September 21, 2026
Monday, September 21, 2026
spot_img

ಮೊದಲ ಎರಡೇ ದಿನಕ್ಕೆ 6 ಪದಕ: ಜಪಾನ್ ಅಖಾಡದಲ್ಲಿ ಭಾರತೀಯ ಕ್ರೀಡಾಪಟುಗಳ ಆರ್ಭಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್‌ನ ಐಚಿ-ನಗೋಯಾದಲ್ಲಿ ಗ್ರ್ಯಾಂಡ್ ಆಗಿ ಸ್ಟಾರ್ಟ್ ಆಗಿರೋ 2026ರ ಏಷ್ಯನ್ ಗೇಮ್ಸ್‌ನಲ್ಲಿ ನಮ್ಮ ಭಾರತೀಯ ಕ್ರೀಡಾಪಟುಗಳು ಸಖತ್ ಸೌಂಡ್ ಮಾಡ್ತಿದ್ದಾರೆ. ಆಟ ಶುರುವಾಗಿ ಎರಡೇ ದಿನಕ್ಕೆ ಬರೋಬ್ಬರಿ 6 ಪದಕಗಳನ್ನು (4 ಬೆಳ್ಳಿ ಮತ್ತು 2 ಕಂಚು) ಬಾಚಿಕೊಂಡು, ಪದಕದ ಬೇಟೆಯನ್ನು ಗ್ರಾಂಡ್ ಆಗಿ ಓಪನ್ ಮಾಡಿದ್ದಾರೆ.

ಪ್ರತಿಯೊಂದು ದೊಡ್ಡ ಟೂರ್ನಿಯಲ್ಲೂ ನಮಗೆ ಪದಕದ ಖಾತೆ ತೆರೆಯೋ ಶೂಟಿಂಗ್ ವಿಭಾಗವೇ ಈ ಬಾರಿಯೂ ಭಾರತದ ಶಕ್ತಿ ಸಾಬೀತು ಮಾಡಿದೆ. ಶೂಟಿಂಗ್‌ನಿಂದಲೇ ನಮಗೆ ಬರೋಬ್ಬರಿ 5 ಪದಕಗಳು ಬಂದಿವೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಎಲವೆನಿಲ್ ವಲರಿವನ್, ಸೋನಮ್ ಮಾಸ್ಕರ್ ಮತ್ತು ವಿದರ್ಸಾ ಕೆ. ವಿನೋದ್ ಅವರ ಕಾಂಬಿನೇಷನ್ ಭಾರತಕ್ಕೆ ಮೊದಲ ಬೆಳ್ಳಿ ಪದಕ ಗೆದ್ದು ಕೊಟ್ಟಿದೆ. ಇಷ್ಟೇ ಅಲ್ಲದೇ, ವೈಯಕ್ತಿಕ ವಿಭಾಗದಲ್ಲೂ ಕಾಂಪಿಟಿಷನ್ ಕೊಡುತ್ತಾ ಎಲವೆನಿಲ್ ವಲರಿವನ್ ಮತ್ತೊಂದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇತ್ತ ಪುರುಷರ ವಿಭಾಗದಲ್ಲೂ ನಮ್ಮ ಶೂಟರ್‌ಗಳು ಕಮ್ಮಿ ಏನಿಲ್ಲ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಟೀಮ್ ವಿಭಾಗದಲ್ಲಿ ಒಂದು ಬೆಳ್ಳಿ ಪದಕ ಬಂದಿದ್ದರೆ, ವೈಯಕ್ತಿಕ ವಿಭಾಗದಲ್ಲಿ ಹಿಮಾಂಶು ಧಿಲ್ಲೋನ್ ಬೆಳ್ಳಿ ಗೆದ್ದು ಮಿಂಚಿದ್ದಾರೆ, ಹಾಗೆಯೇ ರುದ್ರಾಕ್ಷ್ ಬಾಲಾಸಾಹೇಬ್ ಪಾಟೀಲ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಆದರೆ ಈ ಬಾರಿಯ ಏಷ್ಯನ್ ಗೇಮ್ಸ್‌ನ ಬಿಗ್ ಹೈಲೈಟ್ ಅಂದ್ರೆ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ನಲ್ಲಿ ಭಾರತ ಬರೆದ ಚಾರಿತ್ರಿಕ ಇತಿಹಾಸ. ಮಹಿಳೆಯರ ಟ್ರೆಡಿಷನಲ್ 60 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಸುಚಿಕಾ ತರಿಯಾಲ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಎಂಎಂಎ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಹಿರಿಮೆಗೆ ಪಾತ್ರರಾಗಿದ್ದಾರೆ.

ಇನ್ನೂ ಗೋಲ್ಡ್ ಮೆಡಲ್ ಖಾತೆ ಓಪನ್ ಆಗಬೇಕಿದೆ, ಆದರೆ ನಮ್ಮವರ ಈ ಜೋಶ್ ನೋಡ್ತಿದ್ರೆ ಮುಂಬರುವ ದಿನಗಳಲ್ಲಿ ಕ್ರಿಕೆಟ್, ಅಥ್ಲೆಟಿಕ್ಸ್, ಹಾಕಿ, ಕಬಡ್ಡಿ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಪದಕಗಳ ಸುರಿಮಳೆಯಾಗೋದು ಪಕ್ಕಾ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !