September 22, 2026
Tuesday, September 22, 2026
spot_img

ಅಮ್ಮ, ಮಗಳ ಆರೈಕೆ ಮಾಡೋದಿದೆ ಜಾಮೀನು ನೀಡಿ ಎಂದ ಪವಿತ್ರಾ ಗೌಡಾಗೆ ನಿರಾಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ತಮಗೆ ವಯಸ್ಸಾದ ತಾಯಿಯಿದ್ದಾರೆ, ಬೆಳೆಯುತ್ತಿರುವ ಮಗಳಿದ್ದಾಳೆ. ಅವರ ಆರೈಕೆಗಾಗಿ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಾಸಿಕ್ಯೂಷನ್‌ನಿಂದ ಆಕ್ಷೇಪ ಉಂಟಾದ ಹಿನ್ನೆಲೆ ವಿಚಾರಣೆಯನ್ನು ಮುಂದೂಡಲಾಗಿದೆ.

ಒಂದು ವರ್ಷದಿಂದ ಜೈಲಿನಲ್ಲಿರುವ ಪವಿತ್ರಾ ಗೌಡ ಜಾಮೀನಿನ ಮೇಲೆ ಹೊರಗೆ ಬರೋದಕ್ಕೆ ಕಾಯ್ತಿದ್ದಾರೆ. ಆದರೆ ಅವರಿಗೆ ಜಾಮೀನು ಮಾತ್ರ ಸಿಗುತ್ತಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬರೋಬ್ಬರಿ ೩೦ ಕೈದಿಗಳ ಜತೆ ರೂಮ್‌ ಶೇರ್‌ ಮಾಡ್ತಿದ್ದ ಪವಿತ್ರಾ ಗೌಡ, ತನಗೆ ಕಡಿಮೆ ಜನ ಇರುವ ಬ್ಯಾರಕ್‌ಗೆ ಶಿಫ್ಟ್‌ ಮಾಡುವಂತೆ ಮನವಿ ಮಾಡಿದ್ದರು. ಜೈಲಧಿಕಾರಿಗಳು ಅವರನ್ನು ಐದು ಜನ ಇರುವ ಬ್ಯಾರಕ್‌ಗೆ ಶಿಫ್ಟ್‌ ಮಾಡಿದ್ದರು. ಇಂದು ವಿಚಾರಣೆ ನಂತರ ತಮಗೆ ಬೇಲ್‌ ಸಿಗಬಹುದು ಎನ್ನುವ ಆಸೆಯಲ್ಲಿದ್ದ ಪವಿತ್ರಾಗೆ ನಿರಾಸೆಯಾಗಿದೆ.

ತನ್ನ ಆರೋಗ್ಯ ಸಮಸ್ಯೆಯೂ ಇದೆ. ಹಾಗೆಯೇ ತನ್ನ ಮೇಲಿನ ಆರೋಪಗಳೆಲ್ಲವು ಸುಳ್ಳು ಎಂದು ಅರ್ಜಿಯಲ್ಲಿ ಪವಿತ್ರಾ ಗೌಡ ಹೇಳಿದ್ದರು. ಪವಿತ್ರಾ ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. 59ನೇ ಸೆಷನ್ಸ್ ಕೋರ್ಟ್‌ ನಾಳೆಗೆ ವಿಚಾರಣೆ ಮುಂದೂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !