ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ನಾಡಹಬ್ಬ ದಸರಾಗೆ ಬಹುತೇಕ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ ಎಂದು ಚಲನಚಿತ್ರ ಮಂಡಳಿ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಮಾಹಿತಿ ನೀಡಿದ್ದಾರೆ.
ಬಾರಿ ದಸರಾದಲ್ಲಿ ಕಲಾವಿದರು ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲರು ಭಾಗವಹಿಸುತ್ತಿದ್ದೇವೆ. ದಸರಾ ರಂಗು ತರುತ್ತಿದೆ. ಇದೇ ಮೊಟ್ಟಮೊದಲ ಬಾರಿಗೆ ಈ ಸಂಭ್ರಮ ನಡೆಯುತ್ತಿದೆ. ಎಲ್ ಇ ಡಿ ಯಲ್ಲಿ ಚಿತ್ರರಂಗ ನಡೆದು ಬಂದ ಹಾದಿಯನ್ನು ತೋರಿಸಲಾಗುತ್ತದೆ. ಎರಡು ಬಸ್‌ಗಳು ಸಹ ಇರುತ್ತದೆ. ಎರಡು ದಿನಗಳ ಕಾಲ ಚಿತ್ರೀಕರಣ ಸಹ ಇರುವುದಿಲ್ಲ. ರಾಕ್‌ಲೈನ್ ವೆಂಕಟೇಶ್ ಅವರಿಗೆ ಈ ಜವಾಬ್ದಾರಿಗಳನ್ನು ವಹಿಸಲಾಗಿದೆ. ಎಲ್ಲಾ ವ್ಯವಸ್ಥೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಡಲಿದೆ. ಕನ್ನಡ ಚಿತ್ರರಂಗದ ಎಲ್ಲರ ಪರವಾಗಿ ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇವೆ ಎಂದರು.
416 ನೇ ದಸರಾ. ಈ ಬಾರಿ ಅಂಬಾರಿ ಬಸ್ ನಲ್ಲಿ ಕಲಾವಿದರಿಗೆ ಅರಮನೆ ವೀಕ್ಷಣೆಗೆ ಅರಮನೆಯಲ್ಲಿ 150 ಕಲಾವಿದರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಅರಮನೆ ಮುಂಭಾಗದಲ್ಲೂ ಕಲಾವಿದರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕಲಾವಿದರ ಭದ್ರತೆಗೆ ಹೆಚ್ಚಿನ ವ್ಯವಸ್ಥೆ ಮಾಡಲಾಗಿದೆ. ಹದಿನೈದು ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಕಟ್ಟೆಚ್ಚರ ಇರಲಿದೆ. 45 ವರ್ಷಗಳಿಂದ ನಡೆಯುತ್ತಿದ್ದ ಚಲನಚಿತ್ರೋತ್ಸವ ಈ ಬಾರಿ ಇರುವುದಿಲ್ಲ. ಅದರ ಬದಲು ಕಲಾವಿದರಿಗೆ ಸಹಾಯಧನ ನೀಡಲು ಸಲಹೆ ನೀಡಿದ್ದೇವೆ. ಅನಂತನಾಗ್ ಅವರಿಂದ ದಸರಾ ಉದ್ಘಾಟನೆ ಮಾಡಿಸುವ ಆಶಯ ಸಹ ಇದ್ದು, ಮುಂದಿನ ದಿನಗಳಲ್ಲಿ ಮಾತುಕತೆ ನಡೆಸುತ್ತೇವೆ ಎಂದು ಸಾರಾ ಗೋವಿಂದು ತಿಳಿಸಿದರು.



