ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರರಂಗದಲ್ಲಿ ಕೆಲವೊಂದು ಸಿನಿಮಾಗಳು ಸೈಲೆಂಟ್ ಆಗಿ ಬಂದು, ಥಿಯೇಟರ್ನಲ್ಲಿ ಎಂಥಾ ದೊಡ್ಡ ಸದ್ದು ಮಾಡ್ತವೆ ಅಂದ್ರೆ ಎಲ್ಲರೂ ಆಶ್ಚರ್ಯಪಡ್ಬೇಕು ಹಾಗೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತೆ. ಈಗ ಅಂಥದ್ದೇ ಒಂದು ಮ್ಯಾಜಿಕ್ ಮಾಡ್ತಿರೋದು ಸೂರಿ ಮತ್ತು ಸುಹಾಸ್ ಕಾಂಬಿನೇಷನ್ನ ‘ಮಂಡಾಡಿ’ ಸಿನಿಮಾ.
ರಿಲೀಸ್ ಆದ ಮೊದಲ ದಿನದಿಂದಲೂ ಥಿಯೇಟರ್ಗಳಲ್ಲಿ ಹೌಸ್ಫುಲ್ ಬೋರ್ಡ್ ಬಿದ್ದು ಮುನ್ನುಗ್ಗುತ್ತಿರೋ ಈ ಸಿನಿಮಾ, ಈಗ ಎರಡನೇ ವಾರಕ್ಕೂ ಎಂಟ್ರಿ ಕೊಟ್ಟಿದೆ. ಸಾಮಾನ್ಯವಾಗಿ ಮೊದಲ ವಾರ ಮುಗಿದ ಮೇಲೆ ಎಷ್ಟೋ ಸಿನಿಮಾಗಳ ಕಲೆಕ್ಷನ್ ಡೌನ್ ಆಗುತ್ತೆ. ಆದ್ರೆ ‘ಮಂಡಾಡಿ’ ಕಥೆಯೇ ಬೇರೆ. ಎರಡನೇ ವಾರದ ಮೊದಲ ದಿನ, ಅಂದರೆ 2ನೇ ಶುಕ್ರವಾರದಂದೇ ಬರೋಬ್ಬರಿ 4 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿ ದೊಡ್ಡ ಶಾಕ್ ಕೊಟ್ಟಿದೆ.
ಈ 4 ಕೋಟಿ ಸೇರಿಕೊಂಡು, ಸಿನಿಮಾ ರಿಲೀಸ್ ಆದ 9 ದಿನಕ್ಕೆ ಒಟ್ಟು ಕಲೆಕ್ಷನ್ 68.25 ಕೋಟಿ ರೂಪಾಯಿ ದಾಟಿದೆ. ಇಷ್ಟೇ ಸ್ಪೀಡ್ನಲ್ಲಿ ಹೋದ್ರೆ ಈ ವೀಕೆಂಡ್ ಮುಗಿಯೋದ್ರೊಳಗೆ ಕಲೆಕ್ಷನ್ ಲೆಕ್ಕ ಎಲ್ಲೋ ತಲುಪೋದು ಗ್ಯಾರಂಟಿ. ಮೊದಲೇ ಹೌಸ್ಫುಲ್ ಪ್ರದರ್ಶನ ಕಾಣ್ತಿರೋ ಥಿಯೇಟರ್ಗಳಲ್ಲಿ ಈಗ ಫ್ಯಾಮಿಲಿ ಆಡಿಯನ್ಸ್ ಮತ್ತು ಯೂತ್ಸ್ ಕ್ಯೂ ನಿಲ್ಲೋಕೆ ಶುರು ಮಾಡಿದ್ದಾರೆ.
ಮಾಸ್ ಮತ್ತು ಕ್ಲಾಸ್ ಎರಡೂ ಆಡಿಯನ್ಸ್ಗೆ ಕನೆಕ್ಟ್ ಆಗಿರೋ ಈ ಸಿನಿಮಾ ಈಗಾಗಲೇ ‘ಸೂಪರ್ ಹಿಟ್’ ಆಗಿ ಹೊರಹೊಮ್ಮಿದೆ. ಈಗ ಎರಡನೇ ವಾರದಲ್ಲೂ ಇಷ್ಟೊಂದು ಸ್ಟ್ರಾಂಗ್ ಆಗಿ ಕಲೆಕ್ಷನ್ ಮೆಂಟೇನ್ ಮಾಡ್ತಿರೋದನ್ನ ನೋಡಿದ್ರೆ, ಸಿನಿಮಾ ‘ಬ್ಲಾಕ್ಬಸ್ಟರ್’ ಕ್ಲಬ್ಗೆ ಸೇರೋದು ಗ್ಯಾರಂಟಿ ಅಂತಿದ್ದಾರೆ ಸಿನಿಮಾ ವಿಶ್ಲೇಷಕರು.



