ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಬೇಬೋ ಕರೀನಾ ಕಪೂರ್ ಖಾನ್ ಹಾಗೂ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿರೋ ‘ದಾಯ್ರಾ’ ಸಿನಿಮಾ, ಥಿಯೇಟರ್ಗೆ ಬಂದ ಮೊದಲ ದಿನ ಸ್ವಲ್ಪ ಸೈಲೆಂಟ್ ಆಗಿ ಖಾತೆ ತೆರೆದಿತ್ತು. ಆದರೆ, ಎರಡನೇ ದಿನಕ್ಕೆ ಬರ್ತಾ ಬರ್ತಾ ಕಲೆಕ್ಷನ್ನಲ್ಲಿ ಒಳ್ಳೆ ಜಂಪ್ ಕಂಡುಕೊಂಡಿದೆ.
ಶುಕ್ರವಾರ ರಿಲೀಸ್ ಆದ ದಿನ ಈ ಸಿನಿಮಾ ಗಳಿಸಿದ್ದು ಬರೀ 1.10 ಕೋಟಿ ನೆಟ್. ಎರಡನೇ ದಿನ ಬರೋಬ್ಬರಿ 1.80 ಕೋಟಿ ಬಾಚಿಕೊಳ್ಳುವ ಮೂಲಕ, ಎರಡೇ ದಿನಕ್ಕೆ ಭಾರತದಾದ್ಯಂತ 2.90 ಕೋಟಿ ನೆಟ್ ಕಲೆಕ್ಷನ್ ತಲುಪಿದೆ. ಶನಿವಾರ ಬಂದ ಈ ಗ್ರೋತ್ ನೋಡಿದ್ರೆ, ಸಂಡೇ ರಜಾದಿನ ಮತ್ತಷ್ಟು ಜನ ಥಿಯೇಟರ್ಗೆ ಹರಿದುಬರೋ ಮುನ್ಸೂಚನೆ ಸಿಗ್ತಿದೆ.
ಸಮಾಜದಲ್ಲಿ ನಡೆಯೋ ಒಂದು ದೊಡ್ಡ ಘಟನೆ, ಅದರ ಬೆನ್ನಲ್ಲೇ ಪೋಲಿಸ್ ಸಿಸ್ಟಮ್ ಒಳಗಡೆ ಶುರುವಾಗೋ ಎಥಿಕ್ಸ್ ಮತ್ತು ನ್ಯಾಯದ ಜಗಳವೇ ಈ ಚಿತ್ರದ ಮೇನ್ ಹೈಲೈಟ್.
ಕರೀನಾ ಕಪೂರ್ ಮತ್ತು ಪೃಥ್ವಿರಾಜ್ ಅವರ ಮುಖಾಮುಖಿ ನಟನೆಗೆ ಜೈ ಅಂದಿರೋ ಪ್ರೇಕ್ಷಕರು, ಚಿತ್ರದಲ್ಲಿ ಬರೋ ಮಿಕ್ಕ ನಟರ ಆಕ್ಟಿಂಗ್ಗೂ ಸೈ ಅಂದಿದ್ದಾರೆ. ಕನ್ವಲ್ ಜಿತ್ ಸಿಂಗ್, ಅಚಿಂತ್ ಕೌರ್, ಅನೂಜಾ ಸಾಥೆ, ಸೀಮಾ ಅಜ್ಮಿ, ಬಿಸ್ವಪತಿ ಸರ್ಕಾರ್ ಅವರಂತ ದಿಗ್ಗಜ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಮಾಸ್ ಆಡಿಯನ್ಸ್ ಲೈಕ್ ಮಾಡುವ ಫೈಟ್ಸ್, ಹಾಡುಗಳಿಲ್ಲದಿದ್ದರೂ, ಇಂಟೆನ್ಸ್ ಡ್ರಾಮಾ ಮತ್ತು ಸೀರಿಯಸ್ ಕ್ರೈಮ್ ಥ್ರಿಲ್ಲರ್ ಇಷ್ಟಪಡುವ ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ ‘ದಾಯ್ರಾ’ ಮೆಚ್ಚುಗೆಯಾಗುತ್ತಿದೆ. ಭಾನುವಾರದ ಕಲೆಕ್ಷನ್ ಈ ಸಿನಿಮಾದ ಮುಂದಿನ ಹಾದಿಯನ್ನು ನಿರ್ಧರಿಸಲಿದೆ.



