October 1, 2026
Thursday, October 1, 2026
spot_img

ಪೈಲಟ್‌ ಸ್ಮಿತ್‌ ಮುಚ್ಚಲ್‌ ಆರೋಗ್ಯ ಸ್ಥಿತಿ ಹೇಗಿದೆ ? ಸೌದಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದುಬೈನಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈ ದುಬೈ ವಿಮಾನವನ್ನು ಸಹ ಪೈಲಟ್‌ ಪತನಗೊಳಿಸಲು ಪ್ರಯತ್ನಿಸಿದ್ದು, ಈ ವೇಳೆ ಕ್ಯಾಪ್ಟನ್‌ ಸ್ಮಿತ್ ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಸದ್ಯ ಕ್ಯಾಪ್ಟನ್‌ ಸ್ಮಿತ್‌ ಅವರನ್ನು ಸೌದಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಭಾರತೀಯ ಎಂಬೆಸ್ಸಿಯ ರಿಯಧ್‌ ಮಾಹಿತಿ ನೀಡಿದ್ದಾರೆ.

ನಾರ್ತ್‌ ವೆಸ್ಟರ್ನ್‌ ಸೌದಿ ಅರೇಬಿಯಾದ ತಾಬುಕ್‌ನ ಆಸ್ಪತ್ರೆಯೊಂದರಲ್ಲಿ ಕ್ಯಾಪ್ಟನ್‌ ಇದ್ದಾರೆ. ಶೀಘ್ರವೇ ಅವರು ಸಂಪೂರ್ಣವಾಗಿ ಗುಣಮುಖರಾಗುವ ನಿರೀಕ್ಷೆ ಇದೆ. ಡೀಟೇಲ್‌ ಆದ ಮೆಡಿಕಲ್‌ ಅಪ್ಡೇಟ್‌ ನಂತರ ನೀಡಲಾಗುತ್ತದೆ ಎಂದಿದ್ದಾರೆ.

ಡಿಪ್ಲಮಾಟಿಕ್‌ನ ಅಧಿಕಾರಿಗಳು ಮಚ್ಚರ್‌ ಅವರ ಕುಟುಂಬದ ಜೊತೆ ಸಂಪರ್ಕದಲ್ಲಿದ್ದಾರೆ. ಮಚ್ಚರ್‌ ಅವರಿಗೆ ಸಂಪೂರ್ಣ ಅತ್ಯುತ್ತಮ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅವರ ಆರೋಗ್ಯದ ಬಗೆಗಿನ ಪ್ರತಿ ಮಾಹಿತಿಯನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

ಸ್ಮಿತ್‌ ಮಚ್ಚರ್‌ ವಿಮಾನ ಚಾಲನೆ ಮಾಡುವ ವೇಳೆ ಸಹ ಪೈಲಟ್ ಚಿಕ್ಕ ಚಾಕುವಿನಿಂದ ಮನಬಂದಂತೆ ಅವರ ಮೇಲೆ ದಾಳಿ ನಡೆಸಿದ್ದಾರೆ. ಕಾಕ್‌ಪಿಟ್‌ನಲ್ಲಿರುವ ಒಂದು ಬಟನ್‌ ಒತ್ತಿದರೆ ಕಾಕ್‌ಪಿಟ್‌ನ ಬಾಗಿಲು ತೆರೆಯುತ್ತದೆ. ವಿಮಾನದ ಕಂಟ್ರೋಲ್‌ ಜೊತೆಯಲ್ಲಿ ಸ್ಮಿತ್‌ ಆ ಬಟನ್‌ ಒತ್ತಿದ್ದಾರೆ. ಚಾಕು ಗಾಯದಿಂದ ರಕ್ತ ಹರಿದು ಕಾಕ್‌ಪಿಟ್‌ನಿಂದ ಹೊರಗೆ ಬಂದಿದೆ.

ಅದಕ್ಕೆ ಗಮನಿಸಿದ ಸಿಬ್ಬಂದಿ ಹಾಗೂ ಧೈರ್ಯಶಾಲಿ ಜನರು ದುಷ್ಕರ್ಮಿಯನ್ನು ಹಿಡಿದಿದ್ದಾರೆ. ಸಿಬ್ಬಂದಿಯಲ್ಲಿ ಟ್ರೈನ್‌ ಆಗಿರುವ ಪೈಲಟ್‌ಗಳಿದ್ದು ವಿಮಾನವನ್ನು ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ. ವಿಮಾನದಲ್ಲಿದ್ದ ಜನರ ಪೈಕಿ ವೈದ್ಯರೊಬ್ಬರು ಇದ್ದ ಕಾರಣ ಸ್ಮಿತ್‌ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಜನರು ಸ್ಮಿತ್‌ ಅವರ ಫೋಟೊಗಳನ್ನು ಅಪ್‌ಲೋಡ್‌ ಮಾಡಿಕೊಂಡು, ನೂರಾರು ಜನರ ಪ್ರಾಣ ಉಳಿಸಿದ ಹೀರೋ ಇದೇ ತಮ್ಮ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ನಿಮ್ಮ ಪ್ರಾರ್ಥನೆಯಲ್ಲಿ ಸ್ಮಿತ್‌ ಅವರಿಗೂ ಒಂದು ಸ್ಥಾನ ನೀಡಿ ಎಂದು ಪೋಸ್ಟ್‌ ಮಾಡುತ್ತಿದ್ದಾರೆ.

Must Read