September 30, 2026
Wednesday, September 30, 2026
spot_img

ಮಳೆಯ ಆರ್ಭಟಕ್ಕೆ ನಲುಗಿದ ಬೆಂಗಳೂರು: ಹಲವು ರಸ್ತೆಗಳು ಜಲಾವೃತ, ಕೆ.ಆರ್‌ ಮಾರುಕಟ್ಟೆ ಅಸ್ತವ್ಯಸ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಪ್ರಮುಖ ರಸ್ತೆಗಳೆಲ್ಲ ಜಲಾವೃತಗೊಂಡಿವೆ.

ಬೆಂಗಳೂರಿನ ಹೃದಯ ಭಾಗದಲ್ಲಿರುವ ಕೆ.ಆರ್‌ ಮಾರುಕಟ್ಟೆಯಲ್ಲಿ ನೀರು ನುಗ್ಗಿದ್ದು, ವ್ಯಾಪಾರಿಗಳಿಗೆ ತಮ್ಮ ತರಕಾರಿ ಇನ್ನಿತರ ಸರಕುಗಳ ರಕ್ಷಣೆಯೇ ದೊಡ್ಡ ಕೆಲಸವಾಗಿತ್ತು. ಇನ್ನು ಮಳೆ ಹಾಗೂ ಕೆಆರ್‌ ಮಾರುಕಟ್ಟೆಯಲ್ಲಿ ಕಾಲಿಡುವುದಕ್ಕೂ ಆಗುವುದಿಲ್ಲ ಎನ್ನುವ ಸುದ್ದಿ ಎಲ್ಲೆಡೆ ಹರಡಿದ್ದು, ಗ್ರಾಹಕರು ಮಾರುಕಟ್ಟೆಗೆ ಆಗಮಿಸಿಲ್ಲ.

ಹೂವಿನ ವ್ಯಾಪಾರಿಗಳಿಗೆ ಗಣನೀಯವಾಗಿ ನಷ್ಟವಾಗುತ್ತಿದ್ದು, ಜನ ಮಾರುಕಟ್ಟೆಗೆ ಆಗಮಿಸಿ ಎಂದಿನಂತೆ ಹೂವುಗಳನ್ನು ಖರೀದಿ ಮಾಡಬೇಕು. ಒಂದು ದಿನ ಬಿಟ್ಟರೆ ಹೂವುಗಳು ಬಾಡಿ ಹೋಗುವ ಕಾರಣ ಯಾರೂ ಖರೀದಿ ಮಾಡೋದಿಲ್ಲ. ನಮಗೆ ಲಾಸ್‌ ಆಗುತ್ತದೆ ಎಂದು ವ್ಯಾಪಾರಿಗಳು ಬೇಸರಿಸಿಕೊಂಡಿದ್ದಾರೆ.

ಶಾಂತಿನಗರ, ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್, ಮೆಜೆಸ್ಟಿಕ್, ಚಾಮರಾಜ್‌ಪೇಟೆ ಮತ್ತು ಮಲ್ಲೇಶ್ವರಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು ಕೆರೆಯಂತಾಗಿವೆ. ಇದರಿಂದಾಗಿ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಟ್ರಾಫಿಕ್‌ ಜಾಮ್‌ ಅಲ್ಲಲ್ಲಿ ಕಾಣಿಸುತ್ತಿದೆ.

Must Read