September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 101 | ಬೆಳಗಿನ ತಿಂಡಿಗೆ ಏನು ಮಾಡೋದು ಅಂತ ಗೊತ್ತಾಗ್ತಿಲ್ವಾ? ಈ ಸ್ಪೆಷಲ್ ‘ಸುಸ್ಲಾ’ ಟ್ರೈ ಮಾಡಿ

ಬೆಳಗ್ಗೆ ಎದ್ದ ತಕ್ಷಣ ಇವತ್ತು ತಿಂಡಿಗೆ ಏನು ಮಾಡೋದು? ಅನ್ನೋ ಯೋಚನೆ ಎಲ್ಲರ ಮನೆ ಕಥೆ. ಅದರಲ್ಲೂ ಆಫೀಸ್, ಮಕ್ಕಳ ಸ್ಕೂಲ್ ಅಂತ ಅವಸರ ಇರುವಾಗಲಂತೂ ಟೆನ್ಷನ್ ಡಬಲ್ ಆಗುತ್ತೆ. ಇಂಥ ಟೈಮ್‌ನಲ್ಲಿ ಗೃಹಿಣಿಯರ ಕೈ ಹಿಡಿಯುವುದೇ ಉತ್ತರ ಕರ್ನಾಟಕದ ಫೇಮಸ್ ಮಂಡಕ್ಕಿ ಸುಸ್ಲಾ. ಮನೆಯಲ್ಲಿರೋ ಕೆಲವೇ ಪದಾರ್ಥಗಳನ್ನು ಬಳಸಿ, ಮಾಡಬಹುದಾದ ರೆಸಿಪಿ ಇದು. ಒಮ್ಮೆ ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು

ಮಂಡಕ್ಕಿ

ಈರುಳ್ಳಿ ಮತ್ತು ಟೊಮೆಟೊ

ಹಸಿ ಮೆಣಸಿನಕಾಯಿ

ಪುಟಾಣಿ ಪುಡಿ

ಕಡಲೆಕಾಯಿ ಬೀಜ

ಎಣ್ಣೆ

ಸಾಸಿವೆ, ಜೀರಿಗೆ, ಅರಿಶಿನ, ಕರಿಬೇವು

ಉಪ್ಪು, ನಿಂಬೆರಸ, ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ

ಮೊದಲುಮಂಡಕ್ಕಿಯನ್ನು ನೀರಿನಲ್ಲಿ 1 ನಿಮಿಷ ನೆನೆಸಿ, ತಕ್ಷಣ ಎರಡೂ ಕೈಗಳಿಂದ ನೀರನ್ನು ಗಟ್ಟಿಯಾಗಿ ಹಿಂಡಿ ಒಂದು ಪಾತ್ರೆಗೆ ಎತ್ತಿಟ್ಟುಕೊಳ್ಳಬೇಕು. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕಡಲೆಕಾಯಿ ಬೀಜ ಮತ್ತು ಕರಿಬೇವು ಹಾಕಿ ಕೆಂಪಾಗುವವರೆಗೆ ಹುರಿದು, ಬಳಿಕ ಅರಿಶಿನ, ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಬಾಡಿಸಿ. ನಂತರ ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿಕೊಂಡು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಹಿಂಡಿಟ್ಟ ಮುಂಡಕ್ಕಿಯನ್ನು ಸೇರಿಸಿ ಒಗ್ಗರಣೆಯೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಬೇಕು. ಕೊನೆಯದಾಗಿ ಪುಟಾಣಿ ಪುಡಿ, ನಿಂಬೆರಸ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ ಕೈಯಾಡಿಸಿದರೆ ಬಿಸಿಬಿಸಿ ಸುಸ್ಲಾ ಸಿದ್ಧ.

Must Read