October 1, 2026
Thursday, October 1, 2026
spot_img

ಸಿಹಿ ತಿನ್ನೋ ಆಸೆಯಾ? ಕ್ಷಣಮಾತ್ರದಲ್ಲಿ ಸಿದ್ಧವಾಗುತ್ತೆ ಈ ಹೆಲ್ದಿ ಓಟ್ಸ್ ಪಾಯಸ

ಬೇಕಾಗುವ ಸಾಮಗ್ರಿಗಳು:

ಓಟ್ಸ್

ಹಾಲು

ಬೆಲ್ಲ

ತುಪ್ಪ

ಏಲಕ್ಕಿ ಪುಡಿ

ಗೋಡಂಬಿ, ದ್ರಾಕ್ಷಿ, ಬಾದಾಮಿ

ಬಾಣಲೆಯಲ್ಲಿ 1 ಚಮಚ ತುಪ್ಪ ಕಾಯಿಸಿ, ಗೋಡಂಬಿ, ದ್ರಾಕ್ಷಿ, ಬಾದಾಮಿಯನ್ನು ಹೊಂಬಣ್ಣಕ್ಕೆ ಹುರಿದು ಪಕ್ಕಕ್ಕಿಡಿ. ಅದೇ ಬಾಣಲೆಗೆ ಓಟ್ಸ್ ಹಾಕಿ 2 ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ಹುರಿದ ಓಟ್ಸ್‌ಗೆ ಹಾಲು ಸೇರಿಸಿ, ಸಣ್ಣ ಉರಿಯಲ್ಲಿ 4-5 ನಿಮಿಷ ಬೇಯಿಸಿ. ಓಟ್ಸ್ ಬೇಗನೆ ಮೆತ್ತಗಾಗುತ್ತದೆ. ಓಟ್ಸ್ ಬೆಂದ ನಂತರ ಬೆಲ್ಲ ಮತ್ತು ಏಲಕ್ಕಿ ಪುಡಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷ ಕುದಿಸಿ. ಒಲೆಯಿಂದ ಕೆಳಗಿಳಿಸಿ, ಮೇಲೆ ಹುರಿದಿಟ್ಟ ಗೋಡಂಬಿ, ದ್ರಾಕ್ಷಿ ಮತ್ತು ಉಳಿದ 1 ಚಮಚ ತುಪ್ಪ ಸೇರಿಸಿದರೆ ಬಿಸಿಬಿಸಿಯಾದ, ಕ್ರೀಮಿ ಓಟ್ಸ್ ಪಾಯಸ ಸವಿಯಲು ಸಿದ್ಧ!

Must Read