ಆನೆಗಳು ಸಾಮಾನ್ಯವಾಗಿ ಕಾರಣವಿಲ್ಲದೇ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಅವುಗಳಿಗೆ ಭಯ ಹುಟ್ಟಿಸುವ ಕೆಲಸ ಮಾಡಿದರೆ ಮಾತ್ರ ಅಟ್ಯಾಕ್ ಮಾಡುವ ಸಾಧ್ಯತೆಗಳು ಇವೆ. ಭಯ, ಆತ್ಮರಕ್ಷಣೆ ಮತ್ತು ತನ್ನ ಜಾಗ ಅಥವಾ ಮರಿಗಳನ್ನು ರಕ್ಷಣೆ ಮಾಡಬೇಕು ಎಂದುಕೊಂಡಾಗ ಮಾತ್ರ ಅವು ಅಟ್ಯಾಕ್ ಮಾಡುವ ಮೋಡ್ನಲ್ಲಿ ಇರುತ್ತವೆ.

ಆನೆಗಳು ಅಟ್ಯಾಕ್ ಮಾಡೋದ್ಯಾಕೆ?
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ವಾಕಿಂಗ್ ಹೊರಟಿದ್ದ ವ್ಯಕ್ತಿ ಆನೆ ದಾಳಿಗೆ ಬಲಿಯಾಗಿದ್ದರು. ಇಂತಹ ಪರಿಸ್ಥಿತಿಗಳಲ್ಲಿ ಸಿಕ್ಕಿ ಹಾಕಿಕೊಂಡಾಗ ಏನು ಮಾಡಬೇಕು ಎಂದು ತಿಳಿದುಕೊಂಡಿದ್ದರೆ ಒಂದಲ್ಲಾ ಒಂದು ದಿನ ಈ ವಿಚಾರಗಳು ಸಹಾಯಕ್ಕೆ ಬರುತ್ತವೆ.
ಆನೆ ತನ್ನ ಮರಿಗಳ ಜೊತೆ ಇದ್ದರೆ ಅದನ್ನು ಕೆಣಕಲು ಅಥವಾ ಫೋಟೊ ತೆಗೆದುಕೊಳ್ಳುವ ಸಾಹಸ ಮಾಡಬೇಡಿ. ತನ್ನಮರಿಗೆ ಸಣ್ಣ ಸಮಸ್ಯೆ ಇದೆ ಎಂದು ಗೊತ್ತಾದರೂ ತಾಯಿ ಆನೆ ರಕ್ಷಣೆಗೆ ಮುಂದೆ ಬರುತ್ತದೆ. ಕೆಲವೊಮ್ಮೆ ನೀವು ನಿರೀಕ್ಷೆಯೇ ಮಾಡದ ಜಾಗದಲ್ಲಿ ಆನೆಗಳು ಕಾಣಿಸಬಿಡುತ್ತವೆ. ನೀವು ಅದನ್ನು ನೋಡಿ ಹೇಗೆ ಹೆದರುತ್ತೀರೋ ಅದು ನಿಮ್ಮನ್ನು ನೋಡಿ ಹೆದರುತ್ತದೆ. ಭಯಕ್ಕೆ ಏನು ಮಾಡಬೇಕು ಗೊತ್ತಾಗದೇ ಅಟ್ಯಾಕ್ ಮಾಡುತ್ತದೆ. ಇನ್ನು ಕಾಡಿನಲ್ಲಿ ಆಹಾರ ಅಥವಾ ನೀರಿನ ಕೊರತೆ ಇದ್ದರೆ ಬೆಳೆ ಪ್ರದೇಶಗಳಿಗೆ ಬಂದಾಗ ಇದು ನಮ್ಮ ಜಾಗ ಅಲ್ಲ ಎಂದು ಆನೆಗಳಿಗೆ ತಿಳಿದಿರುತ್ತದೆ. ಅದು ಸದಾ ಅಟ್ಯಾಕ್ ಫೇಸ್ನಲ್ಲಿಯೇ ಇರುತ್ತದೆ. ಸುಮ್ಮನಿರುವ ಆನೆಗಳಿಗೆ ಕಲ್ಲು ಹೊಡೆಯುವುದು, ಕೂಗುವುದು, ಹತ್ತಿರ ಹೋಗುವುದು ವಾಹನದಿಂದ ಬೆನ್ನಟ್ಟುವುದು ಉತ್ತಮವಲ್ಲ. ಗಂಡು ಆನೆಗಳ ಮಸ್ತ್ ಅವಧಿಯಲ್ಲಿ ಅದರ ಟೆಸ್ಟೆಸ್ಟರೋನ್ ಲೆವೆಲ್ ಅತಿಯಾಗಿರುತ್ತದೆ. ಈ ಸಮಯ ಅವುಗಳ ಹತ್ತಿರ ಹೋಗದೇ ಇರುವುದು ಉತ್ತಮ.

ಆನೆಗಳು ಕಾಣಿಸಿದಾಗ ಏನು ಮಾಡಬೇಕು?
ತಾಳ್ಮೆಯಿಂದಿರಿ, ಸ್ಟ್ರೆಸ್ ಮಾಡಿಕೊಳ್ಳಬೇಡಿ. ಆನೆಯಿಂದ ನಿಧಾನಕ್ಕೆ ನಿಮ್ಮನ್ನು ನೀವು ದೂರ ಮಾಡಿಕೊಳ್ಳಿ. ಫೋಟೊ ವಿಡಿಯೋಗಳಿಂದ ದೂರ ಇರಿ. ಕಿರುಚುವುದು, ಅದನ್ನೇ ಓಡಿಸಲು ಪ್ರಯತ್ನಿಸುವುದು ಮಾಡಬೇಡಿ. ನಿಧಾನಕ್ಕೆ ಒಂದೊಂದೆ ಹೆಜ್ಜೆ ಹಿಂದಕ್ಕೆ ಇಡುತ್ತಾ ಸೇಫಾದ ರಸ್ತೆಗೆ ಹೋಗಿ. ಆನೆಗಳಿಗೆ ಝಿಗ್ ಝ್ಯಾಗ್ ಓಡುವುದು ಕಷ್ಟ. ಆ ರೀತಿ ನಿಧಾನಕ್ಕೆ ನಡೆದು ಹೋಗಿದೆ. ನೀವು ವಾಹನದ ಒಳಗೆ ಇದ್ದರೆ ವಾಹನದ ಒಳಗೆಯೇ ಇರಿ. ಆನೆಗಳ ಮರಿಗಳನ್ನು ಮುಟ್ಟಬೇಡಿ. ಮನೆಯ ಬಳಿ ಆನೆ ಕಾಣಿಸಿದರೆ ಸದ್ದು ಇಲ್ಲದಂತೆಯೇ ಒಳಗೇ ಇರಿ. ತಕ್ಷಣ ಫಾರೆಸ್ಟ್ ಡಿಪಾರ್ಟ್ಮೆಂಟ್ಗೆ ಕರೆ ಮಾಡಿ.
ಆನೆ ನಿಮ್ಮ ಬಳಿಯೇ ಬರುತ್ತಿದೆ ಎಂದುಕೊಳ್ಳಿ. ನೀವು ಆನೆಯನ್ನು ನೋಡುವುದು, ಅದನ್ನು ಡಿಸ್ಟ್ರಾಕ್ಟ್ ಮಾಡಲು ಕಲ್ಲೆಸೆಯುವುದು, ಅಥವಾ ಫೈಟ್ ಮಾಡುವ ತಂತ್ರಕ್ಕೆ ಇಳಿಯುವುದು ತಪ್ಪು. ನಿಧಾನಕ್ಕೆ ಸದ್ದಿಲ್ಲದಂತೆಯೇ ಹೊರಡುವುದು ಸೂಕ್ತ. ಯಾರಾದರೂ ಆನೆ ದಾಳಿಯಿಂದ ಗಾಯಗೊಂಡರೆ ತಕ್ಷಣ ಮೆಡಿಕಲ್ ಎಮರ್ಜೆನ್ಸಿ ಸರ್ವೀಸ್ಗಳಿಗೆ ಕರೆ ಮಾಡಿ.
ಎಲ್ಲದಕ್ಕಿಂತ ಉತ್ತಮವೆಂದರೆ ಇಂಥ ಸಂದರ್ಭಗಳಲ್ಲಿ ನಿಮ್ಮನ್ನು ನೀವು ಸಿಕ್ಕಿಹಾಕಿಕೊಳ್ಳಬೇಡಿ. ಝೂ ಅಥವಾ ಸಫಾರಿಗಳಿಗೆ ಹೋದಾಗ ಗಾಡಿಯಲ್ಲಿ ಕುಳಿತು ಒಂದು ಸಣ್ಣ ಸದ್ದು ಮಾಡದಂತೆ ಕಾಡು ಪ್ರಾಣಿಗಳನ್ನು ದೂರದಿಂದಲೇ ಕಣ್ತುಂಬಿಕೊಂಡು ಹೊರಟುಬಿಡಿ.



