ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಆರಂಭವಾಗಿ ಕೆಲವೇ ವಾರಗಳಾಗಿದೆ ಆದರೂ ಸೀಸನ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ನಿನ್ನೆ ಮಧ್ಯರಾತ್ರಿ ಮಿಡ್‌ವೀಕ್ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ಮನೆಯಿಂದ ಯಾರು ಹೋಗಿದ್ದಾರೆ ಎನ್ನುವ ಕುತೂಹಲ ಎಲ್ಲರನ್ನು ಕಾಡಿದೆ.
ಎಮರ್ಜೆನ್ಸಿ ಎಕ್ಸಿಟ್ ಹೆಸರಿನಲ್ಲಿ ಮಧ್ಯರಾತ್ರಿ ಎಲ್ಲರನ್ನೂ ಎಬ್ಬಿಸಿ ಎಲಿಮಿನೇಷನ್ ಮಾಡಲಾಗಿದೆ. ಎಲಿಮಿನೇಟ್ ಆಗಿರುವ ವ್ಯಕ್ತಿ ಫಿನಾಲೆ ಹೋಗುವಷ್ಟು ಸ್ಟ್ರಾಂಗ್ ಆದ ಕಂಟೆಸ್ಟೆಂಟ್ ಎಂದು ಹೇಳಲಾಗುತ್ತಿದೆ. ವಾರಾಂತ್ಯದಲ್ಲಿ ಕಿಚ್ಚ ಸುದೀಪ ಈ ಮನೆಯಲ್ಲಿ ಯಾರಿಗೂ ಪರ್ಮನೆಂಟ್ ಜಾಗ ಅಂತಿಲ್ಲ, ಯಾರು ಯಾವಾಗ ಬೇಕಾದರೂ ಹೊರಕ್ಕೆ ಹೋಗಬಹುದು ಎಂದು ಹೇಳಿದ್ದರು. ಅಂತೆಯೇ ಮಧ್ಯರಾತ್ರಿ ಸ್ಟ್ರಾಂಗ್ ಕಂಟೆಸ್ಟೆಂಟ್ ಒಬ್ಬರು ಹೊರಕ್ಕೆ ಹೋಗಿದ್ದಾರೆ.
ಎಲಿಮಿನೇಷನ್ ಇರಲಿದೆ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದರೂ, ಜನರ ಮನ ಗೆದ್ದಿದ್ದ, ಬಿಗ್ ಬಾಸ್ ಮನೆಯೊಳಗೆ ತನ್ನದೇ ಆದ ಛಾಪು ಮೂಡಿಸಿದ್ದ ಮತ್ತು ವಿನ್ನರ್ ರೇಸ್‌ನಲ್ಲಿದ್ದಾರೆ ಎಂದು ವೀಕ್ಷಕರು ಭಾವಿಸಿದ್ದ ಸ್ಪರ್ಧಿಯೇ ಎಮರ್ಜೆನ್ಸಿ ಎಕ್ಸಿಟ್ ಪಡೆಯುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಇದುವರೆಗೆ ಮನೆಯೊಳಗಿನ ಆಟ, ವ್ಯಕ್ತಿತ್ವ ಹಾಗೂ ವಿವಿಧ ಸಂದರ್ಭಗಳಲ್ಲಿ ಸ್ಪರ್ಧಿಯ ನಡೆ-ನುಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಈ ಎಕ್ಸಿಟ್ ಕೇವಲ ಮನೆಯ ಸದಸ್ಯರಿಗೆ ಮಾತ್ರವಲ್ಲದೆ,ತಮ್ಮ ನೆಚ್ಚಿನ ಸ್ಪರ್ಧಿಯನ್ನು ವಿನ್ನರ್ ಆಗಿ ನೋಡಲು ಬಯಸಿದ್ದ ವೀಕ್ಷಕರಿಗೂ ಶಾಕ್ ನೀಡಲಿದೆ.
https://www.instagram.com/reel/Ddp7ubjBUla/?utm_source=ig_embed&ig_rid=Afeyz7IlFqXvaFJbQJfhDZi
ಕಲರ್ಸ್ ಕನ್ನಡದ ಪ್ರೋಮೋದಲ್ಲಿ ಎಲಿಮಿನೇಷನ್ ಪ್ರಕ್ರಿಯೆಯನ್ನು ತೋರಿಸಲಾಗಿದೆ. ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ಹೋದವರು ಲಿಖಿತ್ ಹಾಗೂ ಜಗ್ಗ ಅವರಿಗೆ ಕ್ಲೋಸ್ ಇರುವ ವ್ಯಕ್ತಿ ಎಂದು ಊಹಿಸಲಾಗಿದೆ.



