ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರದೋಷ್ ಹೇಳಿಕೆಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ದಾಖಲಿಸಿಕೊಳ್ಳಲಾಗುತ್ತಿದೆ.
ಪ್ರಕರಣಕ್ಕೆ ಇಂದು ಬಲವಾದ ತಿರುವು ಸಿಗುವ ಸಾಧ್ಯತೆ ಇದೆ. ಇಂದು ಬೆಳಗ್ಗೆ 11 ಗಂಟೆಗೆ ಕೋರ್ಟ್ ಹಾಜರಾಗಲಿದ್ದು, 59 ನೇ ಸಿಸಿಎಚ್ ಕೋರ್ಟ್ ನಲ್ಲಿ ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯಲಿದೆ. ಪ್ರದೋಷ್ ಸಾಕ್ಷಿ ಹೇಳುವ ವೇಳೆ ಯಾವೆಲ್ಲಾ ಮಾಹಿತಿ ನೀಡುತ್ತಾರೆ, ಯಾರ ಬಗ್ಗೆ ಹೇಳುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಇತ್ತ ಆರೋಪಿ ದರ್ಶನ್ ಹಾಗೂ ಇತರರಿಗೆ ಭಯ ಶುರುವಾಗಿದೆ.
ಈಗಾಗಲೇ ಪ್ರದೋಷ್ ಲಿಖಿತ ರೂಪದಲ್ಲಿ ಸಂಪೂರ್ಣ ಘಟನೆಯ ವಿವರವನ್ನು ನೀಡಿದ್ದಾರೆ. ಹೇಳಿಕೆಗಳ ನಂತರವೇ ದರ್ಶನ್ ಹಾಗೂ ಪವಿತ್ರಾ ಗೌಡಗೆ ಇನ್ನಷ್ಟು ಸಂಕಷ್ಟ ಆರಂಭವಾಗಿತ್ತು. ಇದೀಗ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಒಟ್ಟು 16 ಆರೋಪಿಗಳ ಪರ ವಕೀಲರು ಪ್ರದೂಷ್‌ನನ್ನು ಸುದೀರ್ಘ ಕ್ರಾಸ್ ಎಕ್ಸಾಮಿನೇಷನ್‌ಗೆ ಒಳಪಡಿಸಲಿದ್ದಾರೆ.
ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಹೀಗಾಗಿ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡುವ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ದರ್ಶನ್ ಪರ ವಕೀಲು ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇಂದು ಕೊಲೆಯಲ್ಲಿ ಯಾರ ಪಾತ್ರ ಏನು? ಮಾಸ್ಟರ್‌ಮೈಂಡ್ ಯಾರು ಎಂಬೆಲ್ಲಾ ಮಾಹಿತಿ ನೀಡಿಲಿದ್ದು, ಪ್ರಕರಣದ ಸ್ವರೂಪವೇ ಬದಲಾಗುವ ಸಾಧ್ಯತೆ ಇದೆ.



