September 24, 2026
Thursday, September 24, 2026
spot_img

ಲೈಸೆನ್ಸ್‌ ಇಲ್ಲದ ಬಂದೂಕು ವಾಪಸ್ ಗೆ ನವೆಂಬರ್‌ ಒಂದರ ಗಡುವು: ಮುಖ್ಯಮಂತ್ರಿ ಡಿಕೆಶಿ ಖಡಕ್ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೈಸೆನ್ಸ್‌ ಇಲ್ಲದ ಬಂದೂಕುಗಳನ್ನು ಹೊಂದಿರುವವರು ನವೆಂಬರ್‌ ಒಂದರ ಒಳಗಾಗಿ ಬಂದೂಕನ್ನು ತಮ್ಮ ವ್ಯಾಪ್ತಿಗೆ ಬರುವ ಪೊಲೀಸ್‌ ಠಾಣೆಗೆ ನೀಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಖಡಕ್‌ ಸೂಚನೆ ನೀಡಿದ್ದಾರೆ.

ಅರಣ್ಯದಂಚಿನಲ್ಲಿ ವಾಸವಿರು ಜನರ ಬಳಿ ಸಾಮಾನ್ಯವಾಗಿ ಬಂದೂಕು ಇದ್ದೇ ಇರುತ್ತದೆ. ಆದರೆ ಲೈಸೆನ್ಸ್‌ ಇರೋದಿಲ್ಲ. ಕೆಲವರು ಆತ್ಮರಕ್ಷಣೆಗೆ ಬಂದೂಕನ್ನು ಬಳಸಿದರೆ ಹಲವರು ಕಾಡುಪ್ರಾಣಿಗಳನ್ನು ಬೇಟೆಯಾಡಲು ಬಳಕೆ ಮಾಡುತ್ತಿದ್ದಾರೆ. ಈಗ ಹೊಸ ತಂತ್ರಜ್ಞಾನದ ಮೂಲಕ ಕಾಡಿನಲ್ಲಿ ಸಾವಿರಾರು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೀಗಾಗಿ ಯಾರೇ ಕಾಡುಪ್ರಾಣಿಗಳನ್ನು ಬೇಟೆಯಾಡಿದರೆ ತಿಳಿಯುತ್ತದೆ ಎಂದಿದ್ದಾರೆ.

ಕಾಡಿಗೆ ಹೋಗಿ ಬೇಟೆ ಆಡಬೇಡಿ, ಬೇಟೆ ಆಡುವಂತೆ ಪ್ರಚೋದನೆ ಕೂಡ ನೀಡಬೇಡಿ. ನಿಮ್ಮಲ್ಲಿರು ಲೈಸೆನ್ಸ್‌ ಇಲ್ಲದ ಬಂದೂಕುಗಳನ್ನು ಹ್ಯಾಂಡ್‌ಓವರ್‌ ಮಾಡಿ. ಶಾಸಕರುಗಳು ಕೂಡ ತಮ್ಮ ಕ್ಷೇತ್ರದ ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ​ಬಂದೂಕಿನ ಅವಶ್ಯಕತೆ ಇರುವವರಿಗೆ ಸರ್ಕಾರದಿಂದ ಪರವಾನಗಿ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಜೀವ ಭಯ ಇರುವವರು, ಗಣ್ಯರ ಗನ್‌ಮ್ಯಾನ್‌ಗಳು, ಬ್ಯಾಂಕ್‌ ಇನ್ನಿತರ ಭದ್ರತೆ ವೇಳೆ, ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ಹಾಗೂ ಶೂಟಿಂಗ್‌ ಕ್ರೀಡೆಗಾಗಿ ಮಾತ್ರ ಗನ್‌ ಬಳಕೆ ಮಾಡಲು ಅವಕಾಶ ಇದೆ. ಕರ್ನಾಟಕದಲ್ಲಿ ಗನ್‌ ಲೈಸೆನ್ಸ್‌ ಪಡೆಯಲು ವ್ಯಕ್ತಿಗೆ 21 ವರ್ಷವಾಗಿರಬೇಕು. ದೈಹಿಕ ಹಾಗೂ ಮಾನಸಿಕ ಸ್ಥಿರತೆ ಇರಬೇಕು. ಅಪರಾಧದ ಹಿನ್ನೆಲೆ ಇದ್ದರೆ ಗನ್‌ ಲೈಸೆನ್ಸ್‌ ಸಿಗೋದಿಲ್ಲ. ಅರ್ಜಿ ಸಲ್ಲಿಸಿದ ನಂತರ ಪೊಲೀಸರು ಮನೆ ಅಥವಾ ಮನೆಯ ಸುತ್ತಮುತ್ತ ವಿಚಾರಣೆ ನಡೆಸಿ, ಸಂದರ್ಶನ ಮಾಡಿ ನಂತರ ಲೈಸೆನ್ಸ್‌ ನೀಡುತ್ತಾರೆ.

Must Read