October 4, 2026
Sunday, October 4, 2026
spot_img

ಫಿಟ್ & ಫುಡ್ 04 | ಬೆಳಗಿನ ತಿಂಡಿಗೆ ಬೆಸ್ಟ್‌ ಚಾಯ್ಸ್:‌ ಒಮ್ಮೆ ಟ್ರೈ ಮಾಡಿ ಈ  ಮೃದುವಾದ ರಾಗಿ ಇಡ್ಲಿ

ರಾಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ನಮಗೆ ಗೊತ್ತು, ಆದರೆ ಅದರಿಂದ ಮುದ್ದೆ ಅಥವಾ ರೊಟ್ಟಿ ಮಾಡುವುದು ಎಲ್ಲರಿಗೂ ಅಷ್ಟು ಸುಲಭವಲ್ಲ. ಹಾಗಾಗಿ, ರಾಗಿಯಿಂದ ಸುಲಭವಾಗಿ ಮಾಡಬಹುದಾದ ಇನ್ಸ್ಟಂಟ್ ರಾಗಿ ಇಡ್ಲಿ ಹೇಗೆ ಮಾಡೋದು ಎಂದು ನೋಡೋಣ.

ಬೇಕಾಗುವ ಸಾಮಗ್ರಿಗಳು

ರಾಗಿ ಹಿಟ್ಟು

ಉಪ್ಪಿಟ್ಟು ರವೆ

ಮೊಸರು

ನೀರು

ಅಡುಗೆ ಸೋಡಾ

ಉಪ್ಪು

ಎಣ್ಣೆ

ಸಾಸಿವೆ

ಕಡಲೆಬೇಳೆ

ಕರಿಬೇವು

ಮಾಡುವ ವಿಧಾನ

ಮೊದಲುಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಕಾಯಿಸಿ ಸಾಸಿವೆ, ಕಡಲೆಬೇಳೆ ಹಾಗೂ ಕರಿಬೇವು ಒಗ್ಗರಣೆ ಮಾಡಿ. ಅದಕ್ಕೆ ಉಪ್ಪಿಟ್ಟು ರವೆ ಹಾಕಿ, ಸಣ್ಣ ಉರಿಯಲ್ಲಿ 2 ನಿಮಿಷ   ಹುರಿಯಬೇಕು. ನಂತರ ಒಂದು ಅಗಲವಾದ ಪಾತ್ರೆಯಲ್ಲಿ ರಾಗಿ ಹಿಟ್ಟು, ಹುರಿದಿಟ್ಟುಕೊಂಡ ರವೆ, ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ, ಮಾಮೂಲಿ ಇಡ್ಲಿ ಹಿಟ್ಟಿನಂತೆ ಕಲಸಿಕೊಂಡು, 15 ನಿಮಿಷ ಮುಚ್ಚಿ ನೆನೆಯಲು ಬಿಡಬೇಕು.

ಬಳಿಕ ಇಡ್ಲಿ ಪಾತ್ರೆಯಲ್ಲಿ ನೀರು ಕಾಯಲು ಇಟ್ಟು, ಇಡ್ಲಿ ತಟ್ಟೆಗಳಿಗೆ ಎಣ್ಣೆ ಸವರಿ, ಇಡ್ಲಿ ಹಿಟ್ಟಿಗೆ ಅರ್ಧ ಚಮಚ ಅಡುಗೆ ಸೋಡಾ ಹಾಕಿ ಕೈಯಾಡಿಸಬೇಕು. ನಂತರ ಹಿಟ್ಟನ್ನು ಇಡ್ಲಿ ತಟ್ಟೆಗಳಿಗೆ ಹಾಕಿ, ಇಡ್ಲಿ ಪಾತ್ರೆಯಲ್ಲಿಟ್ಟು 10 ರಿಂದ 12 ನಿಮಿಷ ಮಧ್ಯಮ ಉರಿಯಲ್ಲಿ ಆವಿಯಲ್ಲಿ ಬೇಯಿಸಿದರೆ ಮೃದುವಾದ ರಾಗಿ ಇಡ್ಲಿ ಸಿದ್ಧ.

Must Read