಗೆ ಅಂಬಾನಿ ಅವರ ಮನೆಯಲ್ಲಿ ನಡೆದ ಅದ್ಧೂರಿ ಗಣಪತಿ ಪೂಜೆಗೆ ಕತ್ರಿನಾ ಕೈಫ್ ತಮ್ಮ ಗಂಡ ವಿಕ್ಕಿ ಕೌಶಲ್ ಜೊತೆ ಸಾಂಪ್ರದಾಯಿಕ ಉಡುಪಿನಲ್ಲಿ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಅವರ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆದ್ವು. ಆದ್ರೆ, ಕೆಲ ಕಿಡಿಗೇಡಿಗಳು “ಕತ್ರಿನಾ ತೂಕ ಹೆಚ್ಚಿಸಿಕೊಂಡಿದ್ದಾರೆ, ಮುಂಚಿನ ತರ ಕಾಣ್ತಿಲ್ಲ, ಗ್ಲಾಮರ್ ಹೊರಟುಹೋಯ್ತು” ಎಂದು ಟ್ರೋಲ್ ಮಾಡೋಕೆ ಸ್ಟಾರ್ಟ್ ಮಾಡಿದ್ರು.

ಮಗು ಆದ್ಮೇಲೆ ಪ್ರತಿಯೊಬ್ಬ ಹೆಣ್ಣಿನ ಶರೀರದಲ್ಲೂ ಏರಿಳಿತಗಳು ಆಗೋದು ತೀರಾ ಕಾಮನ್. ಈ ಸಿಂಪಲ್ ಲಾಜಿಕ್ ಕೂಡ ಗೊತ್ತಿಲ್ಲದೆ ಕಮೆಂಟ್ ಮಾಡ್ತಿದ್ದ ಕಿಡಿಗೇಡಿಗಳಿಗೆ ಕತ್ರಿನಾ ಫ್ಯಾನ್ಸ್ ತಕ್ಷಣವೇ ಚಳಿ ಬಿಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹರ್ಷವೀರ್ ಜೈನ್ ಅನ್ನೋ ಕಂಟೆಂಟ್ ಕ್ರಿಯೇಟರ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದರು. “ಚಿಕ್ಕ ವಯಸ್ಸಿನಿಂದಲೂ ನಾನು ಕತ್ರಿನಾ ಅವರ ದೊಡ್ಡ ಅಭಿಮಾನಿ, ಅವರ ಪೋಸ್ಟರ್‌ಗಳನ್ನ ವಾಲೆಟ್‌ನಲ್ಲಿ ಇಟ್ಕೊಂಡು ಓಡಾಡ್ತಿದ್ದೆ. ಇವತ್ತು ಹೆರಿಗೆಯ ನಂತರ ಅವರ ತೂಕ ಹೆಚ್ಚಾಗಿದೆ ಎಂದು ಟ್ರೋಲ್ ಮಾಡೋರನ್ನ ನೋಡಿದ್ರೆ ಕನಿಕರ ಅನ್ಸುತ್ತೆ. ಕತ್ರಿನಾ ಅವರು ಒಬ್ಬ ತಾಯಿ, ಒಂದು ಯಶಸ್ವಿ ಬ್ಯುಸಿನೆಸ್ ನಡೆಸುತ್ತಿರೋ ವಿಮೆನ್. ನಿಮ್ಮಂತವರ ಕೆಟ್ಟ ಕಮೆಂಟ್ ಅವ್ರ ಲೈಫ್ ಮೇಲೆ ಯಾವುದೇ ಇಂಪ್ಯಾಕ್ಟ್ ಮಾಡಲ್ಲ” ಎಂದು ಬರೆದುಕೊಂಡಿದ್ದರು.

ಹೃತಿಕ್ ರೋಷನ್ ಸೈಲೆಂಟ್ ಸಪೋರ್ಟ್

ವಿಶೇಷ ಅಂದ್ರೆ, ಈ ಪೋಸ್ಟ್‌ಗೆ ಬಾಲಿವುಡ್ ನಟ ಹೃತಿಕ್ ರೋಷನ್ ಲೈಕ್ ಒತ್ತಿದ್ದಾರೆ. ಯಾವುದೇ ದೊಡ್ಡ ದೊಡ್ಡ ಸ್ಟೇಟ್‌ಮೆಂಟ್ ಕೊಡದೆ, ಒಂದೇ ಒಂದು ಲೈಕ್ ಮಾಡುವ ಮೂಲಕ ತಾವು ತಮ್ಮ ಕೋ-ಸ್ಟಾರ್ ಕತ್ರಿನಾ ಅವರ ಜೊತೆ ನಿಂತಿರುವುದನ್ನ ಪ್ರೂವ್ ಮಾಡಿದ್ದಾರೆ.

ಒಟ್ಟಿನಲ್ಲಿ, ಒಬ್ಬ ಹೆಣ್ಣು ತಾಯಿಯಾದಾಗ ಅವಳ ದೇಹವನ್ನು ಗೌರವಿಸುವುದನ್ನು ಬಿಟ್ಟು, ಈ ರೀತಿ ಟ್ರೋಲ್ ಮಾಡೋದು ಎಷ್ಟು ಸಣ್ಣತನ ಅನ್ನೋದನ್ನ ಜನರೇ ಆ ಟ್ರೋಲರ್ಸ್‌ಗೆ ಅರ್ಥ ಮಾಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !