September 24, 2026
Thursday, September 24, 2026
spot_img

WEATHER | ಮುಂದುವರಿದ ಮಳೆ ಆರ್ಭಟ, ಬೆಂಗಳೂರಿನಲ್ಲಿ ಚಳಿ ಚಳಿ ವಾತಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಇಂದು ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಚಳಿಯ ವಾತಾವರಣ ಇದೆ. ಶಾಲೆಗೆ ಹಾಗೂ ಕಚೇರಿಗೆ ಹೋಗುವವರು ಚಳಿಗಾಲದ ರೀತಿ ಸ್ವೆಟರ್‌, ಮಫ್ಲರ್‌ ಹಾಕಿಕೊಂಡು ಹೊರಟಿದ್ದಾರೆ.

ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿಯೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಇಂದು ಹಾಗೂ ನಾಳೆ ಗುಡುಗು, ಸಿಡಿಲು ಹಾಗೂ ಗಾಳಿ ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ನಾಳೆ ಮಳೆ ಚುರುಕಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಕೆಲವೆಡೆ ಭಾರಿ ಮಳೆಯಾಗಬಹುದು. ಕರಾವಳಿ ಭಾಗದಲ್ಲಿ ಗಾಳಿಯ ವೇಗವೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಹಾಗೂ ಸಮುದ್ರ ತೀರಕ್ಕೆ ತೆರಳುವವರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಎಲ್ಲೆಲ್ಲಿ ಮಳೆ?

ಕಲಬುರಗಿ
ವಿಜಯಪುರ
ಬಾಗಲಕೋಟೆ
ಬೀದರ್‌
ರಾಯಚೂರು
ಯಾದಗಿರಿ
ಬೆಂಗಳೂರು
ಮೈಸೂರು
ಹಾಸನ
ಚಿಕ್ಕಮಗಳೂರು
ಶಿವಮೊಗ್ಗ
ಚಿತ್ರದುರ್ಗ

Must Read