September 26, 2026
Saturday, September 26, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 100 | ಬೆಳಗ್ಗಿನ ಗಡಿಬಿಡಿಗೆ ಬೆಸ್ಟ್ ಬ್ರೇಕ್‌ಫಾಸ್ಟ್ ಈ ರವೆ ಪಡ್ಡು, ಒಮ್ಮೆ ಟ್ರೈ ಮಾಡಿ

ಬೆಳಗ್ಗಿನ ಗಡಿಬಿಡಿಯಲ್ಲಿ ಇವತ್ತು ತಿಂಡಿಗೆ ಏನು ಮಾಡೋದು? ಅನ್ನೋ ಯೋಚನೆ ಎಲ್ಲರನ್ನೂ ಕಾಡೋದು ಮಾಮೂಲಿ. ಅದರಲ್ಲೂ ಮನೆಯಲ್ಲಿ ಇಡ್ಲಿ ಅಥವಾ ದೋಸೆ ಹಿಟ್ಟು ಇಲ್ಲದ ದಿನವಂತೂ ಟೆನ್ಶನ್ ಮತ್ತು ಜಾಸ್ತಿಯಾಗುತ್ತೆ. ಅಂತಹ ಟೈಮ್‌ನಲ್ಲಿ ಈ ರವೆ ಪಡ್ಡುಮಾಡಬಹುದು. ಹಿಟ್ಟು ರುಬ್ಬುವ ಅಥವಾ ರಾತ್ರಿಯಿಡೀ ನೆನೆಸುವ ಯಾವುದೇ ತೊಂದರೆ ಇಲ್ಲದೆ, ಕೇವಲ 15 ನಿಮಿಷಗಳಲ್ಲಿ ಈ ತಿಂಡಿಯನ್ನು ನೀವು ರೆಡಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಉಪ್ಪಿಟ್ಟು ರವೆ

ಮೊಸರು

ಈರುಳ್ಳಿ

ಹಸಿಮೆಣಸಿನಕಾಯಿ

ಕ್ಯಾರೆಟ್ ತುರಿ

ಜೀರಿಗೆ

ಕೊತ್ತಂಬರಿ ಸೊಪ್ಪು

ಅಡುಗೆ ಸೋಡಾ

ಉಪ್ಪು ಮತ್ತು ಎಣ್ಣೆ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ರವೆ, ಮೊಸರು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅರ್ಧ ಕಪ್ ನೀರು ಹಾಕಿ, ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ 5 ರಿಂದ 10 ನಿಮಿಷ ಮುಚ್ಚಿಡಬೇಕು. ನಂತರ ನೆನೆದ ಹಿಟ್ಟಿಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕ್ಯಾರೆಟ್ ತುರಿ, ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ, ಪದ್ದು ಮಾಡುವ ಜಸ್ಟ್ 1 ನಿಮಿಷ ಮುಂಚೆ ಅಡುಗೆ ಸೋಡಾ ಹಾಕಿ, ಅದರ ಮೇಲೆ ಒಂದು ಚಮಚ ನೀರು ಸುರಿದು ಮಿಕ್ಸ್ ಮಾಡಬೇಕು.

ನಂತರ ಪದ್ದು ಕಾವಲಿಯನ್ನು ಬಿಸಿ ಮಾಡಿ, ಎಲ್ಲಾ ಕುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ. ನಂತರ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 2-3 ನಿಮಿಷ ಬೇಯಿಸಿ. ಕೆಳಭಾಗ ಗೋಲ್ಡನ್ ಬ್ರೌನ್ ಆದ ತಕ್ಷಣ ಚಮಚದಿಂದ ಉಲ್ಟಾ ಮಾಡಿ, ಇನ್ನೊಂದು ಕಡೆಯೂ ಚೆನ್ನಾಗಿ ಬೇಯಿಸಿ ತೆಗೆದರೆ ಬಿಸಿಬಿಸಿ ರವೆ ಪದ್ದು ರೆಡಿ.

Must Read