October 25, 2026
Sunday, October 25, 2026
spot_img

Food | ಕಡಲೆ ಹಿಟ್ಟು–ಅಕ್ಕಿ ಹಿಟ್ಟು ಇದ್ದರೆ ಸಾಕು ನಿಮಿಷದಲ್ಲಿ ರೆಡಿಯಾಗುತ್ತೆ ಕ್ರಿಸ್ಪಿ ಚಕ್ಕುಲಿ

ಮನೆಯಲ್ಲೇ ಇರುವ ಅಕ್ಕಿ ಹಿಟ್ಟು ಮತ್ತು ಕಡಲೆ ಹಿಟ್ಟಿನಿಂದ ಸುಲಭವಾಗಿ, ಕಡಿಮೆ ಸಮಯದಲ್ಲಿ ಗರಿಗರಿಯಾದ ಚಕ್ಕುಲಿ ತಯಾರಿಸಬಹುದು. ಸಂಜೆ ತಿಂಡಿಗೆ ಅಥವಾ ಹಬ್ಬದ ಸಂದರ್ಭಕ್ಕೆ ಇದು ಸರಳವಾದ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು

ಅಕ್ಕಿ ಹಿಟ್ಟು – 1 ಕಪ್
ಕಡಲೆ ಹಿಟ್ಟು – ½ ಕಪ್
ಜೀರಿಗೆ ಅಥವಾ ಓಮ – 1 ಸಣ್ಣ ಚಮಚ
ಎಳ್ಳು – 1 ಸಣ್ಣ ಚಮಚ
ಅರಿಶಿನ – ಚಿಟಿಕೆ
ಖಾರದ ಪುಡಿ – 1 ಸಣ್ಣ ಚಮಚ
ಬೆಣ್ಣೆ ಅಥವಾ ಬಿಸಿ ಎಣ್ಣೆ – 2 ದೊಡ್ಡ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಿರುವಷ್ಟು
ಎಣ್ಣೆ – ಕರಿಯಲು

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಜೀರಿಗೆ, ಎಳ್ಳು, ಅರಿಶಿನ, ಖಾರದ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಬೆಣ್ಣೆ ಅಥವಾ ಬಿಸಿ ಎಣ್ಣೆ ಸೇರಿಸಿ ಕೈಯಿಂದ ಚೆನ್ನಾಗಿ ತಿಕ್ಕಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಮೆದುವಾದ ಹಿಟ್ಟನ್ನು ಕಲಸಿ.

ಚಕ್ಕುಲಿ ಅಚ್ಚಿಗೆ ಸ್ವಲ್ಪ ಎಣ್ಣೆ ಸವರಿ, ಹಿಟ್ಟನ್ನು ತುಂಬಿ ಬಟ್ಟೆಯ ಮೇಲೆ ಸುರುಳಿಯಾಕಾರದಲ್ಲಿ ಒತ್ತಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಚಕ್ಕುಲಿಗಳನ್ನು ನಿಧಾನವಾಗಿ ಎಣ್ಣೆಗೆ ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಬದಿಯೂ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ.

ಕರಿದ ಚಕ್ಕುಲಿಗಳನ್ನು ತಣ್ಣಗಾದ ನಂತರ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ.

Must Read