ಹೊಸದಿಗಂತ ವರದಿ ಕಲಬುರಗಿ:
ನಗರದ ಕೋಟೆ ಮುಂಭಾಗದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ ಪ್ರತಿಷ್ಠಾಪನೆ ಮಾಡಲಾಗಿರುವ ಕೇದಾರನಾಥ ಮಾದರಿಯ ಭವ್ಯ ಮಂದಿರಕ್ಕೆ ಭೇಟಿ ನೀಡಿದ ಕೊಪ್ಪಳ ಗವಿಮಠದ ಶ್ರೀಗಳು ಹಿಂದೂ ಮಹಾಗಣಪತಿಯ ದರುಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀಗಳು ಹಿಂದೂ ಮಹಾಗಣಪತಿಯ ಆರತಿ ನೆರವೇರಿಸಿ ಭಕ್ತರೊಂದಿಗೆ ದೇವರ ಆಶೀರ್ವಾದ ಪಡೆದರು. ಗಣೇಶೋತ್ಸವದ ಅಂಗವಾಗಿ ಸಮಿತಿಯು ರೂಪಿಸಿರುವ ಕೇದಾರನಾಥ ಮಾದರಿಯ ಮಂದಿರ ಹಾಗೂ ಅಲಂಕಾರವನ್ನು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಚನ್ನಮಲ್ಲ ಶ್ರೀಗಳು ಗೋಳಾ, ತೋಳನೂರ ಹಾಗು ನರೋಣಾ ಶ್ರೀಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಪ್ರಚಾರಕ ವಿಜಯ ಮಾಹಾಂತೇಶ, ಶಾಸಕ ಬಸವರಾಜ ಮತ್ತಿಮಡು, ಸಮಾಜ ಸೇವಕಿ ಜಯಶ್ರೀ ಮತ್ತಿಮಡು ಸೇರಿದಂತೆ ಹಲವರು ಭಾಗವಹಿಸಿ ಮಹಾಗಣಪತಿಗೆ ಪೂಜೆ ಸಲ್ಲಿಸಿದರು.
ಇದನ್ನೂ ಓದಿ:
ಈ ವೇಳೆ ಹಿಂದೂ ಮಹಾಗಣಪತಿ ಸಮಿತಿಯ ಅಧ್ಯಕ್ಷ ಶ್ರೀಮಂತ ರಾಜು ನವಲದಿ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಗಂಗಾ, ಸಂಜೀವ್ ಗುಪ್ತಾ, ಕೋಶಾಧ್ಯಕ್ಷ ಶ್ರೀಶೈಲ ಮೂಲಗೆ, ಸದಸ್ಯ ಶಿವರಾಜ ಸಂಗೋಳಗಿ, ಅಶ್ವಿನ್ ಕುಮಾರ್, ಪ್ರಶಾಂತ್ ಗುಡ್ಡಾ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.



