September 24, 2026
Thursday, September 24, 2026
spot_img

ಆಟೋದಲ್ಲಿ 17 ಶಾಲಾ ಮಕ್ಕಳನ್ನು ಕೂರಿಸಿಕೊಂಡ ಹೊರಟ ಚಾಲಕ: ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಟೋವೊಂದರಲ್ಲಿ ಎಷ್ಟು ಜನ ಕೂರೋಕೆ ಸಾಧ್ಯ? ಹೆಚ್ಚೆಂದರೆ ನಾಲ್ಕು ಜನ ಅಡ್ಜಸ್ಟ್‌ ಮಾಡಿಕೊಂಡು ಕೂರಬಹುದು, ಮಕ್ಕಳಾದರೆ ಐದು ಜನರನ್ನು ಕೂರಿಸಬಹುದು. ಆದರೆ ಮಕ್ಕಳನ್ನು ಶಾಲೆಯಿಂದ ಮನೆಗೆ ಮನೆಯಿಂದ ಶಾಲೆಗೆ ಕರೆದುಕೊಂಡುಬರುವ ಆಟೋವೊಂದರಲ್ಲಿ ಬರೋಬ್ಬರಿ 17 ಮಂದಿಯನ್ನು ಕೂರಿಸಿಕೊಂಡು ಆಟೋ ಚಾಲನೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಪೋಷಕರನ್ನು ಹಾಗೂ ಆಟೋದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಾರಾಷ್ಟ್ರದ ಭಿವಾಂಡಿ ಎನ್ನುವಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿಯೊಬ್ಬರು 17 ಮಕ್ಕಳನ್ನು ಆಟೋದಲ್ಲಿ ತುಂಬಿಕೊಂಡಿದ್ದರು. ಮಕ್ಕಳಿಗೆ ಉಸಿರಾಡಲು ಜಾಗವಿಲ್ಲದ ಕಿಷ್ಕಿಂದೆಯಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಡಿಯೋ ಮಾಡಿದ ವ್ಯಕ್ತಿ ಪ್ರೂಫ್‌ಗಾಗಿ ಆಟೋ ಒಳಗಡೆ ಕುಳಿತಿದ್ದ 17 ಮಕ್ಕಳನ್ನು ಕೆಳಕ್ಕೆ ಇಳಿಸಿದ್ದಾರೆ. ಇದಕ್ಕೆ ಆಟೋ ಚಾಲಕ ಅಡ್ಡಿಪಡಿಸಿದ್ದಾರೆ. ಮಕ್ಕಳನ್ನು ಇಳಿಸಬೇಡಿ ಎಂದು ಸಿಟ್ಟಿನಲ್ಲಿ ಹೇಳಿದ್ದಾರೆ. ದೊಡ್ಡವರ ಮಾತುಕತೆಗಳನ್ನು ಕೇಳಿದ ಮಕ್ಕಳು ಹೆದರಿ ಕಣ್ಣೀರಿಟ್ಟಿದ್ದಾರೆ.

ಮಕ್ಕಳು ಶಾಲೆಗೆ ಹೇಗೆ ಹೋಗ್ತಾರೆ, ಶಾಲೆಯಿಂದ ಹೇಗೆ ಬರ್ತಾರೆ ಎನ್ನುವುದನ್ನು ಪೋಷಕರು ಗಮನಿಸೋದಿಲ್ಲವಾ? ಮಕ್ಕಳ ಸುರಕ್ಷತೆ ಬಗ್ಗೆ ನಾಗರಿಕರಿಗೂ ಚಿಂತೆ ಇಲ್ಲವಾ ಎನ್ನುವ ಕಮೆಂಟ್‌ಗಳು ಬರುತ್ತಿವೆ. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಪೊಲೀಸರು ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !