ವರ್ಷಗಟ್ಟಲೆ ವ್ಯಾಯಾಮ, ಜಿಮ್, ಓಟ ಅಂತ ಯಾವುದಕ್ಕೂ ಹೋಗದೆ ಸುಮ್ಮನೆ ಕೂತಿದ್ದು, ದಿಢೀರ್ ಅಂತ ಒಂದಿನ ಜಿಮ್ಗೆ ಕಾಲಿಟ್ಟರೆ ಅಥವಾ ಓಡೋಕೆ ಶುರು ಮಾಡಿದರೆ ನಮ್ಮ ಹೃದಯದ ಒಳಗಡೆ ಏನೇನ್ ಕಥೆ ನಡೆಯುತ್ತೆ ಗೊತ್ತಾ? ವರ್ಷಗಳಿಂದ ಆರಾಮಾಗಿ ಮೂಲೆಯಲ್ಲಿ ಕೂತಿದ್ದ ಹಾರ್ಟ್ಗೆ ದಿಢೀರ್ ಎಂದು ಕೆಲಸ ಬಿದ್ದಾಗ ಅದು ಹೇಗೆ ರಿಯಾಕ್ಟ್ ಮಾಡುತ್ತೆ, ಏನೆಲ್ಲಾ ಬದಲಾವಣೆಗಳು ಆಗುತ್ತವೆ ಅನ್ನೋದನ್ನ ತಿಳಿಯೋಣ.
ಹಾರ್ಟ್ ರೇಟ್ ಫುಲ್ ರೈಸ್ ಆಗುತ್ತೆ
ವರ್ಷಗಳಿಂದ ವರ್ಕೌಟ್ ಮಾಡದೆ ಇದ್ದಾಗ ಹೃದಯದ ಸ್ನಾಯುಗಳು ಕೊಂಚ ಸೋಮಾರಿಯಾಗಿರುತ್ತವೆ. ನೀವು ದಿಢೀರ್ ಎಂದು ಓಡೋಕೆ ಅಥವಾ ವೇಟ್ ಎತ್ತೋಕೆ ಶುರು ಮಾಡಿದಾಗ, ದೇಹದ ಎಲ್ಲ ಭಾಗಗಳಿಗೂ ರಕ್ತ ತಲುಪಿಸೋಕೆ ಹಾರ್ಟ್ ಫುಲ್ ಸ್ಪೀಡ್ನಲ್ಲಿ ಪಂಪ್ ಆಗೋಕೆ ಶುರು ಮಾಡುತ್ತೆ. ಅದಕ್ಕೇ ನೋಡಿ, ಮೊದಲ ದಿನ ವರ್ಕೌಟ್ ಮಾಡಿದ ತಕ್ಷಣ ಎದೆ ಡಬ್ ಡಬ್ ಎಂದು ಜೋರಾಗಿ ಹೊಡೆದುಕೊಳ್ಳೋದು.
ಆಕ್ಸಿಜನ್ ಸಪ್ಲೈ ಚುರುಕಾಗುತ್ತೆ
ನಾವು ಖಾಲಿ ಕೂತಾಗ ನಮ್ಮ ನರಗಳಲ್ಲಿ ರಕ್ತ ಸಂಚಾರ ನಿಧಾನವಾಗಿರುತ್ತದೆ. ಆದರೆ ಎಕ್ಸರ್ಸೈಸ್ ಶುರು ಮಾಡುತ್ತಿದ್ದಂತೆ, ಹಾರ್ಟ್ ತನ್ನ ಪಂಪಿಂಗ್ ಕೆಪಾಸಿಟಿಯನ್ನು ಹೆಚ್ಚು ಮಾಡುತ್ತೆ. ಇದರಿಂದ ದೇಹದ ಮೂಲೆ ಮೂಲೆಗೂ, ವಿಶೆಷವಾಗಿ ಮಸಲ್ಸ್ಗೆ ಆಕ್ಸಿಜನ್ ಮತ್ತು ರಕ್ತ ಸೂಪರ್ ಫಾಸ್ಟ್ ಆಗಿ ಸರಬರಾಜು ಆಗೋಕೆ ಶುರು ಮಾಡುತ್ತೆ.
ಬಿಪಿ ಕಂಟ್ರೋಲ್, ಕೊಲೆಸ್ಟ್ರಾಲ್ ಕರಗುತ್ತೆ
ದಿನಾ ಸ್ವಲ್ಪ ಸ್ವಲ್ಪಾನೇ ಎಕ್ಸರ್ಸೈಸ್ ಕಂಟಿನ್ಯೂ ಮಾಡಿದರೆ, ರಕ್ತನಾಳಗಳು ಅಗಲವಾಗಿ ರಕ್ತ ಸಂಚಾರ ಸುಲಭವಾಗುತ್ತದೆ. ಇದರಿಂದ ಹೈ ಬಿಪಿ ಇರೋರಿಗೆ ಬಿಪಿ ನಾರ್ಮಲ್ಗೆ ಬರುತ್ತದೆ. ಅಷ್ಟೇ ಅಲ್ಲ, ಹೃದಯದ ರಕ್ತನಾಳಗಳಲ್ಲಿ ಪೈಪ್ನಲ್ಲಿ ಕಸ ಸಿಕಾಕೊಂಡಂತೆ ಕೂತಿರೋ ಕೆಟ್ಟ ಕೊಲೆಸ್ಟ್ರಾಲ್ ಬ್ಲಾಕೇಜ್ಗಳನ್ನು ಕರಗಿಸಿ, ಹಾರ್ಟ್ ಅಟ್ಯಾಕ್ ಆಗೋ ರಿಸ್ಕ್ ಅನ್ನು ಕಮ್ಮಿ ಮಾಡುತ್ತೆ.
ಲೈಟಾಗಿ ಶುರು ಮಾಡಿ
ವರ್ಷಗಳಿಂದ ಖಾಲಿ ಕೂತಿದ್ದೀನಿ, ಇವತ್ತೇ ಒಂದೇ ದಿನದಲ್ಲಿ ಬಾಡಿ ಬಿಲ್ಡ್ ಮಾಡಿಬಿಡ್ತೀನಿ ಎಂದು ಫುಲ್ ಜೋಶ್ನಲ್ಲಿ ಶಕ್ತಿಮೀರಿ ಹೆವಿ ವರ್ಕೌಟ್ ಮಾಡೋಕೆ ಹೋಗಬೇಡಿ. ಇದರಿಂದ ಹೃದಯದ ಮೇಲೆ ದಿಢೀರ್ ಪ್ರೆಶರ್ ಬಿದ್ದು ತೊಂದರೆಯಾಗಬಹುದು. ಆದ್ದರಿಂದ ಮೊದಲಿಗೆ ವಾಕಿಂಗ್, ಲೈಟ್ ಜೊಗಿಂಗ್, ಯೋಗದಂತಹ ಸರಳ ಅಭ್ಯಾಸಗಳಿಂದ ಶುರು ಮಾಡಿ, ಆಮೇಲೆ ನಿಧಾನವಾಗಿ ವರ್ಕೌಟ್ ಹೆವಿ ಮಾಡಿಕೊಳ್ಳುವುದು ಬೆಸ್ಟ್.
ಒಟ್ಟಿನಲ್ಲಿ, ಎಷ್ಟೇ ವರ್ಷ ಗ್ಯಾಪ್ ಬಿದ್ದಿದ್ದರೂ ಪರವಾಗಿಲ್ಲ, ಇವತ್ತಿನಿಂದಲೇ ದಿನಕ್ಕೆ ೩೦ ನಿಮಿಷ ವಾಕಿಂಗ್ ಅಥವಾ ವ್ಯಾಯಾಮ ಶುರು ಮಾಡಿದರೆ ನಿಮ್ಮ ಹಾರ್ಟ್ ಮತ್ತೆ ಯಂಗ್ ಆಗಿ, ಸೂಪರ್ ಆಕ್ಟಿವ್ ಆಗಿ ಕೆಲಸ ಮಾಡಲು ಶುರು ಮಾಡುತ್ತೆ.



