October 1, 2026
Thursday, October 1, 2026
spot_img

ಶ್ರೀಕಾಂತ್ ಶೆಟ್ಟಿ ಭಾಷಣಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ: ಕಲಬುರಗಿ ಹಿಂದೂ ಮಹಾಗಣಪತಿ ಸಮಿತಿ ಸ್ವಾಗತ

ಹೊಸದಿಗಂತ ವರದಿ ಕಲಬುರಗಿ:

ಹಿಂದೂ ಮಹಾಗಣಪತಿ ಉತ್ಸವದ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರ ಭಾಷಣಕ್ಕೆ ಷರತ್ತುಬದ್ಧ ಅನುಮತಿ ನೀಡಿರುವ ಕಲಬುರಗಿ ಹೈಕೋರ್ಟ್ ಆದೇಶವನ್ನು ಹಿಂದೂ ಮಹಾಗಣಪತಿ ಸಮಿತಿ ಸ್ವಾಗತಿಸಿದೆ ಎಂದು ಸಮಿತಿ ಅಧ್ಯಕ್ಷ ಶ್ರೀಮಂತ ರಾಜು ನವಲದಿ ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶದ ಮೂಲಕ ಕಾರ್ಯಕ್ರಮ ನಡೆಸಲು ವಿಧಿಸಲಾಗಿದ್ದ ನಿರ್ಬಂಧದ ಕುರಿತು ಸ್ಪಷ್ಟತೆ ದೊರೆತಂತಾಗಿದೆ. ನ್ಯಾಯಾಲಯ ವಿಧಿಸಿರುವ ಎಲ್ಲ ಷರತ್ತುಗಳನ್ನು ಸಮಿತಿ ಗೌರವದಿಂದ ಪಾಲಿಸಲಿದೆ. ಕಾರ್ಯಕ್ರಮವು ಶಾಂತಿಯುತವಾಗಿ ಹಾಗೂ ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ನಡೆಯಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದ್ದಾರೆ.

ಹಿಂದೂ ಮಹಾಗಣಪತಿ ಉತ್ಸವವು ಯಾವುದೇ ವ್ಯಕ್ತಿ ಅಥವಾ ಸಮುದಾಯದ ವಿರುದ್ಧ ದ್ವೇಷ ಮೂಡಿಸುವ ಉದ್ದೇಶ ಹೊಂದಿಲ್ಲ.ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸುವುದು ಸಮಿತಿಯ ಉದ್ದೇಶವಾಗಿದ್ದು, ನ್ಯಾಯಾಲಯ ಸೂಚಿಸಿರುವಂತೆ ಯಾವುದೇ ಪ್ರಚೋದನಕಾರಿ ಅಥವಾ ವೈಯಕ್ತಿಕ ನಿಂದನೆಯ ಮಾತುಗಳಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ನ್ಯಾಯಾಲಯದ ಆದೇಶವನ್ನು ಗೌರವಿಸಿ, ಅ.1ರ ಇಂದು ಸಂಜೆ 7 ಗಂಟೆಯಿಂದ 8-45ರ ಒಳಗಾಗಿ ಕಾರ್ಯಕ್ರಮವನ್ನು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಲಾಗುವುದು. ರಾಷ್ಟ್ರವಾದಿ ಶ್ರೀಕಾಂತ್ ಶೆಟ್ಟಿ ಕಾರ್ಕಳರವರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಎಲ್ಲರೂ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿ ಉತ್ಸವ ಯಶಸ್ವಿಯಾಗಲು ಸಹಕರಿಸಬೇಕು ಎಂದು ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ನವಲದಿ ಮನವಿ ಮಾಡಿದ್ದಾರೆ.

Must Read