ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ಜನ್‌ನ ರಾಷ್ಟ್ರೀಯ ಹೆದ್ದಾರಿ-48 ರಲ್ಲಿರುವ ಸಿಎನ್‌ಜಿ ಪಂಪ್‌ನಲ್ಲಿ ಕಾರಿಗೆ ಸಿಎನ್‌ಜಿ ತುಂಬಿಸುತ್ತಿದ್ದಾಗ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ಪಂಪ್‌ನಲ್ಲಿದ್ದ ಸಿಬ್ಬಂದಿ ಮತ್ತು ಸಾರ್ವಜನಿಕರು ಭಯದಿಂದ ಓಡಿಹೋಗಿದ್ದಾರೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ಬಳಿಕ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪಕ್ಕದಲ್ಲಿದ್ದ ಎರಡು ಕಾರುಗಳಿಗೂ ಸ್ಫೋಟದಿಂದ ಹಾನಿಯಾಗಿದೆ.
ಸ್ಫೋಟದ ತೀವ್ರತೆಗೆ ಕಾರಿನ ಲೋಹದ ಭಾಗಗಳು ಮತ್ತು ಗಾಜಿನ ಚೂರುಗಳು ತುಂಬಾ ದೂರದವರೆಗೆ ಹಾರಿ ಬಿದ್ದಿದ್ದವು. ಕಾರಿನಲ್ಲಿ ಯಾರು ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರುನಲ್ಲಿ ಯಾರಾದರೂ ಇದ್ದಿದ್ದರೆ ಪ್ರಾಣ ಹಾನಿಯಾಗುವ ಸಂಭವ ಇರುತ್ತಿತ್ತು.
ಸದ್ಯ ಅಧಿಕಾರಿಗಳು ಹಾಗೂ ಪೊಲೀಸರು ಘಟನೆಯನ್ನು ಪರಿಶೀಲಿಸುತ್ತಿದ್ದಾರೆ.



