October 2, 2026
Friday, October 2, 2026
spot_img

ಬಿಗ್‌ಬಾಸ್‌ ಪ್ರೋಮೋ ಔಟ್‌ | ಮನೆಗೆ ವಾಪಾಸ್‌ ಬಂದ ರಾಮ್‌ನ ʼತಾಂಡವʼ : ಮನೆಮಂದಿಗೆ ಚಳಿ ಬಿಡಿಸಿದ ನಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ಬಾಸ್‌ನಲ್ಲಿ ಫೈನಲ್‌ ಕಂಟೆಸ್ಟೆಂಟ್‌ ಆಗಬಹುದಿತ್ತು ಎಂದುಕೊಳ್ಳುತ್ತಿದ್ದ ನಟ ತಾಂಡವ್‌ ರಾಮ್‌ ಎಮರ್ಜೆನ್ಸಿ ಎಕ್ಸಿಟ್‌ ಪಡೆದಿದ್ದರು. ಇವರು ಹೊರಗೆ ಹೋಗಿದ್ದಕ್ಕೆ ಪ್ರತೀ ಕಂಟೆಸ್ಟೆಂಟ್‌ ಕೂಡ ಕಣ್ಣೀರಿಟ್ಟಿದ್ದರು. ಅವರು ಹೋಗೋಕೆ ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದರು. ಅದರಂತೆಯೇ ಈಗ ತಾಂಡವ್‌ ರಾಮ್‌ ವಾಪಾಸ್‌ ಆಗಿದ್ದಾರೆ. ಮನೆಯ ಕ್ಯಾಪ್ಟನ್‌ ಸ್ಥಾನವನ್ನು ಹೈಜಾಕ್‌ ಮಾಡಿಕೊಂಡು ತಾಂಡವ್‌ ರಾಮ್‌ ಸದ್ಯ ಕ್ಯಾಪ್ಟನ್‌ ಆಗಿದ್ದಾರೆ.

ಮನೆಮಂದಿ ನನ್ನನ್ನು ಸಾಫ್ಟ್‌ ಎಂದು ಬಳಸಿಕೊಂಡಿದ್ದಾರೆ. ಆದರೆ ನಾನೀಗ ಅದೇ ಸಾಫ್ಟ್‌ ತಾಂಡವ್‌ ಆಗಿಲ್ಲ. ಈ ಮನೆಯಲ್ಲಿ ನಾನಿರುವಷ್ಟೂ ದಿನ ನನ್ನಿಂದ ಒಳ್ಳೆತನವನ್ನು ಬಯಸಬೇಡಿ ಎಂದು ಗರಂ ಆಗಿದ್ದಾರೆ. ಎಪಿಸೋಡ್​ನ ವೀಕ್ಷಣೆ ಮಾಡಿದಂತೆ ಕಾಣಿಸುತ್ತಿದೆ. ಅವರು ಬರುತ್ತಿದ್ದಂತೆ ಕ್ಯಾಪ್ಟನ್ ಆಗಿದ್ದಾರೆ. ಇಷ್ಟೇ ಅಲ್ಲ ಯಾರ ಗುಣ ಹೇಗಿದೆ ಎನ್ನುವುದರ ಬೋರ್ಡ್​ ಸಿಕ್ಕಿಸಿದ್ದಾರೆ. ಸೌಂದರ್ಯಾ ಮುಖವಾಡ ಧರಿಸಿದ್ದಾರೆ ಎಂದು ತಾಂಡವ್ ಹೇಳಿದರೆ, ಆಸಿಯಾ ಸ್ನೇಹದಲ್ಲಿ ಲಾಭ ನೋಡುತ್ತಾರೆ ಎಂದು ಹೇಳಿದ್ದಾರೆ. ಇದಕ್ಕೆ ಆಸಿಯಾ ಗರಂ ಆಗಿದ್ದು, ಇದನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

ಸ್ನೇಹಿತರನ್ನು ಮಾಡಿಕೊಳ್ಳುವ ಮುನ್ನ ಯಾವ ಟಾಸ್ಕ್‌ಗೆ ಯಾರು ಸಹಾಯ ಆಗುತ್ತಾರೆ ಎನ್ನುವುದನ್ನು ಲೆಕ್ಕಾಚಾರ ಹಾಕಿ ನೀವು ಜನರನ್ನು ಬಳಕೆ ಮಾಡಿಕೊಳ್ಳುತ್ತೀರಿ ಎಂದು ತಾಂಡವ್‌ ಸ್ಟ್ರಾಂಗ್‌ ಆಗಿ ಹೇಳಿದ್ದಾರೆ. ಆದರೆ ಇದು ಆಸಿಯಾಗೆ ಸ್ವಲ್ಪವೂ ಇಷ್ಟವಾಗಿಲ್ಲ. ನನ್ನ ವ್ಯಕ್ತಿತ್ವದಲ್ಲಿ ಒಂದು ಸಣ್ಣ ಬದಲಾವಣೆಯೂ ಆಗಿಲ್ಲ ಎಂದು ಕೂಗಿ ಹೇಳಿದ್ದಾರೆ.

Must Read