September 27, 2026
Sunday, September 27, 2026
spot_img

ಕೊನೆ ಕ್ಷಣದವರೆಗೂ ಹೋರಾಡಿ ಮಂಡಿಯೂರಿದ ಸಿಂಧು, ಉನ್ನತಿ; ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ನಿರಾಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಭಾನುವಾರ ನಡೆದ ಬ್ಯಾಡ್ಮಿಂಟನ್ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಆದರೆ ಮತ್ತೊಂದೆಡೆ ಬಾಕ್ಸಿಂಗ್ ಹಾಗೂ ಬಿಲ್ಲುಗಾರಿಕೆಯಲ್ಲಿ ಪದಕದ ಭೇಟೆಯನ್ನು ಮುಂದುವರಿಸಿದ್ದಾರೆ.

ಬ್ಯಾಡ್ಮಿಂಟನ್‌ನಲ್ಲಿ ನಿರಾಸೆ

ಭಾರತದ ಬ್ಯಾಡ್ಮಿಂಟನ್ ಕ್ವೀನ್, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರ ಸೋಲು ಅಭಿಮಾನಿಗಳಿಗೆ ಆಘಾತ ನೀಡಿದೆ. ಚೀನಾದ ಆಟಗಾರ್ತಿ ಚೆನ್ ಯು ಫೀ ವಿರುದ್ಧದ ಪಂದ್ಯದಲ್ಲಿ ಸಿಂಧು ಮೊದಲ ಗೇಮ್ ಅನ್ನು 21-11 ರಿಂದ ಗೆದ್ದು ಭರ್ಜರಿ ಆರಂಭ ಪಡೆದಿದ್ದರು. ಆದರೆ ಆ ನಂತರ ಪುಟಿದೆದ್ದ ಚೀನಾ ಆಟಗಾರ್ತಿ ಸಿಂಧು ಅವರಿಗೆ ಯಾವುದೇ ಅವಕಾಶ ನೀಡದೆ 21-11, 18-21, 10-21 ಅಂತರದಿಂದ ಪಂದ್ಯವನ್ನು ಗೆದ್ದುಕೊಂಡರು.

ಮತ್ತೊಂದು ರೋಚಕ ಪಂದ್ಯದಲ್ಲಿ 18 ವರ್ಷದ ಯುವ ಆಟಗಾರ್ತಿ ಉನ್ನತಿ ಹೂಡಾ ಸಹ ಜಪಾನ್‌ನ ಮಾಜಿ ವಿಶ್ವ ನಂ. 1 ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ ಹೋರಾಟ ನಡೆಸಿ 16-21, 21-14, 17-21 ರಿಂದ ಸೋತು ಹೊರಬಿದ್ದರು. ಇದರೊಂದಿಗೆ ವೈಯಕ್ತಿಕ ವಿಭಾಗದಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದ್ದು, ಬ್ಯಾಡ್ಮಿಂಟನ್‌ನಲ್ಲಿ ಪುರುಷರ ತಂಡ ಕಂಚಿನ ಪದಕ ಪಡೆದಿದೆ.

 ರಿಂಗ್‌ನಲ್ಲಿ ಅಬ್ಬರಿಸಿದ ಬಾಕ್ಸರ್ ಅಂಕುಶ್

ಬ್ಯಾಡ್ಮಿಂಟನ್ ಬೇಸರದ ನಡುವೆ ಬಾಕ್ಸಿಂಗ್ ರಿಂಗ್‌ನಿಂದ ದೇಶಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ. ಪುರುಷರ 80 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ತಜಕಿಸ್ತಾನದ ನೆಕ್ರೂಜ್ ಸಲಿಮೋವ್ ಅವರನ್ನು ಧೂಳೀಪಟ ಮಾಡಿದ ಬಾಕ್ಸರ್ ಅಂಕುಶ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇದನ್ನೂ ಓದಿ:

ಅಥ್ಲೆಟಿಕ್ಸ್‌ನಲ್ಲಿ ಫೈನಲ್ ತಲುಪಿದ ಭಾರತೀಯರು

.ಪುರುಷರ ಲಾಂಗ್ ಜಂಪ್ ಫೈನಲ್‌ಗೆ ಶ್ರೀಶಂಕರ್ ಮುರಳಿ ಮತ್ತು ಡೇವಿಡ್ ಸೊಲೊಮನ್ ಅರ್ಹತೆ ಪಡೆದಿದ್ದಾರೆ. ಇತ್ತ ಮಹಿಳಾ 400 ಮೀಟರ್ ಹರ್ಡಲ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ವಿತ್ಯಾ ರಾಮರಾಜ್ ಮತ್ತು ಅನು ರಾಘವನ್ ಫೈನಲ್ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.

Must Read