September 20, 2026
Sunday, September 20, 2026
spot_img

ಬೆಂಗಳೂರಿನ ನಕಲಿ ಮೆಡಿಸಿನ್ ದಂಧೆಗೆ ಅಂತರರಾಜ್ಯ ಲಿಂಕ್: ಐದಾರು ರಾಜ್ಯಗಳಲ್ಲಿ ಎಸ್‌ಐಟಿ ದಾಳಿ, ಶೀಘ್ರದಲ್ಲೇ ಸಿಬಿಐ ಎಂಟ್ರಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನಲ್ಲಿ ಇತ್ತೀಚೆಗೆ ಸಿಕ್ಕಿಬಿದ್ದ ನಕಲಿ ಔಷಧಿ ಜಾಲದ ಬೇರುಗಳು ಈಗ ದೇಶದ ಐದಾರು ರಾಜ್ಯಗಳಿಗೆ ಹಬ್ಬಿರುವುದು ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಲವು ಹೆಸರಾಂತ ಆಸ್ಪತ್ರೆಗಳಿಗೂ ಈ ಖದೀಮರು ನಕಲಿ ಮೆಡಿಸಿನ್ ಸಪ್ಲೈ ಮಾಡಿದ್ದಾರೆ. ಈ ನೆಟ್‌ವರ್ಕ್ ದೊಡ್ಡದಾಗಿರೋದ್ರಿಂದ ಮತ್ತು ಹೊರರಾಜ್ಯಗಳಲ್ಲಿ ಸಾಕ್ಷ್ಯ ಹುಡುಕೋದು ಕಷ್ಟ ಇರೋದ್ರಿಂದ, ಪ್ರಕರಣ ಸದ್ಯದಲ್ಲೇ ಸಿಬಿಐ ಕೈ ಸೇರುವ ಸಾಧ್ಯತೆ ದಟ್ಟವಾಗಿದೆ.

ವೈದ್ಯರ ಕಣ್ಣಿಗೂ ಮಣ್ಣೆರಚಿದ ಖದೀಮರು

ಈ ಗ್ಯಾಂಗ್ ಎಷ್ಟು ಹುಷಾರಾಗಿತ್ತು ಅಂದರೆ, ರೋಗಿಗಳಷ್ಟೇ ಅಲ್ಲ, ಸ್ವತಃ ಡಾಕ್ಟರ್‌ಗಳೂ ಇವರ ವಂಚನೆಯನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಅಸಲಿ ಕಂಪನಿಗಳ ಲೈಸೆನ್ಸ್ ನಂಬರ್, ಬಾಟಲ್ ಡಿಸೈನ್ ಮತ್ತು ರ್ಯಾಪರ್‌ಗಳನ್ನು ಇವರು ಅಚ್ಚುಕಟ್ಟಾಗಿ ನಕಲು ಮಾಡುತ್ತಿದ್ದರು. ವೈದ್ಯರು ಔಷಧಿಯ ಐಡೆಂಟಿಟಿ ನಂಬರ್ ಚೆಕ್ ಮಾಡಿದರೂ ಅದು ಒರಿಜಿನಲ್ ಎಂದೇ ತೋರಿಸುತ್ತಿತ್ತು. ಅಸಲಿ ಔಷಧಿಗೆ ಬೇರೆ ಬೇರೆ ಪೌಡರ್ ಮಿಕ್ಸ್ ಮಾಡಿ ಇಲ್ಲವೇ ಹಳೇ ಮಾತ್ರೆಗಳಿಗೆ ಹೊಸ ರೂಪ ಕೊಟ್ಟು ಮಾರುಕಟ್ಟೆಗೆ ಬಿಡುತ್ತಿದ್ದರು ಎಂದು ತನಿಖೆಕೆ ವೇಳೆ ಬಯಲಾಗಿದೆ.

ರೋಗಿಗಳ ಜೀವದೊಂದಿದೆ ಚೆಲ್ಲಾಟ

 ಕೇವಲ 150 ರಿಂದ 200 ರೂಪಾಯಿ ಖರ್ಚಿನಲ್ಲಿ ರೆಡಿಯಾಗುತ್ತಿದ್ದ ಮಾತ್ರೆಗಳನ್ನು, ರೋಗಿಗಳಿಗೆ ಸಾವಿರಾರು ರೂ.ಗೆ ಮಾರಟ ಮಾಡಿ ಕೋಟಿ ಕೋಟಿ ಲಾಭ ಮಾಡಿಕೊಳ್ಳುತ್ತಿದ್ದರು. ಇದಕ್ಕಾಗಿ ಡಿಸ್ಟ್ರಿಬ್ಯೂಟರ್‌ಗಳಿಂದ ಹಿಡಿದು ಮೆಡಿಕಲ್ ಶಾಪ್‌ಗಳವರೆಗೆ ಒಂದು ವ್ಯವಸ್ಥಿತ ಚೈನ್ ಲಿಂಕ್ ಸೃಷ್ಟಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:

ಕಿಂಗ್‌ಪಿನ್ ಪ್ರಶಾಂತ್ ವಿದೇಶದಲ್ಲಿ ಲಾಕ್

ಈ ಇಡೀ ದಂಧೆಯ ಸೂತ್ರಧಾರ ಪ್ರಶಾಂತ್ ಎಂಬಾತ ಸದ್ಯ ಅಜರ್‌ಬೈಜಾನ್ ದೇಶದಲ್ಲಿ ಸಿಕ್ಕಿಬಿದ್ದಿದ್ದಾನೆ. ಸೆ. 9ಕ್ಕೆ ಆತನ ವೀಸಾ ಮುಗಿದಿದ್ದರಿಂದ ಅಲ್ಲಿನ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಭಾರತದ ಜತೆ ಆ ದೇಶಕ್ಕೆ ಹಸ್ತಾಂತರ ಒಪ್ಪಂದ ಇಲ್ಲದ ಕಾರಣ ನಮ್ಮ ಪೊಲೀಸರು ನೇರವಾಗಿ ಹೋಗಿ ಆತನನ್ನು ಕರೆತರಲು ಆಗ್ತಿಲ್ಲ. ಆತ ತಾನಾಗಿಯೇ ಭಾರತಕ್ಕೆ ಮರಳಬೇಕಾಗಿದ್ದು, ಬಂದ ತಕ್ಷಣ ಏರ್‌ಪೋರ್ಟ್‌ನಲ್ಲೇ ಲಾಕ್ ಮಾಡಲು ಸಿದ್ಧತೆಗಳು ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !