October 3, 2026
Saturday, October 3, 2026
spot_img

ಅರಮನೆ ಮುಂಭಾಗದಲ್ಲಿ ಧರೆಗುರುಳಿದ ಬೃಹತ್ ಕಟೌಟ್: ತಪ್ಪಿದ ಭಾರೀ ಅನಾಹುತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಅರಮನೆ ನಗರಿಯಲ್ಲಿ ಅನಿರೀಕ್ಷಿತ ಅವಘಡವೊಂದು ಸಂಭವಿಸಿದೆ.

ಏಕಾಏಕಿ ಕುಸಿದು ಬಿದ್ದ ಕಟೌಟ್

ಅರಮನೆ ಮುಂಭಾಗದ ಜೆಎಸ್‌ಎಸ್ ಮಹಾವಿದ್ಯಾಪೀಠ ವೃತ್ತದ ಸಮೀಪ ಅಳವಡಿಸಲಾಗಿದ್ದ ಬೃಹತ್ ಅಲಂಕಾರಿಕ ಬೆಳಕಿನ ಕಟೌಟ್ ಶನಿವಾರ ಏಕಾಏಕಿ ಕುಸಿದು ಟೂರಿಸ್ಟ್ ಟೆಂಪೋ ಟ್ರಾವೆಲರ್ ವಾಹನದ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಘಟನೆಯ ವೇಳೆ ವಾಹನದಲ್ಲಿದ್ದ ವಿದ್ಯಾರ್ಥಿಗಳು ಹೊರಗಿದ್ದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದನ್ನೂ ಓದಿ:

ದಸರಾ ಹಿನ್ನೆಲೆಯಲ್ಲಿ ಮೈಸೂರಿನ ಪ್ರಮುಖ ರಸ್ತೆಗಳು ಹಾಗೂ ಪ್ರವಾಸಿ ತಾಣಗಳ ಸುತ್ತಮುತ್ತ ಅಲಂಕಾರಿಕ ವಿದ್ಯುತ್ ದೀಪಗಳು, ಕಟೌಟ್‌ಗಳು ಹಾಗೂ ವಿವಿಧ ಕಲಾಕೃತಿಗಳನ್ನು ಅಳವಡಿಸಲಾಗುತ್ತಿದೆ. ಇದೇ ರೀತಿಯಾಗಿ ಅರಮನೆ ಮುಂಭಾಗದ ಪ್ರದೇಶದಲ್ಲೂ ಬೃಹತ್ ಬೆಳಕಿನ ಕಟೌಟ್‌ವೊಂದನ್ನು ಸ್ಥಾಪಿಸಲಾಗಿತ್ತು.

ತಪ್ಪಿದ ಅನಾಹುತ

ಘಟನೆ ನಡೆದ ಸಂದರ್ಭದಲ್ಲಿ ಪ್ರವಾಸಿ ವಾಹನದಲ್ಲಿ ವಿದ್ಯಾರ್ಥಿಗಳ ತಂಡವಿತ್ತು ಎನ್ನಲಾಗಿದೆ. ಅವರು ಅರಮನೆಯನ್ನು ವೀಕ್ಷಿಸಲು ವಾಹನದಿಂದ ಕೆಳಗಿಳಿದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಕಟೌಟ್ ಕುಸಿದ ರಭಸಕ್ಕೆ ವಾಹನದ ಮೇಲ್ಭಾಗಕ್ಕೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ವಿದ್ಯಾರ್ಥಿ ಅಥವಾ ಸಾರ್ವಜನಿಕರಿಗೆ ಗಾಯಗಳಾಗಿಲ್ಲ.

ಅವಘಡದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ರಸ್ತೆಯಲ್ಲಿ ಬಿದ್ದಿದ್ದ ಕಟೌಟ್‌ನ ಅವಶೇಷಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡರು.

Must Read