ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಬರುವ ಲಕ್ಷಾಂತರ ಪ್ರವಾಸಿಗರಿಗೆ ರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಂಪರ್ ಕೊಡುಗೆ ನೀಡಿದೆ.
ದಸರಾಗೆಂದು ಮೈಸೂರಿಗೆ ತೆರಳಿದ ವೇಳೆ ಮಿಸ್ ಮಾಡದೇ ಗಿರಿದರ್ಶಿನಿ ಪ್ಯಾಕೇಜ್‌ನ್ನು ಪ್ರಕಟಿಸಲಾಗಿದೆ. ಕೇವಲ ಅಲ್ಪ ವೆಚ್ಚದಲ್ಲಿ ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಸುತ್ತಲು ಇದು ಸುವರ್ಣ ಅವಕಾಶವಾಗಿದೆ.
ಗಿರಿದರ್ಶಿನಿ ಪ್ಯಾಕೇಜ್ ವಿವರ
ಕಾಡು ಹಾಗೂ ಬೆಟ್ಟಗಳ ಸೌಂದರ್ಯ ಸವಿಯಲು ಇಷ್ಟಪಡುವವರಿಗಾಗಿ ಈ ಪ್ಯಾಕೇಜ್ ಸಿದ್ಧಪಡಿಸಲಾಗಿದೆ. ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಹಾಗೂ ಚಾಮುಂಡಿಬೆಟ್ಟಗಳನ್ನು ಇದು ಒಳಗೊಂಡಿದೆ. ಒಟ್ಟು 325 ಕಿಲೋಮೀಟರ್ ಪ್ರಯಾಣವಿರುವ ಈ ಟ್ರಿಪ್‍ಗೆ ಹಿರಿಯರಿಗೆ 400 ರೂ. ಹಾಗೂ ಮಕ್ಕಳಿಗೆ ಕೇವಲ 250 ರೂ. ದರ ನಿಗದಿಪಡಿಸಲಾಗಿದೆ.
ನೀರಿನಲ್ಲಿ ಆಟಾಡೋಕೆ ಇಷ್ಟನಾ?
ಕೊಡಗಿನ ಹಸಿರುಸಿರಿಯ ನಡುವೆ ಮೈಮರೆಯಲು ಬಯಸುವವರಿಗೆ ಇದು ಬೆಸ್ಟ್ ಚಾಯ್ಸ್. ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ, ಅಬ್ಬಿ ಜಲಪಾತ, ರಾಜಾಸೀಟ್ ಮತ್ತು ಹಾರಂಗಿ ಜಲಾಶಯವನ್ನು ಈ ಪ್ಯಾಕೇಜ್ ಮೂಲಕ ವೀಕ್ಷಿಸಬಹುದು. 350 ಕಿಲೋಮೀಟರ್ ಸುತ್ತಾಟದ ಈ ಪ್ರವಾಸಕ್ಕೆ ವಯಸ್ಕರಿಗೆ 450 ರೂ. ಮತ್ತು ಮಕ್ಕಳಿಗೆ 300 ರೂ. ಟಿಕೆಟ್ ದರವಿದೆ.
ದೇವದರ್ಶಿನಿ ಪ್ಯಾಕೇಜ್ ಕೂಡ ಇದೆ!
ದೈವಿಕ ಅನುಭೂತಿ ಮತ್ತು ಐತಿಹಾಸಿಕ ದೇವಾಲಯಗಳ ದರುಶನ ಪಡೆಯಲು ಇಚ್ಛಿಸುವವರಿಗಾಗಿ ದೇವದರ್ಶಿನಿ ರೂಪಿಸಲಾಗಿದೆ. ನಂಜನಗೂಡು, ತಲಕಾಡು, ಬ್ಲಫ್, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ ಮತ್ತು ಕೆಆರ್ ಎಸ್ ಅನ್ನು ಇದು ಒಳಗೊಂಡಿದೆ. 250 ಕಿಲೋಮೀಟರ್ ವ್ಯಾಪ್ತಿಯ ಈ ಟ್ರಿಪ್‍ಗೆ ದೊಡ್ಡವರಿಗೆ ಕೇವಲ 300 ರೂ. ಹಾಗೂ ಮಕ್ಕಳಿಗೆ 200 ರೂ. ನಿಗದಿಯಾಗಿದೆ.



