September 21, 2026
Monday, September 21, 2026
spot_img

UNGA 2026 | ನ್ಯೂಯಾರ್ಕ್‌ಗೆ ಹೊರಟ ಜೈಶಂಕರ್‌; ಮಾರ್ಗಮಧ್ಯೆ ಜ್ಯೂರಿಚ್‌ಗೆ ಆಗಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಭಾಗಿಯಾಗಲಿದ್ದಾರೆ. ಮಾರ್ಗಮಧ್ಯೆ ಜ್ಯೂರಿಚ್‌ಗೆ ಆಗಮಿಸಿದ ಸಚಿವರಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ.

ಜ್ಯೂರಿಚ್‌ ವಿಮಾನ ನಿಲ್ದಾಣದಲ್ಲಿ ಜೈಶಂಕರ್‌ ಅವರನ್ನು ರಾಯಭಾರಿ ಮೃದುಲ್‌ ಕುಮಾರ್‌ ಅವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಯುಎನ್‌ ಜನರಲ್‌ ಅಸೆಂಬ್ಲಿ-2026 ಕಾರ್ಯಕ್ರಮಕ್ಕೆ ಭಾಗವಹಿಸಲು ಜೈ ಶಂಕರ್‌ ಅವರು ಆಗಮಿಸಿದ್ದು, ನಿಮಗೆ ಹೃತ್ಪೂರ್ವಕ ಸ್ವಾಗತ ಎಂದು ರಾಯಭಾರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ಸೆ.22 ರಿಂದ 28 ರವರೆಗೆ ಸಭೆ ನಡೆಯಲಿದ್ದು, ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸಂಪೂರ್ಣ ಸಿದ್ಧತೆ ನಡೆದಿದೆ.

ಭಾರತ, ಸ್ವಿಟ್ಜರ್‌ಲ್ಯಾಂಡ್‌ ಹಾಗೂ ಲೀಚೆನ್ಸ್ಟೇನ್‌ ನಡುವೆ ನಡೆಯುತ್ತಿರುವ ನೂತನ ಬದಲಾವಣೆಗಳು, ಇತ್ತೀಚೆಗೆ ನಡೆದ ಭೇಟಿಯಲ್ಲಿ ಏನೆಲ್ಲಾ ಆಯ್ತು ಎನ್ನುವ ವಿಚಾರವನ್ನು ಅಂಬಾಸಿಡರ್‌ ಮೃದುಲ್‌ ಅವರು ಜೈಶಂಕರ್‌ ಅವರಿಗೆ ಮಾಹಿತಿ ನೀಡಿದ್ದಾರೆ. Restoring trust, managing transformation: A United Nations that delivers for all ಎನ್ನುವ ಥೀಮ್‌ನಲ್ಲಿ ಈ ಬಾರಿಯ ಸಾಮಾನ್ಯ ಸಭೆ ನಡೆಯುತ್ತಿದೆ. ಬಾಂಗ್ಲಾದೇಶದ ಖಲೀಲುರ್‌ ರೆಹಮಾನ್‌ ಅಧ್ಯಕ್ಷತೆ ವಹಿಸಿದ್ದಾರೆ.

ಸಾಮಾನ್ಯ ಸಭೆಯಲ್ಲಿ ಎಲ್ಲಾ 193 ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಹಾಗೂ ಹಿರಿಯ ಪ್ರತಿನಿಧಿಗಳು ಭಾಗಿಯಾಗುತ್ತಾರೆ. ಪ್ರಮುಖ ಅಂತಾರಾಷ್ಟ್ರೀಯ ವಿಷಯಗಳು ಹಾಗೂ ಅದರ ಬಗ್ಗೆ ತಮ್ಮ ರಾಷ್ಟ್ರದ ನಿಲುವೇನು ಎನ್ನುವ ಬಗ್ಗೆ ವಿವರಣೆ ನೀಡಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !