September 30, 2026
Wednesday, September 30, 2026
spot_img

ಏಷ್ಯನ್ ಗೇಮ್ಸ್: ದಕ್ಷಿಣ ಕೊರಿಯಾ ವಿರುದ್ಧ ಭರ್ಜರಿ ಜಯ; ಫೈನಲ್‌ಗೆ ಲಗ್ಗೆ ಇಟ್ಟ ಭಾರತ ಮಹಿಳಾ ಹಾಕಿ ತಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026 ರಂಗೇರಿದ್ದು, ಬುಧವಾರ ನಡೆದ ಮಹಿಳಾ ಹಾಕಿಯ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 2-0 ಗೋಲುಗಳಿಂದ ಮಣಿಸಿದ ಭಾರತದ ಮಹಿಳಾ ಹಾಕಿ ತಂಡ ಫೈನಲ್ ಲಗ್ಗೆ ಇಟ್ಟಿದೆ. ಚಿನ್ನದ ಪದಕಕ್ಕಾಗಿ ಚೀನಾ ವಿರುದ್ಧ ಸೆಣಸಾಡಲಿದೆ.

ದಕ್ಷಿಣ ಕೊರಿಯಾ ಮಣಿಸಿದ ಭಾರತ

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳಿಂದ ತೀವ್ರ ಪೈಪೋಟಿ ಕಂಡುಬಂದರೂ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತ ತಂಡ ಕೊರಿಯಾ ಕೋಟೆಯನ್ನು ಭೇದಿಸಿತು.

ಭಾರತಕ್ಕೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಇಶಿಕಾ, ಚೆಂಡನ್ನು ಗೋಲು ಪೆಟ್ಟಿಗೆಗೆ ತಳ್ಳುವ ಮೂಲಕ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಕೇವಲ ನಾಲ್ಕು ನಿಮಿಷಗಳ ಅಂತರದಲ್ಲಿ ಭಾರತದ ಸಲಿಮಾ ಟೆಟೆ ಅವರು ನೀಡಿದ ಪಾಸ್, ಕೊರಿಯಾದ ಡಿಫೆಂಡರ್ ಸ್ಟಿಕ್‌ಗೆ ಬಡಿದು ಗೋಲಾಯಿತು. ಆ ಮೂಲಕ ಭಾರತ 2-0 ಮುನ್ನಡೆ ಸಾಧಿಸಿತು.

ಟೆನಿಸ್‌ನಲ್ಲಿ ಭಾರತಕ್ಕೆ ನಿರಾಸೆ

ಹಾಕಿಯಲ್ಲಿ ಸಿಹಿ ಸುದ್ದಿ ಸಿಕ್ಕರೆ, ಟೆನಿಸ್ ಅಂಗಳದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಏಷ್ಯನ್ ಗೇಮ್ಸ್‌ನ ಪುರುಷರ ಡಬಲ್ಸ್‌ನಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದ್ದು, 1998ರ ನಂತರ ಇದೇ ಮೊದಲ ಬಾರಿಗೆ ಭಾರತ ತಂಡ ಯಾವುದೇ ಪದಕವಿಲ್ಲದೆ ಖಾಲಿ ಕೈಯಲ್ಲಿ ಮರಳುವಂತಾಗಿದೆ.

ಇದನ್ನೂ ಓದಿ:

ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಅನಿರುದ್ಧ್ ಚಂದ್ರಶೇಖರ್ ಮತ್ತು ಎನ್. ಬಾಲಾಜಿ ಜೋಡಿಯು ಚೀನಾದ ಜಿಯಾಂಗ್ ಫುಮಿನ್ ಮತ್ತು ಜಾಂಗ್ ಟಿಯಾನ್‌ಹುಯಿ ವಿರುದ್ಧ 7-6(4), 6-7(7), 8-10 ಸೆಟ್‌ಗಳಿಂದ ರೋಚಕ ಹೋರಾಟ ನಡೆಸಿ ಸೋತಿತು. ಮತ್ತೊಂದೆಡೆ ಯುಕಿ ಭಾಂಬ್ರಿ ಮತ್ತು ದಕ್ಷಿಣೇಶ್ವರ್ ಸುರೇಶ್ ಜೋಡಿಯು ಚೈನೀಸ್ ತೈಪೆಯ ಹೋ ಚೆನ್-ಜುಯಿ ಮತ್ತು ಹ್ಸು ಯು-ಹ್ಸಿಯೊ ವಿರುದ್ಧ 6-7(5), 3-6 ಸೆಟ್‌ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿದೆ.

Must Read