September 20, 2026
Sunday, September 20, 2026
spot_img

CINE | ಶಿವಣ್ಣನ ಹೊಸ ಗೆಟಪ್, ಹೊಸ ಕತೆ: ಸಖತ್ ಇಂಟರೆಸ್ಟಿಂಗ್ ಇದೆ ‘ಬೇಲ್’ ಟ್ರೈಲರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಬೇಲ್’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ನೋಡದೆ ಇರೋರು ಇಲ್ಲಿ ನೋಡಿಬಿಡಿ..ಯಾಕಂದ್ರೆ ಈ ಟ್ರೈಲರ್ ಅಷ್ಟೊಂದು ಇಂಟರೆಸ್ಟಿಂಗ್ ಆಗಿದೆ.

ಕಾನೂನು ಮತ್ತು ನ್ಯಾಯದ ಸುತ್ತ ಸಾಗುವ ಕಥಾಹಂದರ ಹೊಂದಿರೋ ಚಿತ್ರದಲ್ಲಿ ಆಕ್ಷನ್, ಭಾವನಾತ್ಮಕ ಸನ್ನಿವೇಶಗಳು ಹಾಗೂ ಸ್ನೇಹದ ಅಂಶಗಳೂ ಬೆರೆತಿರುವ ಹಿಂಟ್ ಅನ್ನು ಟ್ರೈಲರ್ ನೀಡಿದೆ.

‘ಬೇಲ್’ನಲ್ಲಿ ಶಿವರಾಜ್ ಕುಮಾರ್ ಅವರ ಪಾತ್ರವೇ ಪ್ರಮುಖ ಆಕರ್ಷಣೆಯಾಗಿದ್ದು, ಈ ಬಾರಿ ಅವರನ್ನು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಮಾನ್ಯವಾಗಿ ಯುವ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಶಿವಣ್ಣ, ಈ ಚಿತ್ರದಲ್ಲಿ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಅವರ ಪಾತ್ರದ ಹಿನ್ನೆಲೆ ಹಾಗೂ ನಿವೃತ್ತ ಅಧಿಕಾರಿಯೊಂದಿಗಿನ ಸಂಬಂಧದ ಸುಳಿವುಗಳು ಕುತೂಹಲ ಮೂಡಿಸಿವೆ.

ಇದನ್ನೂ ಓದಿ:

ಕಥೆಯಲ್ಲಿ ಶಿವರಾಜ್ ಕುಮಾರ್ ಅವರೊಂದಿಗೆ ಮಲಯಾಳಂ ನಟ ಜಯರಾಂ ಹಾಗೂ ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ಆಕ್ಷನ್ ದೃಶ್ಯಗಳಿಗೂ ಚಿತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಿರೋದು ಸ್ಪಷ್ಟವಾಗಿದೆ.

ಇನ್ನು ಲೂಸ್ ಮಾದ ಯೋಗಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಛಾಯೆ ಟ್ರೈಲರ್‌ನಲ್ಲಿ ಸಾಕಷ್ಟು ಗಮನ ಸೆಳೆದಿದೆ. ದೀಕ್ಷಿತ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದು, ಅವರ ಪಾತ್ರವೂ ಕಥೆಯಲ್ಲಿ ಪ್ರಮುಖ ತಿರುವುಗಳನ್ನು ನೀಡುವ ಸಾಧ್ಯತೆ ಇದೆ.

ಪವನ್ ಒಡೆಯರ್ ನಿರ್ದೇಶನದ ‘ಬೇಲ್’ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರಲಿದ್ದು, ವಿಭಿನ್ನ ಪಾತ್ರದಲ್ಲಿ ಶಿವಣ್ಣನನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !