ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಿಂಗ್ ಆಫ್ ಕೊತ್ತ’ ಸಿನಿಮಾ ಆದ್ಮೇಲೆ ನಮ್ಮ ದುಲ್ಕರ್ ಸಲ್ಮಾನ್ ಮತ್ತೆ ಮಲಯಾಳಂ ಚಿತ್ರರಂಗಕ್ಕೆ ಭರ್ಜರಿಯಾಗಿಯೇ ಕಂಬ್ಯಾಕ್ ಮಾಡಿದ್ದಾರೆ. ನಹಾಸ್ ಹಿದಾಯತ್ ಡೈರೆಕ್ಷನ್‌ನಲ್ಲಿ ಮೂಡಿಬಂದಿರೋ ‘I’m Game’ ಅನ್ನೋ ಆಕ್ಷನ್ ಥ್ರಿಲ್ಲರ್ ಸಿನಿಮಾ ಸೆಪ್ಟೆಂಬರ್ 3 ರಂದು ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ. ಸಿನಿಮಾಗೆ ಜನರಿಂದ ಮತ್ತು ವಿಮರ್ಶಕರಿಂದ ಮಿಕ್ಸ್ ರೆಸ್ಪಾನ್ಸ್ ಸಿಕ್ಕಿದ್ರೂ, ಗಲ್ಲಾಪೆಟ್ಟಿಗೆಯಲ್ಲಿ ಮಾತ್ರ ಕಲೆಕ್ಷನ್ ಸಖತ್ ಆಗಿಯೇ ಆಗ್ತಿದೆ.

ಬಾಕ್ಸ್ ಆಫೀಸ್ ಲೆಕ್ಕಾಚಾರ ನೀಡೋ ಸ್ಯಾಕ್ನಿಲ್ಕ್ ವರದಿ ಪ್ರಕಾರ, ‘I’m Game’ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಭಾರತದಾದ್ಯಂತ ಬರೋಬ್ಬರಿ 5.05 ಕೋಟಿ ರೂಪಾಯಿ ಗಳಿಸಿದೆ. ದೇಶಾದ್ಯಂತ ಒಟ್ಟು 2,714 ಶೋಗಳು ಪ್ರದರ್ಶನ ಕಂಡಿದ್ದು, ಶೇಕಡಾ 44 ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ. ಇದರಲ್ಲಿ ಮಲಯಾಳಂ ವರ್ಷನ್ ಒಂದರಲ್ಲೇ 4.30 ಕೋಟಿ ರೂಪಾಯಿ ಹರಿದುಬಂದಿದ್ರೆ, ತೆಲುಗಿನಲ್ಲಿ 65 ಲಕ್ಷ ಹಾಗೂ ಹಿಂದಿ ಯಲ್ಲಿ 10 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ.
ದುಲ್ಕರ್ ಅವರ ಹಿಂದಿನ ಮಲಯಾಳಂ ಸಿನಿಮಾ ‘ಕಿಂಗ್ ಆಫ್ ಕೊತ್ತ’ ಮೊದಲ ದಿನವೇ 6.85 ಕೋಟಿ ಬಾಚಿತ್ತು. ಆ ದಾಖಲೆಯನ್ನು ‘I’m Game’ ಮುರಿಯೋಕೆ ಆಗದಿದ್ರೂ, ದುಲ್ಕರ್ ಕೆರಿಯರ್‌ನಲ್ಲೇ ಅತಿ ಹೆಚ್ಚು ಓಪನಿಂಗ್ ಪಡೆದ ಟಾಪ್-5 ಸಿನಿಮಾಗಳ ಸಾಲಿಗೆ ಇದು ಸೇರಿಕೊಂಡಿದೆ. ದುಲ್ಕರ್ ಅವರ ‘ಲಕ್ಕಿ ಭಾಸ್ಕರ್’ (7.35 ಕೋಟಿ), ‘ಕಿಂಗ್ ಆಫ್ ಕೊತ್ತ’ (6.85 ಕೋಟಿ) ಮತ್ತು ‘ಕುರುಪ್’ (5.60 ಕೋಟಿ) ಸಿನಿಮಾಗಳ ನಂತರದ ಸ್ಥಾನದಲ್ಲಿ ಈಗ ‘I’m Game’ ಬಂದು ನಿಂತಿದೆ.

ಇಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ, ರಾಕಿ ಭಾಯ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾದ ಒಂದೇ ದಿನದ ಕಲೆಕ್ಷನ್‌ಗಿಂತ ದುಲ್ಕರ್ ಸಿನಿಮಾ ಹೆಚ್ಚು ಗಳಿಸಿದೆ. ‘ಟಾಕ್ಸಿಕ್’ ಸಿನಿಮಾ ತನ್ನ 9ನೇ ದಿನದಲ್ಲಿ 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ರೆ, ‘I’m Game’ ಒಂದೇ ದಿನದಲ್ಲಿ 5.05 ಕೋಟಿ ಗಳಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.



