September 24, 2026
Thursday, September 24, 2026
spot_img

ಲಂಚ ಪಡೆದು ಕೆಲಸ ಮಾಡಿಕೊಡದ ಆರೋಪ: ಸಕಲೇಶಪುರದ ಸರ್ವೆಯರ್ ಅಮಾನತು

ಹೊಸದಿಗಂತ ವರದಿ ಹಾಸನ:

ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿ ಲಂಚದ ಹಣ ಪಡೆದ ಬಳಿಕವೂ ಕಾರ್ಯ ನಿರ್ವಹಿಸದ ಸಕಲೇಶಪುರದ ಸರ್ವೆಯರ್‌ ಒಬ್ಬರನ್ನು ಅಮಾನತು ಮಾಡಲಾಗಿದೆ.

ಸಕಲೇಶಪುರದ ಸರ್ವೆಯರ್ ಮನು ಅಮಾನತುಗೊಂಡವರು. ಭೂ ದಾಖಲೆಗಳ ಉಪ ನಿರ್ದೇಶಕಿ ಹೇಮಲತಾ.ಎಂ.ಡಿ. ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

ಸೆ. 19 ರಂದು ಸಕಲೇಶಪುರದಲ್ಲಿ ನಡೆದ ಪ್ರಜಾ ಸೇವಾ ಆಂದೋಲನದ ಸಭೆಯಲ್ಲಿ ಸರ್ವೆ ಇಲಾಖೆಗೆ ಸಂಬಂಧಿಸಿದ ಅಕ್ರಮದ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಸಕಲೇಶಪುರ ತಾಲ್ಲೂಕಿನ ಉದೇವಾರ ಗ್ರಾಮದ ಶಂಕರಾಚಾರ್ ಅವರಿಗೆ ಕೆಲಸ ಮಾಡಿಕೊಡುವುದಾಗಿ ಹೇಳಿ ಹಣ ಪಡೆದಿದ್ದರೂ ಕೆಲಸ ಮಾಡಿಕೊಡಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕೆಲಸ ಮಾಡಿಕೊಡದ ಬಗ್ಗೆ ಪ್ರಶ್ನಿಸಿದಾಗ ಹಣ ಪಡೆದಿರುವುದನ್ನು ಬಾಂಡ್ ಪೇಪರ್‌ನಲ್ಲಿ ಬರೆದುಕೊಟ್ಟಿದ್ದರು ಎನ್ನಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಸರ್ವೆಯರ್ ಮನು ಅವರನ್ನು ಅಮಾನತು ಮಾಡಿ ಭೂ ದಾಖಲೆಗಳ ಉಪ ನಿರ್ದೇಶಕರು ಆದೇಶಿಸಿದ್ದಾರೆ.

Must Read