October 3, 2026
Saturday, October 3, 2026
spot_img

ರಚಿತಾ ರಾಮ್‌ ಕೆನ್ನೆ ಗುಳಿ ಮುಟ್ಟಿ ಓಡಿ ಹೋದ ಫ್ಯಾನ್‌: ನಮ್ಮೆಲ್ಲರ ಆಸೆ ಈಡೇರಿಸಿಬಿಟ್ಟೆ ಎಂದ ನೆಟ್ಟಿಗರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಚಿತಾ ರಾಮ್‌ ತಮ್ಮ ಗುಳಿಕೆನ್ನೆಯಿಂದಲೇ ಹುಡುಗರ ಮನಸ್ಸನ್ನು ಕದ್ದ ಹುಡುಗಿ. ಎಲ್ಲ ರಚಿತ ರಾಮ್‌ ಫ್ಯಾನ್ಸ್‌ಗಳದ್ದೂ ಒಂದೇ ಆಸೆ ನಾವು ಒಂದು ಬಾರಿಯಾದ್ರೂ ಅವರ ಕೆನ್ನೆಯ ಗುಳಿಯನ್ನು ಮುಟ್ಟಬೇಕು. ಕಡೇಪಕ್ಷ ಹತ್ತಿರದಿಂದ ನೋಡಬೇಕು! ಈ ಕೆಲಸವನ್ನು ಫ್ಯಾನ್‌ ಒಬ್ಬ ಮಾಡಿಯೇ ಬಿಟ್ಟಿದ್ದಾನೆ.

ಕಾರ್ಯಕ್ರಮವೊಂದರ ನಂತರ ನಟಿ ರಚಿತಾ ರಾಮ್‌ ಫ್ಯಾನ್ಸ್‌ ಜೊತೆ ಸೆಲ್ಫಿಗೆ ಅವಕಾಶ ನೀಡಿದ್ದಾರೆ. ಫ್ಯಾನ್ಸ್‌ ಹಾಗೂ ನಟಿಯ ನಡುವೆ ಒಂದು ದಾರವನ್ನೂ ಕಟ್ಟಲಾಗಿದೆ. ಫ್ಯಾನ್ಸ್‌ ಜೋಶ್‌ನಲ್ಲಿ ಮೈಮೇಲೆ ಬೀಳೋದು, ಅನುಚಿತವಾಗಿ ವರ್ತಿಸೋದನ್ನು ತಡೆಯೋದಕ್ಕೆ ಹೀಗೆ ಮಾಡಲಾಗಿತ್ತು. ನಟಿ ರಚಿತಾ ಬಳಿ ಫ್ಯಾನ್‌ ಒಬ್ಬ ಆಗಮಿಸಿ ಸೆಲ್ಫಿ ಕೇಳಿದ್ದಾನೆ.

ಆಗ ಅವರು ಒಕೆ ಎಂದು ಫೋಟೊಗೆ ಸ್ಮೈಲ್‌ ನೀಡಿದ್ದಾರೆ. ನಂತರ ಮುಂದೆ ಹೋಗುವ ಮುನ್ನ ಸ್ಮೈಲ್‌ ಮಾಡುತ್ತಿದ್ದ ರಚಿತಾ ರಾಮ್‌ ಅವರ ಕೆನ್ನೆಯನ್ನು ಮುಟ್ಟಿದ್ದಾನೆ. ಕ್ಷಣದಲ್ಲಿ ರಚಿತಾ ರಾಮ್‌ ಆತಂಕಕ್ಕೊಳಗಾಗಿದ್ದಾರೆ. ಇಷ್ಟು ಜನರ ಮಧ್ಯದಲ್ಲಿ ಈ ರೀತಿ ನನ್ನ ಕೆನ್ನೆ ಮುಟ್ಟಿದ್ದಾನಲ್ಲ ಎಂದು ಗರಂ ಆಗಿದ್ದಾರೆ. ಆದರೆ ಕ್ಷಣದಲ್ಲೇ ಕ್ಯೂಟ್‌ ಆದ ಸ್ಮೈಲ್‌ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದ್ದು, ಅಭಿಮಾನಿಗಳು ನಮ್ಮೆಲ್ಲರ ಆಸೆಯನ್ನು ಇವನು ತೀರಿಸಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಇದೆಲ್ಲ ತಪ್ಪು ಪರ್ಮಿಷನ್‌ ಇಲ್ಲದೇ ಯಾರನ್ನೂ ಮುಟ್ಟಬಾರದು. ಅವರೇನೋ ಸುಮ್ಮನಿದ್ದಾರೆ. ಬೇರೆ ಯಾರಾದ್ರು ಆಗಿದ್ದರೆ ಇಷ್ಟೊತ್ತಿಗೆ ಸೆಕ್ಯುರಿಟಿ ಕಳಿಸಿ ಒದೆ ಕೊಡಿಸಿರುತ್ತಿದ್ದರು ಎಂದು ಹೇಳಿದ್ದಾರೆ. ಅವನನ್ನು ಹುಡುಕಿ ಕ್ಷಮೆ ಕೇಳಿಸಬೇಕಿತ್ತು. ಇದನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಹುಡುಗರೆಲ್ಲ ನಟಿಯರ ಕೆನ್ನೆ ಮುಟ್ಟೋಕೆ ಯತ್ನಿಸುತ್ತಾರೆ ಎಂದು ಕಮೆಂಟ್‌ ಮಾಡಿದ್ದಾರೆ.

Must Read